ಇಂತಹ ತೋರಿಕೆಯ ಕ್ರಮ ತೆಗೆದುಕೊಳ್ಳುವ ಬದಲು ಪಾಕಿಸ್ತಾನವು ಅವರನ್ನು ಸೆರೆಮನೆಗೆ ಹಾಕುವ ಧೈರ್ಯವನ್ನು ತೋರಿಸಬೇಕು !
ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸರಕಾರದ ಮಾಹಿತಿ ಸಚಿವ ಫೈಯಾಜುಲ್ ಚೌಹಾನ್ ಅವರನ್ನು ಸಚಿವಾಲಯದ ಹುದ್ದೆಯಿಂದ ತೆಗೆದುಹಾಕಲಾಗಿದೆ. ಫೈಯಾಜುಲ್ ನಿರಂತರವಾಗಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊರಹಾಕಿದ್ದಾರೆ. ಫೈಯಾಜುಲ್ ಅವರನ್ನು ಫೆಬ್ರವರಿ ೨೦೧೯ ರಲ್ಲಿಯೂ ಸಚಿವಾಲಯದ ಹುದ್ದೆಯಿಂದ ತೆಗೆದುಹಾಕಲಾಗಿತ್ತು; ಆದರೆ ನಂತರ ಪುನಃ ಸೇರಿಸಿಕೊಂಡಿದ್ದರು. (ಈಗಲೂ ಅವರನ್ನು ತೆಗೆದುಹಾಕಲಾಗಿದ್ದರೂ, ಅವರನ್ನು ಮತ್ತೆ ಮಂತ್ರಿಯಾಗಿ ನೇಮಿಸುವುದಿಲ್ಲ ಎಂದು ಯಾರು ಭರವಸೆ ನೀಡುವರು ? – ಸಂಪಾದಕ) ಅವರು ಆ ಸಮಯದಲ್ಲಿ ಪುಲವಾಮಾ ದಾಳಿಯ ಬಗ್ಗೆ ಹಿಂದೂ ವಿರೋಧಿ ಹೇಳಿಕೆಯನ್ನು ನೀಡಿದ್ದರು. ಈಗ ಅವರು ನವಾಜ್ ಷರೀಫ್ ಮತ್ತು ಅವರ ಮಗಳು ಮರಿಯಮ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.
इमरान खान सरकार ने फैयाजुल चौहान को बर्खास्त कियाhttps://t.co/cfTWZISEXd
— AajTak (@aajtak) November 3, 2020