ಸಾಮಾಜಿಕ ಮಾಧ್ಯಮಗಳಿಂದ ಹಿಂದೂ ವಿದ್ಯಾರ್ಥಿಗಳ ಖಾತೆ ಹ್ಯಾಕ್ ಮಾಡಿ ಅದರ ಮೂಲಕ ಇಸ್ಲಾಂನ ವಿರುದ್ಧ ಪೋಸ್ಟ್‌ಗಳನ್ನು ಮಾಡಿ ಸಿಲುಕಿಸುವ ಸಂಚು !

ಧರ್ಮನಿಂದನೆಯ ನೆಪದಲ್ಲಿ ಬಾಂಗ್ಲಾದೇಶದ ಹಿಂದೂ ವಿದ್ಯಾರ್ಥಿಗಳಿಗೆ ನೀಡುವ ಕಿರುಕುಳವನ್ನು ನಿಲ್ಲಿಸುವಂತೆ ಹಿಂದೂಗಳ ಒತ್ತಾಯ

ಹಿಂದೂಗಳನ್ನು ಸುಳ್ಳು ಅಪರಾಧಗಳಿಗೆ ಸಿಲುಕಿಸಿ ಅವರನ್ನು ಇಸ್ಲಾಂ ವಿರೋಧಿಗಳನ್ನಾಗಿ ಮಾಡುವ ಮೂಲಕ ಅವರನ್ನು ಮರಣದಂಡಣೆ ನೀಡುಲು ಪ್ರಯತ್ನಿಸುತ್ತಿದೆ, ಇದು ಹೊಸ ರೀತಿಯ ‘ಸೈಬರ್ ಜಿಹಾದ್’ ಆಗಿದೆ !

ಭಾರತ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಮತ್ತು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಢಾಕಾ (ಬಾಂಗ್ಲಾದೇಶ) – ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಕಟ್ಟರವಾದಿ ಮತಾಂಧರು ಈಗ ಹಿಂದೂ ವಿದ್ಯಾರ್ಥಿಗಳನ್ನು ಗುರಿ ಮಾಡುತ್ತಿದ್ದಾರೆ. ಧರ್ಮನಿಂದನೆಯ ಅಪರಾಧದಲ್ಲಿ ಹಿಂದೂಗಳನ್ನು ಸಿಲುಕಿಸುವ ಮುಸಲ್ಮಾನರಿಂದ ಸಂಚು ರೂಪಿಸಲಾಗುತ್ತಿದೆ. ಇದರಿಂದಾಗಿ ಬಾಂಗ್ಲಾದೇಶ ಪೊಲೀಸರು ‘ಡಿಜಿಟಲ್ ಭದ್ರತೆ ಆಕ್ಟ್ ೨೦೧’ ರ ಸೆಕ್ಷನ್‌ಗಳ ಅಡಿಯಲ್ಲಿ ವಿವಿಧ ಕಲಂ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ವಿದ್ಯಾರ್ಥಿಗಳನ್ನು ಬಂಧಿಸುತ್ತಿದ್ದಾರೆ.

೧. ಮತಾಂಧರು ಹ್ಯಾಕರ್‌ಗಳ ಮೂಲಕ ಹಿಂದೂ ಹೆಸರಿನ ಫೇಸ್‌ಬುಕ್ ಖಾತೆಗಳನ್ನು ಗುರಿ ಮಾಡುತ್ತಿದ್ದಾರೆ. ಅವರು ಈ ಖಾತೆಗಳನ್ನು ಹ್ಯಾಕ್ ಮಾಡುತ್ತಾರೆ ಮತ್ತು ನಂತರ ಇಸ್ಲಾಂ ವಿರೋಧಿ ಪ್ರಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಾರೆ. ನಂತರ ಅವರು ಇಂತಹ ಟೀಕೆಗಳ ‘ಸ್ಕ್ರೀನ್‌ಶಾಟ್‌ಗಳನ್ನು’ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಾಗೂ ಕಟ್ಟರವಾದಿಗಳಿಗೆ ಕಳುಹಿಸುತ್ತಾರೆ. ವಿಶ್ವವಿದ್ಯಾಲಯ ಪ್ರಾಧಿಕಾರವು ವಿದ್ಯಾರ್ಥಿಯನ್ನು ಅಮಾನತುಗೊಳಿಸುತ್ತದೆ ಮತ್ತು ವಿದ್ಯಾರ್ಥಿಯ ವಿರುದ್ಧ ಡಿಜಿಟಲ್ ಸೆಕ್ಯುರಿಟಿ ಆಕ್ಟ್ (ಡಿಎಸ್‌ಎ) ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗುತ್ತದೆ. ಈ ವಿದ್ಯಾರ್ಥಿಗಳಲ್ಲಿ ಹಲವರನ್ನು ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಧರ್ಮನಿಂದನೆಯ ನೆಪದಲ್ಲಿ ಹಿಂದೂಗಳಿಗೆ ಕಿರುಕುಳ ನೀಡಲು ಮತಾಂಧರಿಗೆ ಮತ್ತೊಂದು ಮಾರ್ಗ ಸಿಕ್ಕಿದೆ.

