ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರು ಹಿಂದೂಗಳ ಮನೆಗಳನ್ನು ಸುಟ್ಟರು

ಪಾಕಿಸ್ತಾನದಲ್ಲಿ ಪ್ರತಿದಿನ ಹಿಂದೂಗಳ ಮೇಲೆ ಅತ್ಯಾಚಾರ ಆಗುತ್ತದೆ; ಆದರೆ ಇಡೀ ಜಗತ್ತು ಇದರ ಬಗ್ಗೆ ನಿಷ್ಕ್ರಿಯವಾಗಿರುವಂತೆ ತೋರುತ್ತದೆ. ಹಿಂದೂಗಳಿಗೆ ರಕ್ಷಕರಿಲ್ಲ ಎಂಬುದು ಕಟು ಸತ್ಯ !

ಇಸ್ಲಾಮಾಬಾದ್ (ಪಾಕಿಸ್ತಾನ) – ಸಿಂಧ್ ಪ್ರಾಂತ್ಯದ ಗೋಥ್ ಸೊಮರ್ ಪಾಲಿ ಪ್ರದೇಶದಲ್ಲಿ ಹಿಂದೂಗಳು ತಮ್ಮ ಮನೆಗಳನ್ನು ತೊರೆಯುವಂತೆ ದೋಸ್ತ್ ಮೊಹಮ್ಮದ್ ಮತ್ತು ಅವರ ಗೂಂಡಾ ಸಹಚರರು ಬೆದರಿಕೆ ಹಾಕಿದರು.

ಹಿಂದೂಗಳು ಹೋಗಲು ನಿರಾಕರಿಸಿದಾಗ, ಅವರನ್ನು ಹೊಡೆದರು ಹಾಗೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ, ಎಂದು ಟ್ವಿಟರ್ ಖಾತೆ ‘ವಾಯ್ಸ್ ಆಫ್ ಪಾಕಿಸ್ತಾನ್ ಮೈನಾರಟಿ’ ವರದಿ ಮಾಡಿದೆ. ಬೆಂಕಿ ಹಚ್ಚಿರುವ ಛಾಯಾಚಿತ್ರಗಳನ್ನು ಸಹ ಪ್ರಸಾರ ಮಾಡಲಾಗಿದೆ.