ರಸ್ತೆಗಳು, ಫುಟ್‌ಪಾತ್‌ಗಳು ಮತ್ತು ರೈಲು ಮಾರ್ಗಗಳಲ್ಲಿನ ಅಕ್ರಮ ನಿರ್ಮಾಣದ ವಿರುದ್ಧದ ಕ್ರಮಗಳನ್ನು ಹೊರತುಪಡಿಸಲಾಗಿದೆ !
ನವದೆಹಲಿ – ಅಕ್ಟೋಬರ್ 1 ರವರೆಗೆ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. “ಇನ್ನು ಮುಂದೆ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಬಾರದು”, ಎಂದು ನ್ಯಾಯಾಲಯ ಹೇಳಿದೆ; ಆದರೆ, ಈ ಆದೇಶದಲ್ಲಿ ರಸ್ತೆ, ಫುಟ್ ಪಾತ್ ಹಾಗೂ ರೈಲ್ವೆ ಹಳಿಗಳ ಮೇಲೆ ಅಕ್ರಮ ನಿರ್ಮಾಣದ ವಿರುದ್ಧ ಕ್ರಮ ಒಳಗೊಂಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 1 ರಂದು ನಡೆಯಲಿದೆ.
1. ಈ ಆದೇಶದ ಕುರಿತು ಕೇಂದ್ರ ಸರಕಾರದ ಪರ ನ್ಯಾಯವಾದಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ, ‘ಇಂತಹ ಆದೇಶಗಳಿಂದ ಸಾಂವಿಧಾನಿಕ ಸಂಸ್ಥೆಗಳ ಕೈಗಳನ್ನು ಕಟ್ಟಲಾಗುವುದಿಲ್ಲ’ ಎಂದು ಹೇಳಿದರು.
2. ಇದಕ್ಕೆ ನ್ಯಾಯಾಲಯವು ‘2 ವಾರಗಳ ಕಾಲ ಕಾರ್ಯ ಸ್ಥಗಿತಗೊಳಿಸಿದರೆ ಆಕಾಶ ತಲೆ ಕೆಳಗಾಗುವುದಿಲ್ಲ. ನೀವು ಕ್ರಮವನ್ನು ನಿಲ್ಲಿಸಿ, 15 ದಿನಗಳಲ್ಲಿ ಏನಾಗುತ್ತದೆ ?, ಎಂದು ಸುಪ್ರೀಂ ಕೋರ್ಟ್ ಅವರನ್ನು ಸುಮ್ಮನಾಗಿಸಿತು.
3. ಕಳೆದ ಕೆಲವು ತಿಂಗಳುಗಳಿಂದ ಉತ್ತರ ಪ್ರದೇಶ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಆರೋಪಿಗಳ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗುತ್ತಿದೆ. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.