ಸಣ್ಣ ಕಾರಣದಿಂದ ನಡೆದ ವಾಗ್ವಿವಾದದಿಂದ ಮತಾಂಧರಿಂದ ಹಿಂದೂಗಳ ಮೇಲೆ ಗುಂಡು ಹಾರಾಟ : ಓರ್ವ ಸಾವು

೧೨ ಕ್ಕೂ ಹೆಚ್ಚು ಮತಾಂಧರ ಬಂಧನ !

ಉತ್ತರಪ್ರದೇಶ ಆಡಳಿತ ವ್ಯವಸ್ಥೆಯು ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡದೇ ಇರುವುದರ ಪರಿಣಾಮ ! ಉತ್ತರಪ್ರದೇಶದಲ್ಲಿ ಮತಾಂಧರಿಂದ ನಿರಂತರವಾಗಿ ಹಿಂದೂಗಳ ಮೇಲೆ ಆಗುತ್ತಿರುವ ದಾಳಿಯನ್ನು ನೋಡಿದರೆ ಅವರ ಮೇಲೆ ಕಠಿಣ ಕ್ರಮಕೈಗೊಳ್ಳುವುದರೊಂದಿಗೆ ಅಪರಾಧದ ಮಾನಸಿಕತೆಯ ಮತಾಂಧರನ್ನು ಹುಡುಕಿ ಜಾಗರೂಕತೆಯ ಉಪಾಯವೆಂದು ಅವರನ್ನು ಬಂಧಿಸಿ ಸೆರೆಮನೆಗೆ ಅಟ್ಟಬೇಕು !

ಫಿರೋಜಾಬಾದ (ಉತ್ತರಪ್ರದೇಶ) – ಇಲ್ಲಿ ಸಣ್ಣ ಕಾರಣದಿಂದಾಗಿ ಮತಾಂಧರು ಮಾರುಕಟ್ಟೆಯಲ್ಲೇ ಗುಂಡುಹಾರಿಸಿ ಅಮಿತ ಗುಪ್ತಾ ಎಂಬ ಹಿಂದೂ ಯುವಕನ ಹತ್ಯೆ ಮಾಡುವುದರೊಂದಿಗೆ, ಕಲ್ಲೆಸೆಯುವ ಮೂಲಕ ಹಲವರನ್ನು ಗಾಯಗೊಳಿಸಿದ್ದಾರೆ.

ಅಕ್ಟೋಬರ ೨೭ ರಂದು ರಿಕ್ಷಾ ಚಾಲಕನಿಂದ ಬಳೆ ವ್ಯವಸಾಯ ಮಾಡುವ ರಿಝವಾನ್‌ನ ಬಳೆಯನ್ನು ಮುರಿದಿರುವ ಬಗ್ಗೆ ವಾದ ನಿರ್ಮಾಣವಾಯಿತು. ನಂತರ ರಿಝವಾನ್ ತನ್ನ ೨೪-೨೫ ಸಹಚರರೊಂದಿಗೆ ಆ ಸ್ಥಳದಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾನೆ. ಅದೇರೀತಿ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಕೂಡಾ ಎಸೆಯಲಾಯಿತು.(ಮತಾಂಧರಲ್ಲಿ ಪೆಟ್ರೋಲ್ ಬಾಂಬ್ ಹೇಗೆ ಬರುತ್ತದೆ ? ಇದರಿಂದ ಅವರು ಗಲಭೆ ಹಾಗೂ ಸಮಾಜಘಾತಕ ಕೃತ್ಯಗಳನ್ನು ಮಾಡಲು ಸಿದ್ಧರಿರುತ್ತಾರೆ, ಎಂಬುದು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕ) ಇದರಲ್ಲಿ ಸಂಜಯ ಗುಪ್ತಾ ಗಾಯಗೊಂಡರು, ಅವರನ್ನು ಕಾಪಾಡಲು ಬಂದ ಆತನ ಮಗನಿಗೆ ಗುಂಡು ತಾಗಿದ್ದರಿಂದ ಆತ ಗಾಯಗೊಂಡ. ಆ ಸಮಯದಲ್ಲಿ ಅಮಿತ್ ಗುಪ್ತಾ ಅಲ್ಲಿಗೆ ತಲುಪಿದಾಗ ಆತನಿಗೂ ಗುಂಡು ತಗಲಿತು. ಇದರಲ್ಲಿ ಆತ ಸಾವನ್ನಪ್ಪಿದ್ದಾನೆ. ಈ ಘಟನೆಯ ಮಾರನೇ ದಿನ ಮಾರುಕಟ್ಟೆಯ ವ್ಯಾಪಾರ ಸ್ಥಗಿತಗೊಳಿಸಲಾಗಿತ್ತು.