ತಿರುವನಂತಪುರಂ (ಕೇರಳ) – ನವೆಂಬರ್ ೧೬ ರಿಂದ ಆರಂಭವಾಗಲಿರುವ ಶಬರಿಮಲೆ ದೇವಸ್ಥಾನದ ದರ್ಶನಕ್ಕಾಗಿ ಇನ್ನು ಒಂದು ತಿಂಗಳು ಬಾಕಿ ಇದೆ. ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶದ ಬಗ್ಗೆ ರಾಜ್ಯ ಸರಕಾರವು ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರಕ್ಕೆ ವಿವಿಧ ಹಿಂದೂ ಸಂಘಟನೆಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿವೆ. ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಈ ಆಕ್ಷೇಪವನ್ನು ವ್ಯಕ್ತಪಡಿಸಲಾಯಿತು. ಈ ಸಭೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಭಾಜಪ ಬೆಂಬಲಿತ ಹಿಂದೂ ಸಂಘಟನೆಯ ಪ್ರಕಾರ, ‘ಪ್ರಧಾನ ಅರ್ಚಕ, ಪಂಡಲಮ್ ರಾಜವಂಶದ ಸದಸ್ಯರು, ಹಿಂದೂ ಸಂಘಟನೆಗಳು, ಭಕ್ತರು ಹಾಗೂ ಸೇವಾ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಅನೇಕರ ಸಲಹೆಯನ್ನು ಪಡೆದ ನಂತರವೇ ಸರಕಾರವು ಭಕ್ತರಿಗೆ ಅವಕಾಶ ನೀಡುವ ವಿಷಯದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿವೆ.
SABARIMALA TEMPLE OPENING:Hindu groups are of the view that a final decision on permitting the devotees should be taken…
Posted by S J R Kumar on Tuesday, 13 October 2020
೧. ‘ಅಖಿಲ ಭಾರತೀಯ ಶಬರಿಮಲಾ ಕೃತಿ ಪರಿಷತ್ತಿ’ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಆರ್. ಕುಮಾರ್ ಇವರು, ರಾಜ್ಯ ಸರಕಾರವು ಸಂಬಂಧಪಟ್ಟ ಮಂತ್ರಿಗಳು ಮತ್ತು ಅಧಿಕಾರಿಗಳ ಒಂದು ಸಮಿತಿಯನ್ನು ರಚಿಸಿ ಕೇವಲ ಅವರ ಅಭಿಪ್ರಾಯಗಳನ್ನು ಮಾತ್ರ ಪರಿಗಣಿಸುವುದಲ್ಲ ಎಂದು ಹೇಳಿದರು. ಇದು ಸಂಪೂರ್ಣವಾಗಿ ಸಂವಿಧಾನಬಾಹಿರವಾಗಿದೆ. ಪ್ರಸ್ತುತ ಸಮಿತಿಗೆ ನೇಮಕಗೊಂಡ ಕಾರ್ಯದರ್ಶಿಗ???? ದೇವಸ್ಥಾನದ ದಿನನಿತ್ಯದ ಕಾರ್ಯಕಲಾಪಗಳಿಗೆ ಯಾವುದೇ ಸಂಬಂಧವಿಲ್ಲ. ಇತರ ಧರ್ಮಗಳ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯ ಸರಕಾರದಿಂದ ಆಯಾ ಧರ್ಮದ ಪ್ರತಿನಿಧಿಗಳಿಗೆ ತಮ್ಮದೇ ಆದ ಪದ್ಧತಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆಗ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೃತಿ ಮಾಡಲಾಯಿತು. ಆದರೆ ಹಿಂದೂ ದೇವಸ್ಥಾನಗಳ ಬಗ್ಗೆ ಮಾತ್ರ ರಾಜ್ಯ ಸರಕಾರವು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದು ಸಂಪೂರ್ಣವಾಗಿ ಅಸಂವಿಧಾನಿಕ ನಿರ್ಧಾರ ಹಾಗೂ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರದ ಹಿಂದೂ ವಿರೋಧಿ ದೃಷ್ಟಿಕೋನವಾಗಿದೆ ಎಂದು ಹೇಳಿದರು.
೨. ಚರ್ಚೆಯಲ್ಲಿ ಹೆಚ್ಚಿನ ಸದಸ್ಯರ ಅಭಿಪ್ರಾಯ ಹೇಗಿತ್ತು ಎಂದರೆ, ಕರೋನಾ ಸಾಂಕ್ರಾಮಿಕ ರೋಗವು ಹೆಚ್ಚಾಗುತ್ತಿರುವಾಗ ಸರಕಾರವು ಪ್ರಸಕ್ತ ಹಂಗಾಮಾದಲ್ಲಿ ಶ್ರೀ ಅಯ್ಯಪ್ಪ ಭಕ್ತರ ಆಗಮನವನ್ನು ತಡೆಗಟ್ಟಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು; ಏಕೆಂದರೆ ದೇವಸ್ಥಾನದ ಪ್ರದೇಶದಲ್ಲಿ ಸಾವಿರಾರು ಭಕ್ತರು ಜಮಾಯಿಸಿದರೆ ಆರೋಗ್ಯಕ್ಕೆ ಅಪಾಯವಾಗಬಹುದು. ಇದರೊಂದಿಗೆ ದೇವಸ್ಥಾನದ ಪಾವಿತ್ರ್ಯಕ್ಕೂ ಅಪಾಯವಾಗದಂತಹ ರೀತಿಯಲ್ಲಿ ಸರಕಾರವು ಅತ್ಯವಶ್ಯಕ ವಿಧಿಗಳನ್ನು ಆಯೋಜಿಸುವ ಬಗ್ಗೆಯೂ ವಿಚಾರ ಮಾಡಬೇಕು ಎಂದು ಹೇಳಿದೆ.