ಪಾಕಿಸ್ತಾನದಲ್ಲಿ ಹಿಂದೂ ವಿರೋಧಿ ಹೇಳಿಕೆ ನೀಡಿದ ಸಚಿವರನ್ನು ಹೊರಹಾಕಲಾಯಿತು

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸರಕಾರದ ಮಾಹಿತಿ ಸಚಿವ ಫೈಯಾಜುಲ್ ಚೌಹಾನ್ ಅವರನ್ನು ಸಚಿವಾಲಯದ ಹುದ್ದೆಯಿಂದ ತೆಗೆದುಹಾಕಲಾಗಿದೆ. ಫೈಯಾಜುಲ್ ನಿರಂತರವಾಗಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊರಹಾಕಿದ್ದಾರೆ.

ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರು ಹಿಂದೂಗಳ ಮನೆಗಳನ್ನು ಸುಟ್ಟರು

ಸಿಂಧ್ ಪ್ರಾಂತ್ಯದ ಗೋಥ್ ಸೊಮರ್ ಪಾಲಿ ಪ್ರದೇಶದಲ್ಲಿ ಹಿಂದೂಗಳು ತಮ್ಮ ಮನೆಗಳನ್ನು ತೊರೆಯುವಂತೆ ದೋಸ್ತ್ ಮೊಹಮ್ಮದ್ ಮತ್ತು ಅವರ ಗೂಂಡಾ ಸಹಚರರು ಬೆದರಿಕೆ ಹಾಕಿದರು. ಹಿಂದೂಗಳು ಹೋಗಲು ನಿರಾಕರಿಸಿದಾಗ, ಅವರನ್ನು ಹೊಡೆದರು ಹಾಗೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ, ಎಂದು ಟ್ವಿಟರ್ ಖಾತೆ ‘ವಾಯ್ಸ್ ಆಫ್ ಪಾಕಿಸ್ತಾನ್ ಮೈನಾರಟಿ’ ವರದಿ ಮಾಡಿದೆ.

ವ್ಯಂಗ್ಯಚಿತ್ರಗಳ ವಿರೋಧದಲ್ಲಿ ಹಿಂಸಾಚಾರ ಸಹಿಸುವುದಿಲ್ಲ ! – ಎಮ್ಯಾನುಯೆಲ್ ಮ್ಯಾಕ್ರನ್, ಫ್ರಾನ್ಸ್ ಅಧ್ಯಕ್ಷ

ನಾನು ಮುಸ್ಲಿಮರನ್ನು ಗೌರವಿಸುತ್ತೇನೆ. ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳಿಂದ ನೋವಾಗಿರುವುದು ನಾನು ಅರ್ಥಮಾಡಿಕೊಳ್ಳಬಲ್ಲೆ. ಹೀಗಿದ್ದರೂ ಅದರ ಪ್ರತಿಕ್ರಿಯೆಯೆಂದು ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಪ್ರವಾದಿಯ ವ್ಯಂಗ್ಯಚಿತ್ರಗಳಿಂದ ಉಂಟಾದ ಹಿಂಸಾಚಾರದ ಬಗ್ಗೆ ಅವರು ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದರು.

ಸಾಮಾಜಿಕ ಮಾಧ್ಯಮಗಳಿಂದ ಹಿಂದೂ ವಿದ್ಯಾರ್ಥಿಗಳ ಖಾತೆ ಹ್ಯಾಕ್ ಮಾಡಿ ಅದರ ಮೂಲಕ ಇಸ್ಲಾಂನ ವಿರುದ್ಧ ಪೋಸ್ಟ್‌ಗಳನ್ನು ಮಾಡಿ ಸಿಲುಕಿಸುವ ಸಂಚು !

ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಕಟ್ಟರವಾದಿ ಮತಾಂಧರು ಈಗ ಹಿಂದೂ ವಿದ್ಯಾರ್ಥಿಗಳನ್ನು ಗುರಿ ಮಾಡುತ್ತಿದ್ದಾರೆ. ಧರ್ಮನಿಂದನೆಯ ಅಪರಾಧದಲ್ಲಿ ಹಿಂದೂಗಳನ್ನು ಸಿಲುಕಿಸುವ ಮುಸಲ್ಮಾನರಿಂದ ಸಂಚು ರೂಪಿಸಲಾಗುತ್ತಿದೆ. ಇದರಿಂದಾಗಿ ಬಾಂಗ್ಲಾದೇಶ ಪೊಲೀಸರು ‘ಡಿಜಿಟಲ್ ಭದ್ರತೆ ಆಕ್ಟ್ ೨೦೧’ ರ ಸೆಕ್ಷನ್‌ಗಳ ಅಡಿಯಲ್ಲಿ ವಿವಿಧ ಕಲಂ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ವಿದ್ಯಾರ್ಥಿಗಳನ್ನು ಬಂಧಿಸುತ್ತಿದ್ದಾರೆ.

ಸಣ್ಣ ಕಾರಣದಿಂದ ನಡೆದ ವಾಗ್ವಿವಾದದಿಂದ ಮತಾಂಧರಿಂದ ಹಿಂದೂಗಳ ಮೇಲೆ ಗುಂಡು ಹಾರಾಟ : ಓರ್ವ ಸಾವು

ಅಕ್ಟೋಬರ ೨೭ ರಂದು ರಿಕ್ಷಾ ಚಾಲಕನಿಂದ ಬಳೆ ವ್ಯವಸಾಯ ಮಾಡುವ ರಿಝವಾನ್‌ನ ಬಳೆಯನ್ನು ಮುರಿದಿರುವ ಬಗ್ಗೆ ವಾದ ನಿರ್ಮಾಣವಾಯಿತು. ನಂತರ ರಿಝವಾನ್ ತನ್ನ ೨೪-೨೫ ಸಹಚರರೊಂದಿಗೆ ಆ ಸ್ಥಳದಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾನೆ. ಅದೇರೀತಿ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಕೂಡಾ ಎಸೆಯಲಾಯಿತು.

