೩ ದಿನಗಳಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್‌ದಿಂದ ಹೊರಟು ಹೋಗಿ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತನ್ನ ಆಂತರಿಕ ಪ್ರಾಂತ್ಯ ಎಂಬ ಸ್ಥಾನಮಾನ ನೀಡುತ್ತಾ ಚುನಾವಣೆಯನ್ನು ಘೋಷಿಸುವ ಮೂಲಕ ಪಾಕಿಸ್ತಾನ ಸರಕಾರವು ಅಯೋಗ್ಯ ಪದ್ಧತಿಯನ್ನು ಅವಲಂಬಿಸಿದೆ. ಅನಂತರ ಗಿಲ್ಗಿಟ್-ಬಾಲ್ಟಿಸ್ತಾನದ ಮುಖ್ಯ ನ್ಯಾಯಾಲಯವು ಸರಕಾರದ ಮಂತ್ರಿಗಳು ಚುನಾವಣಾ ಅಭಿಯಾನವನ್ನು ನಡೆಸುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸರಕಾರಕ್ಕೆ ಛೀಮಾರಿ ಹಾಕಿದೆ.

ಹಿಂದೂ ಯುವಕನ ಹತ್ಯೆಗೆ ಸಂಬಂಧಿಸಿದಂತೆ ‘ಯೂಟ್ಯೂಬ್’ನ ಸ್ಟಂಟ್‌ಮ್ಯಾನ್ ನಿಜಾಮುಲ್ ಖಾನ್ ಎಂಬಾತನ ಬಂಧನ

ಕೆಲವು ದಿನಗಳ ಹಿಂದೆ ಇಲ್ಲಿನ ಸೆಕ್ಟರ್ -೩೨ ರಲ್ಲಿ ಕಮಲ್ ಶರ್ಮಾ ಎಂಬ ತರುಣನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಿಜಾಮುಲ್ ಖಾನ್, ಸುಮಿತ್ ಶರ್ಮಾ ಮತ್ತು ಅಮಿತ್ ಗುಪ್ತಾ ಈ ೩ ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದೂ ಅಂಗಡಿಯಲ್ಲಿ ಕೆಲಸಕ್ಕಿದ್ದ ಮತಾಂಧನಿಂದ ಮಾಲೀಕ ಮತ್ತು ಅವನ ಹೆಂಡತಿಯ ಕೊಲೆ

ಉದ್ಯಮಿ ವಿನಯ ಗುಪ್ತಾ ಮತ್ತು ಅವರ ಪತ್ನಿ ನೇಹಾ ಅವರನ್ನು ಅಮಾನ್ ಹಯಾತ್ ಖಾನ್ ಹತ್ಯೆ ಮಾಡಿದ್ದಾರೆ. ಅಮಾನ್‌ನು ವಿನಯ ಗುಪ್ತಾ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ನಗದು ಹಣದ ವ್ಯವಹಾರದಲ್ಲಿ ಮೋಸಮಾಡಿದ ಪ್ರಸಂಗದಲ್ಲಿ ಆತ ವಿನಯ ಗುಪ್ತಾ ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾನೆ. ಹಾಗೂ ಪರಾರಿಯಾಗಿದ್ದಾನೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.

ಆಸ್ಟ್ರೀಯಾದಲ್ಲಿ ಕಟ್ಟರ್ ವಾದಿ ಮಸೀದಿಗಳನ್ನು ಮುಚ್ಚಲು ಪ್ರಾರಂಭ !

