Muslims Stone Pelting : ಮಧ್ಯಪ್ರದೇಶದಲ್ಲಿ ಈದ್ ಮೆರವಣಿಗೆಯಲ್ಲಿ ಮುಸ್ಲಿಮರಿಂದ ದೇವಸ್ಥಾನದ ಮೇಲೆ ಕಲ್ಲು ತೂರಾಟ

ಹಿಂದೂಗಳಿಂದ ತಕ್ಷಣ ಕ್ರಮಕ್ಕೆ ಆಗ್ರಹಿಸಿ ಆಂದೋಲನ

ಮಂದಸೌರ್ (ಮಧ್ಯಪ್ರದೇಶ) – ಇಲ್ಲಿನ ನೆಹರು ಬಸ್ ನಿಲ್ದಾಣದ ಬಳಿ ಈದ್ ಮೆರವಣಿಗೆ ವೇಳೆ ಮತಾಂಧ ಮುಸಲ್ಮಾನರು ಹನುಮಾನ್ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಭಕ್ತರೊಬ್ಬರು ಗಾಯಗೊಂಡಿದ್ದಾರೆ. ಇದನ್ನು ವಿರೋಧಿಸಿದ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಕಲ್ಲು ತೂರಿದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

1. ಹಿಂದೂ-ಮುಸ್ಲಿಂ ಪರಸ್ಪರ ಮುಖಾಮುಖಿಯಾದ ಕಾರಣ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು. ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಹಿಂದೂ ಸಂಘಟನೆಯ ಸದಸ್ಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಇದನ್ನು ಪ್ರತಿಭಟಿಸಿ ರಸ್ತೆಯಲ್ಲೇ ಹನುಮಾನ್ ಚಾಲೀಸಾ ಪಠಿಸಿದರು. ‘ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ’, ಎಂದು ಹಿಂದೂಗಳು ಆರೋಪಿಸಿದ್ದಾರೆ. ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಹಲವು ಹಿರಿಯ ಆಡಳಿತಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದರು. ‘ಕಲ್ಲು ತೂರಾಟ ನಡೆಸಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು’, ಎಂದು ಆಡಳಿತ ಹೇಳಿದೆ.

2. ಈ ಪ್ರತಿಭಟನೆಗೆ ಸ್ಥಳೀಯ ವ್ಯಾಪಾರಿಗಳು ಕೂಡ ಬೆಂಬಲ ಸೂಚಿಸಿದ್ದು, ಮಾರುಕಟ್ಟೆಯನ್ನು ಬಂದ್ ಮಾಡಲಾಗಿತ್ತು. ವಿಶ್ವ ಹಿಂದೂ ಪರಿಷತ್‌ ‘ಕಲ್ಲು ತೂರಾಟದ ಘಟನೆಯ ಬಗ್ಗೆ ‘ಇದೊಂದು ಯೋಜಿತ ಪಿತೂರಿಯಾಗಿದೆ’ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪ ಸಲಕಾರವಿರುವಾಗ, ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ಮಾಡುವ ಧೈರ್ಯವಾದರೂ ಹೇಗೆ ಬರುತ್ತದೆ ? ಇನ್ನೆಂದೂ ಇಂತಹ ಧೈರ್ಯ ನಡೆಯದಂತೆ ಸರಕಾರ ಅವರನ್ನು ಹದ್ದುಬಸ್ತಿನಲ್ಲಿಡುವುದು ಅಗತ್ಯವಿದೆ !