‘ಫ್ರಾನ್ಸ್ ನ ಲಕ್ಷಾಂತರ ಜನರನ್ನು ಕೊಲ್ಲುವ ಸಂಪೂರ್ಣ ಅಧಿಕಾರ ಮುಸ್ಲಿಮರಿಗೆ ಇದೆ !’ – ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಮೊಹಮ್ಮದ್‌ರವರ ಟ್ವೀಟ್

ಫ್ರಾನ್ಸ್‌ನ ನೀಸ್ ನಗರದ ಒಂದು ಚರ್ಚ್‌ನಲ್ಲಿ ಮತಾಂಧರು ನಡೆಸಿದ ದಾಳಿಯನ್ನು ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಮೊಹಮದ್ ಬೆಂಬಲಿಸಿದ್ದಾರೆ, ‘ಫ್ರಾನ್ಸ್ ನ ಲಕ್ಷಾಂತರ ನಾಗರಿಕರನ್ನು ಕೊಲ್ಲುವ ಹಕ್ಕು ಮುಸಲ್ಮಾನರಿಗೆ ಇದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆದರೆ ನಂತರ ಅವರು ಟ್ವೀಟ್ ಅನ್ನು ತೆಗೆದುಹಾಕಿದ್ದಾರೆ.

ಪಾಕಿಸ್ತಾನದಲ್ಲಿ ನವರಾತ್ರಿಯ ಸಮಯದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯ ಧ್ವಂಸಗೊಳಿಸಿದ ಮತಾಂಧರು

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿನ ಥಾರಪಾರಕರದ ನಗರಪರಕರದಲ್ಲಿನ ಸಿಂಹವಾಹಿನಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಮತಾಂಧರು ಧ್ವಂಸ ಮಾಡಿಬಿಟ್ಟಿದ್ದಾರೆ. ಪಾಕಿಸ್ತಾನದಲ್ಲಿನ ಡಾ. ರೇಖಾ ಮಾಹೇಶ್ವರಿಯವರು ಇದರ ಬಗ್ಗೆ ಮಾಹಿತಿಯನ್ನು ನೀಡುತ್ತಾ ಧ್ವಂಸ ಮಾಡಿದ ಮೂರ್ತಿಯ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾ ಪೂಜೆ ಪ್ರಾರಂಭವಾಗುವ ಮೊದಲು ಮತಾಂಧರಿಂದ ೨ ಸ್ಥಳಗಳಲ್ಲಿ ದೇವಿಯ ವಿಗ್ರಹಗಳು ಧ್ವಂಸ

ನವರಾತ್ರಿ ಪ್ರಾರಂಭವಾಗುವ ಮೊದಲು ಬಾಂಗ್ಲಾದೇಶದ ಫರೀದ್‌ಪುರದಲ್ಲಿ ಬೋಲ್‌ಮರಿ ಹಾಗೂ ನಾರಾಯಣಗಂಜ್‌ನ ಅರೈಹಜಾರ್‌ನಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹಗಳನ್ನು ಧ್ವಂಸ ಮಾಡಲಾಯಿತು. ಈ ಪ್ರಕರಣದಲ್ಲಿ ಮೊಹಮ್ಮದ್ ನಯನ್ ಶೇಖ್ (18 ವರ್ಷ) ಮತ್ತು ಮೊಹಮ್ಮದ್ ರಾಜು ಮೃಧಾ (25 ವರ್ಷ) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಲಭೂಷಣ್ ಜಾಧವ್ ಅವರ ಶಿಕ್ಷೆಯನ್ನು ಪರಿಶೀಲಿಸುವ ಮಸೂದೆಯನ್ನು ಪಾಕಿಸ್ತಾನ ಸಂಸತ್ತು ಅಂಗೀಕರಿಸಿದೆ

ತಥಾಕಥಿತ ಬೇಹುಗಾರಿಕೆ ಪ್ರಕರಣದಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಬಂಧನದಲ್ಲಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರ ಶಿಕ್ಷೆಯನ್ನು ಪರಿಶೀಲಿಸಲು ಮಸೂದೆಯೊಂದು ಪಾಕಿಸ್ತಾನ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದೆ.

ಫ್ರಾನ್ಸ್‌ನ ಸರ್ಕಾರಿ ಕಟ್ಟಡಗಳ ಮೇಲೆ ಮುಹಮ್ಮದ್ ಪೈಗಂಬರರ ವ್ಯಂಗ್ಯಚಿತ್ರಗಳ ಪ್ರದರ್ಶನ

ಕೆಲವು ದಿನಗಳ ಹಿಂದೆ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ತರಗತಿಯಲ್ಲಿ ತೋರಿಸಿದ್ದಕ್ಕೆ ಮತಾಂಧನೊಬ್ಬ ಸ್ಯಾಮ್ಯುಯೆಲ್ ಎಂಬ ಹೆಸರಿನ ಶಿಕ್ಷಕನ ಶಿರಚ್ಛೆದ ಮಾಡಿದ್ದ. ಈ ಘಟನೆಯ ನಂತರ ಫ್ರಾನ್ಸ್‌ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.