ವ್ಯಂಗ್ಯಚಿತ್ರಗಳ ವಿರೋಧದಲ್ಲಿ ಹಿಂಸಾಚಾರ ಸಹಿಸುವುದಿಲ್ಲ ! – ಎಮ್ಯಾನುಯೆಲ್ ಮ್ಯಾಕ್ರನ್, ಫ್ರಾನ್ಸ್ ಅಧ್ಯಕ್ಷ

ಫ್ರಾನ್ಸ್‌ನಂತಹ ದೇಶದಲ್ಲಿ, ಮತಾಂಧರು ಹಿಂಸಾಚಾರ ಮಾಡಿದಾಗ, ಅದನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಭಾರತದಲ್ಲಿ ಪೊಲೀಸರು ಮತ್ತು ಆಡಳಿತವು ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಪ್ಯಾರಿಸ್ (ಫ್ರಾನ್ಸ್) – ನಾನು ಮುಸ್ಲಿಮರನ್ನು ಗೌರವಿಸುತ್ತೇನೆ. ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳಿಂದ ನೋವಾಗಿರುವುದು ನಾನು ಅರ್ಥಮಾಡಿಕೊಳ್ಳಬಲ್ಲೆ. ಹೀಗಿದ್ದರೂ ಅದರ ಪ್ರತಿಕ್ರಿಯೆಯೆಂದು ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಪ್ರವಾದಿಯ ವ್ಯಂಗ್ಯಚಿತ್ರಗಳಿಂದ ಉಂಟಾದ ಹಿಂಸಾಚಾರದ ಬಗ್ಗೆ ಅವರು ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದರು.

ಮ್ಯಾಕ್ರೋನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಇಡೀ ಸಮಸ್ಯೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಾನು ಪ್ರವಾದಿಯ ವ್ಯಂಗ್ಯಚಿತ್ರವನ್ನು ಬೆಂಬಲಿಸುವುದಿಲ್ಲ.

ಆದರೆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲಾಗುವುದು. ಅದರಲ್ಲಿ ವ್ಯಂಗ್ಯಚಿತ್ರ ಮುದ್ರಣವೂ ಒಳಗೊಂಡಿದೆ ಎಂದು ಹೇಳಿದರು.