೨. ಧರ್ಮನಿಂದನೆಯ ಸೋಗಿನಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಬಂಧಿಸುವುದು ಮತ್ತು ಹಿಂಸಿಸುವುದು ಬಾಂಗ್ಲಾದೇಶದಲ್ಲಿ ಹೊಸತೇನಲ್ಲ. ಹಿಗಿದ್ದರೂ ಹಿಂದೂಗಳ ನವರಾತ್ರಿ ಹಬ್ಬದ ಸಂದರ್ಭದಲ್ಲಿ ೨ ಹಿಂದೂ ವಿದ್ಯಾರ್ಥಿನಿಯರು ಮತ್ತು ೬ ಹಿಂದೂ ವಿದ್ಯಾರ್ಥಿಗಳನ್ನು ಅಕ್ಟೋಬರ ತಿಂಗಳಲ್ಲಿ ಧರ್ಮನಿಂದನೆಯ ಅಪರಾಧಡಿಯಲ್ಲಿ ಬಂಧಿಸಿರುವುದು ಒಂದು ದೊಡ್ಡ ಪಿತೂರಿಯ ಭಾಗವಾಗಿ ಗಮನಕ್ಕೆ ಬರುತ್ತಿದೆ. ಬಾಂಗ್ಲಾದೇಶಿ ಹಿಂದೂಗಳು ನಿರಂತರ ಭಯ ಮತ್ತು ಸೈಬರ್ ಗೂಂಡಾಗಿರಿಯ ಕರಿನೆರಳಿನಲ್ಲಿ ಇದ್ದಾರೆ.

೬ ವಿದ್ಯಾರ್ಥಿಗಳಿಗೆ ಈ ರೀತಿ ಕಿರುಕುಳ ನೀಡಲಾಯಿತು !

೧. ಮಿಥುನ ಮಂಡಲ್, ಹಣಕಾಸು ಮತ್ತು ಬ್ಯಾಂಕಿಂಗ್ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ
೨. ತಿಥಿ ಸರಕಾರ್, ಪ್ರಾಣಿಶಾಸ್ತ್ರ ವಿಭಾಗದ ೩ ನೇ ವರ್ಷದ ವಿದ್ಯಾರ್ಥಿ
೩. ಪರಿಸರ ವಿಜ್ಞಾನ ಮತ್ತು ವಿಪತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿ ಪ್ರತೀಕ್ ಮಜುಮದಾರ್
೪. ಪಾಲ್ ದಿಪ್ತೊ, ಫಾರ್ಮಸಿ ವಿಭಾಗದ ವಿದ್ಯಾರ್ಥಿ
೫. ಸ್ಥಳೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ದೀಪ್ತಿ ರಾಣಿ ದಾಸ್
೬. ಮಿಥುನ ಡೇ ಅಲಿಯಾಸ್ ಪಿಕಲು ನೀಲ್
ಹಿಂದುತ್ವನಿಷ್ಠ ಸಂಘಟನೆಯಾದ ‘ಹಿಂದೂ ಎಕ್ಸಿಸ್ಟೆನ್ಸ್ ಫೋರಂ’ ಈ ಆರು ವಿದ್ಯಾರ್ಥಿಗಳನ್ನು ಬಾಂಗ್ಲಾದೇಶದ ಪೊಲೀಸ್ ಅಥವಾ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ, ಜೊತೆಗೆ ಅವರನ್ನು ಅಮಾನತುಗೊಳಿಸಿರುವ ನಿರ್ಧಾರವನ್ನು ವಿಶ್ವವಿದ್ಯಾಲಯ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.