ಯೂರೋಪ ದೇಶದ ರಾಜಧಾನಿಯಾದ ಆಸ್ಟ್ರಿಯಾದಲ್ಲಿ ನವೆಂಬರ್ ೨ ರಂದು ನಡೆದ ಭಯೋತ್ಪಾದಕ ದಾಳಿಯ ನಂತರ, ಸರಕಾರವು ಕಟ್ಟರವಾದದ ಇಸ್ಲಾಮಿಕ್ ಶಿಕ್ಷಣವನ್ನು ನೀಡುವ ಮಸೀದಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲು ಪ್ರಾರಂಭಿಸಿದೆ. ಸರಕಾರವು ಇತ್ತೀಚೆಗೆ ಎರಡು ಮಸೀದಿಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ನನಗೆ ಪಾಕಿಸ್ತಾನಕ್ಕೆ ಹೋಗಲಿಕ್ಕೆ ಇದ್ದರೆ, ನಾನು ೧೯೪೭ ರಲ್ಲಿಯೇ ಹೋಗಿರುತ್ತಿದ್ದೆ ! – ಫಾರೂಕ್ ಅಬ್ದುಲ್ಲಾ

ಯಾರೆಲ್ಲ ನನಗೆ ಪಾಕಿಸ್ತಾನಕ್ಕೆ ಹೋಗಬೇಕೆಂದು ಸಲಹೆ ನೀಡುತ್ತಿದ್ದಾರೆಯೋ ಅವರು ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು, ಏನೆಂದರೆ ನಮಗೆ ಪಾಕಿಸ್ತಾನಕ್ಕೆ ಹೋಗಲಿಕ್ಕೆ ಇದ್ದಿದ್ದರೆ ನಾವು ೧೯೪೭ ರಲ್ಲಿಯೇ ಹೋಗುತ್ತಿದ್ದೆವು. ಆ ಸಮಯದಲ್ಲಿ ನಮ್ಮನ್ನು ತಡೆಯಲು ಯಾರೂ ಇರಲಿಲ್ಲ; ಆದರೆ ನಾವು ಭಾರತದಲ್ಲಿಯೇ ಇರಲು ನಿರ್ಧರಿಸಿದ್ದೇವೆ.

‘ಲವ್ ಜಿಹಾದ್’ಗೆ ಪ್ರ್ರೇತ್ಸಾಹ ನೀಡುವ ‘ಲಕ್ಷ್ಮೀ’ ಚಲನಚಿತ್ರವನ್ನು ನಿರ್ಬಂಧಿಸಿರಿ !

‘ಲಕ್ಷ್ಮೀ’ ಈ ಚಲನಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ನಟನನ್ನು ಮುಸಲ್ಮಾನ ಹಾಗೂ ನಟಿಯನ್ನು ಬ್ರಾಹ್ಮಣ ಎಂದು ತೋರಿಸಿ ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡಲಾಗಿದೆ. ಆದ್ದರಿಂದ ಈ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು, ಎಂದು ಧಾರಾವಿಯ ವಜ್ರದಳ ಸಂಘಟನೆಯ ಕೋಶಾಧ್ಯಕ್ಷ ಶ್ರೀ. ವಿಮಲಚಂದ ಜೈನ್ ಇವರು ಒತ್ತಾಯಿಸಿದ್ದಾರೆ.

ಈಗ ಕೇರಳದಲ್ಲಿಯೂ ಅರ್ಚಕರಾಗಿ ಪರಿಶಿಷ್ಟ ಜಾತಿಯ ವ್ಯಕ್ತಿಯ ನೇಮಕ.

ಕೇರಳದ ತ್ರಾವಣಕೋರ ದೇವಸ್ವಂ ಬೋರ್ಡ್ ಇದೇ ಮೊದಲ ಬಾರಿಗೆ ತನ್ನ ವ್ಯಾಪ್ತಿಯಲ್ಲಿರುವ ೧೨೦೦ ಕ್ಕೂ ಹೆಚ್ಚು ದೇವಾಲಯಗಳಲ್ಲಿ ಒಂದರಲ್ಲಿ ಪರಿಶಿಷ್ಟ ಜಾತಿ ವ್ಯಕ್ತಿಗಳನ್ನು ದೇವಾಲಯದ ಅರ್ಚಕರಾಗಿ ನೇಮಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಬಾಂಗ್ಲಾದೇಶದ ದೇವಾಲಯಗಳಲ್ಲಾದ ವಿಧ್ವಂಸದ ಘಟನೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ! – ಭಾರತ ಸರಕಾರ

