ಶಿಯಾ ವಕ್ಫ್ ಬೋರ್ಡ್‌ನ ಅಧ್ಯಕ್ಷ ವಾಸಿಮ್ ರಿಜ್ವಿಯವರ ಒತ್ತಾಯ
|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಮದರಸಾಗಳಲ್ಲಿ ಭಯೋತ್ಪಾದಕರ ಹಣವಿರುತ್ತದೆ. ಅದರಲ್ಲಿ ಭಯೋತ್ಪಾದಕರನ್ನು ಹುಟ್ಟುಹಾಕುವ ಕಟ್ಟರವಾದಿ ದೇಶಗಳ ಹಣವಿದೆ. ಆದ್ದರಿಂದ ದೇಶದ ಎಲ್ಲ ಮದರಸಾಗಳನ್ನು ಮುಚ್ಚಬೇಕು ಹಾಗೂ ಅಲ್ಲಿ ಶಾಲಾ ಶಿಕ್ಷಣವನ್ನು ಪ್ರಾರಂಭಿಸಬೇಕು, ಎಂದು ಶಿಯಾ ವಕ್ಫ್ ಬೋರ್ಡ್‌ನ ಅಧ್ಯಕ್ಷ ವಾಸಿಮ್ ರಿಜ್ವಿ ಒತ್ತಾಯಿಸಿದ್ದಾರೆ. ಅಸ್ಸಾಂನ ಸರಕಾರ ನವೆಂಬರ್‌ನಿಂದ ಸರಕಾರಿ ಮದರಸಾಗಳನ್ನು ಬಂದ್ ಮಾಡಲಿದೆ. ಅದಕ್ಕೆ ಪ್ರತಿಕ್ರಿಯಿಸುವಾಗ ರಿಜ್ವಿಯವರು ಮಾತನಾಡಿದರು.
It is a good step. Every religion should be respected and all Madrassas should be shut: Wasim Rizvi, Shia Waqf Board Chief. | #BJPMadrassaConversion pic.twitter.com/r5ujhnrxbE
— TIMES NOW (@TimesNow) October 14, 2020
ವಸೀಮ್ ರಿಜ್ವಿ ಮಂಡಿಸಿದ ಅಂಶಗಳು
೧. ಎಲ್ಲಿಯವರೆಗೆ ಎಲ್ಲ ಧರ್ಮದ ಮಕ್ಕಳು ಒಟ್ಟಿಗೆ ಕುಳಿತು ಶಿಕ್ಷಣ ಪಡೆಯುವುದಿಲ್ಲವೋ, ಅಲ್ಲಿಯವರೆಗೆ ಕಟ್ಟರವಾದಿ ಮಾನಸಿಕತೆ, ಇಸ್ಲಾಂನ ಅಯೋಗ್ಯ ಪ್ರಚಾರ ಹಾಗೂ ಇತರ ಧರ್ಮಗಳ ಬಗೆಗಿನ ದ್ವೇಷ ನಾಶವಾಗುವುದಿಲ್ಲ. ಪ್ರತಿಯೊಂದು ಧರ್ಮವನ್ನೂ ಗೌರವಿಸಬೇಕು.
೨. ಮದರಸಾಗಳಲ್ಲಿ ಕಲಿಸುವ ಪಠ್ಯಕ್ರಮ ಅಂಗಡಿಗಳಲ್ಲಿ ಏಕೆ ಸಿಗುವುದಿಲ್ಲ ? ಒಂದೇ ಧರ್ಮದ ಜನರಿಗೆ ಮದರಸಾಗಳಲ್ಲಿ ಏನು ಕಲಿಸಲಾಗುತ್ತದೆ ? ಅವರು ಹೀಗೇಕೆ ಮಾಡುತ್ತಿದ್ದಾರೆ ?
೩. ಮದರಸಾಗಳಲ್ಲಿ ಭಾರತದ ಜನರಿಗೆ, ‘ನೀವು ಮಾತ್ರ ಅಲ್ಲಾಹನ ಉತ್ತಮ ಭಕ್ತರಾಗಿದ್ದೀರಿ ಹಾಗೂ ನಿಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಯೋಗ್ಯರಿಲ್ಲ. ಯಾವುದೆಲ್ಲ ಧರ್ಮಗಳು ಅಲ್ಲಾಹನನ್ನು ನಂಬುವುದಿಲ್ಲವೋ, ಇಸ್ಲಾಂನನ್ನು ನಂಬುವುದಿಲ್ಲವೋ, ಅವುಗಳು ಕಾಫೀರರಾಗಿದ್ದಾರೆ. ಅವರೊಂದಿಗೆ ಜಿಹಾದ್ ಮಾಡಿರಿ. ಅವರ ಹತ್ಯೆ ಮಾಡಿರಿ’, ಎಂದು ಕಲಿಸಲಾಗುತ್ತದೆ. ನೀವು ಇವುಗಳನ್ನೇ ಮಕ್ಕಳಿಗೆ ಕಲಿಸಲು ಹೊರಟಿದ್ದರೆ, ನೀವೇ ಹೇಳಿ ಈ ಮಕ್ಕಳು ದೊಡ್ಡವರಾದ ಮೇಲೆ ಏನಾಗುತ್ತಾರೆ ? (ಇದರ ಉತ್ತರವನ್ನು ಜಾತ್ಯತೀತವಾದಿಗಳು ಹಾಗೂ ಪ್ರಗತಿ (ಅಧೋಗತಿ)ಪರರು ಉತ್ತರಿಸಬೇಕು ! – ಸಂಪಾದಕರು)