‘ದೆಹಲಿಯವರು ಕಸಿದುಕೊಂಡದ್ದನ್ನು, ಮರಳಿ ಪಡೆಯುವೆವು !’

  • ಮತಾಂಧ ಮೆಹಬೂಬಾ ಮುಫ್ತಿಯವರಿಂದ ಮೋದಿ ಸರಕಾರಕ್ಕೆ ಎಚ್ಚರಿಕೆ ಹಾಗೂ ಮತಾಂಧರಿಗೆ ಪ್ರಚೋದನೆ
  • ೧೪ ತಿಂಗಳ ನಂತರ ಗೃಹಬಂಧನದಿಂದ ಬಿಡುಗಡೆಯಾದ ಮುಫ್ತಿ
  • ಅಕ್ರಮವಾಗಿ ಕಸಿದುಕೊಂಡ ಕಲಂ ೩೭೦ ಅನ್ನು ಹಿಂಪಡೆಯಲು ನಿರ್ಧಾರ ಮಾಡುವಂತೆ ಕರೆ

ಇಂತಹ ಬೆದರಿಕೆಗಳನ್ನು ಹಾಕುವ ಮೂಲಕ ಮೆಹಬೂಬಾ ಮುಫ್ತಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲು ಹಾಕುತ್ತಿದ್ದಾರೆ. ಸರಕಾರವು ಅವರನ್ನು ಗೃಹಬಂಧನದಲ್ಲಿ ಅಲ್ಲ; ಜೀವಾವಧಿ ಶಿಕ್ಷೆ ವಿಧಿಸಿ ಕಾರಾಗೃಹಕ್ಕೆ ದೂಡಬೇಕು ಎಂದು ಯಾರಿಗಾದರು ಅನಿಸಿದರೆ ಅದರಲ್ಲಿ ತಪ್ಪೇನಿದೆ ?

ಸಂಸತ್ತಿನಲ್ಲಿ ಬಹುಮತದಿಂದ ಅಂಗೀಕರಿಸಿದ ನಿರ್ಧಾರವನ್ನು ‘ಕಾನೂನುಬಾಹಿರ’ ಎಂದು ಹೇಳುವುದು, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಲ್ಲವೇ ? ಸರಕಾರವು ಮುಫ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಶ್ರೀನಗರ – ‘ದೆಹಲಿಯವರು ಕಸಿದುಕೊಂಡದ್ದನ್ನು, ಮರಳಿ ಪಡೆಯುವೆವು’ ಎಂಬ ಮಾತುಗಳಿಂದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಮೋದಿ ಸರಕಾರಕ್ಕೆ ಎಚ್ಚರಿಕೆ ಹಾಗೂ ಮತಾಂಧರಿಗೆ ಪ್ರಚೋದನೆ ನೀಡಿದ್ದಾರೆ.

ಜಮ್ಮು-ಕಾಶ್ಮೀರದಿಂದ ಕಲಂ ೩೭೦ ಅನ್ನು ತೆಗೆದುಹಾಕಿದ ನಂತರ ಮುಫ್ತಿಯವರನ್ನು ಗೃಹಬಂಧನದಲ್ಲಿಡಲಾಗಿತ್ತು. ಅವರನ್ನು ೧೪ ತಿಂಗಳ ನಂತರ ಅಂದರೆ ಅಕ್ಟೋಬರ್ ೧೩ ರಂದು ಬಿಡುಗಡೆ ಮಾಡಲಾಯಿತು. ನಂತರ ಅವರು ಟ್ವಿಟರ್‌ನಲ್ಲಿ ಒಂದು ‘ವಿಡಿಯೋ’ ಪ್ರಸಾರ ಮಾಡಿ ಈ ಮೇಲಿನಂತೆ ವಿಷಕಾರಿದ್ದಾರೆ. ಅದರಲ್ಲಿ ಅವರು, ‘ಆಗಸ್ಟ್ ೫, ೨೦೧೯ ರ ಕಪ್ಪು ದಿನದಂದು ತೆಗೆದುಕೊಂಡ ನಿರ್ಧಾರವು ನನ್ನ ಹೃದಯಕ್ಕೆ ಬರೆ ಹಾಕುತ್ತಲಿತ್ತು. ಜಮ್ಮು ಮತ್ತು ಕಾಶ್ಮೀರದ ಜನರ ಪರಿಸ್ಥಿತಿಯು ಇದೇ ರೀತಿ ಇರಬಹುದು. ಸರಕಾರವು ಜನರಿಗೆ ಮಾಡಿದ ಅವಮಾನವನ್ನು ಅವರು ಮರೆಯುವುದಿಲ್ಲ. ಈಗ ನಾವು, ಆಗಸ್ಟ್ ೫ ರಂದು ದೆಹಲಿಯು ಅಕ್ರಮವಾಗಿ ಏನನ್ನು ಕಸಿದುಕೊಂಡಿದ್ದಾರೆಯೋ, ಅದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗಬಹುದು. ಈ ಅಕ್ರಮ ನಿರ್ಧಾರವನ್ನು ಬದಲಾಯಿಸಲು ಜಮ್ಮು ಮತ್ತು ಕಾಶ್ಮೀರದ ಜನರು ಒಟ್ಟಾಗಿ ಹೋರಾಡುವರು ಹಾಗೂ ಸಾವಿರಾರು ಜನರ ಪ್ರಾಣವನ್ನು ಕಸಿಯುವ ಅಂಶವನ್ನು ಕಿತ್ತೊಗೆಯಲು ಒಟ್ಟಾಗಿ ಕೆಲಸ ಮಾಡುತ್ತಾರೆ. ಈ ಹೋರಾಟವು ಅಷ್ಟು ಸುಲಭವಲ್ಲ. ನನ್ನನ್ನು ಬಿಡುಗಡೆ ಮಾಡುವುದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಸೆರೆಮನೆಯಲ್ಲಿರುವ ಎಲ್ಲ ನಾಗರಿಕರನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು’ ಎಂದು ಹೇಳಿದ್ದಾರೆ.