ಬಾಂಗ್ಲಾದೇಶದ ಹಿಂದೂ ದೇವಾಲಯಗಳ ಧ್ವಂಸದ ಘಟನೆಗಳನ್ನು ಭಾರತವು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಭಾರತ ಸರಕಾರವು ಹೇಳಿದೆ. ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿಯವರು ಬಾಂಗ್ಲಾದೇಶದ ೧೫ ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ಬಹಿರಂಗಪಡಿಸಿದ ನಂತರ ಇದು ಭಾರತ ಸರಕಾರವು ನೀಡಿದ ಮೊದಲ ಪ್ರತಿಕ್ರಿಯೆಯಾಗಿದೆ.

ಬಂಗಾಲದಲ್ಲಿ ದೀಪಾವಳಿಯಲ್ಲಿ ಪಟಾಕಿ ಹೊಡೆಯುವುದು ಹಾಗೂ ಮಾರಾಟ ಮಾಡಲು ನಿಷೇಧ ! – ಕೋಲಕಾತಾ ಉಚ್ಚ ನ್ಯಾಯಾಲಯ

ಕೋಲಕಾತಾ ಉಚ್ಚ ನ್ಯಾಯಾಲಯವು ಕೊರೋನಾದ ವಿಪತ್ತಿನ ಹಿನ್ನಲೆಯಲ್ಲಿ ರಾಜ್ಯದ ಶ್ರೀ ಮಹಾಕಾಳಿ ಪೂಜೆ, ಛಟ ಪೂಜೆ, ಗುರುನಾನಕ ಜಯಂತಿ ಹಾಗೂ ದೀಪಾವಳಿ ಇಂತಹ ಹಬ್ಬಗಳಲ್ಲಿ ಪಟಾಕಿಯನ್ನು ಹೊಡೆಯುವುದು ಅಥವಾ ಅದರ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿದೆ.

ದೇವಸ್ಥಾನದ ಭೂಮಿಯನ್ನು ಧಾರ್ಮಿಕ ಕಾರ್ಯವನ್ನು ಹೊರತು ಪಡಿಸಿ ಇತರ ಯಾವುದಕ್ಕೂ ಬಳಸಬಾರದು ! – ಮದ್ರಾಸ ಉಚ್ಚ ನ್ಯಾಯಾಲಯ

ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ರಾಜ್ಯ ಸರಕಾರಕ್ಕೆ, ಧಾರ್ಮಿಕ ಕಾರ್ಯಕ್ರಮವನ್ನು ಹೊರತು ಪಡಿಸಿ ಇತರ ಯಾವುದೇ ಕಾರ್ಯಕ್ರಮಗಳಿಗೆ ದೇವಸ್ಥಾನದ ಭೂಮಿಯನ್ನು ಬಳಸಬಾರದು, ತಮಿಳುನಾಡಿನ ದೇವಸ್ಥಾನಗಳು ಕೇವಲ ಪ್ರಾಚೀನ ಸಂಸ್ಕೃತಿಯ ಸಂಕೇತವಷ್ಟೇ ಆಗಿರದೇ ಅವು ಕಲೆ, ವಿಜ್ಞಾನ ಹಾಗೂ ಮೂರ್ತಿಕಲೆಯ ಕ್ಷೇತ್ರದಲ್ಲಿಯೂ ಪ್ರತಿಭೆಯ ಗೌರವದ ಹಾಗೂ ಜ್ಞಾನದ ಸಂಕೇತ ಹಾಗೂ ಪ್ರಮಾಣವಾಗಿದೆ, ಎಂದು ಹೇಳಿದೆ