ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಅವರ ಅಭಿಪ್ರಾಯ
ಢಾಕಾ – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಇವರು ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ಅಧಿಕಾರ ಬದಲಾವಣೆಯಾದರೂ, ಢಾಕಾ-ದೆಹಲಿ ಸಂಬಂಧಗಳು ತುಂಬಾ ಗಟ್ಟಿಯಾಗಿ ಉಳಿಯಬೇಕು ಮತ್ತು ಇದು ಉಭಯ ದೇಶಗಳ ಹಿತದ ದೃಷ್ಟಿಯಿಂದ ಒಳಿತಾಗಿದೆ ಎಂದು ಹೇಳಿದರು. ಆಗಿನ ಪ್ರಧಾನಿ ಶೇಖ್ ಹಸೀನಾ ಇವರು ಆಗಸ್ಟ್ 2024 ರಲ್ಲಿ ರಾಜೀನಾಮೆ ನೀಡಿದ ನಂತರ ಅರ್ಥಶಾಸ್ತ್ರಜ್ಞ ಮಹಮ್ಮದ್ ಯೂನಸ್ ಇವರು ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾಗಿದ್ದರು. ವಿದ್ಯಾರ್ಥಿ ಚಳುವಳಿಯಿಂದಾಗಿ ಶೇಖ್ ಹಸೀನಾ ಇವರು ಆಗಸ್ಟ್ 5 ರಂದು ದೇಶವನ್ನು ತೊರೆದಿದ್ದರು. ಭಾರತ-ಬಾಂಗ್ಲಾದೇಶದ ದ್ವಿಪಕ್ಷೀಯ ಸಂಬಂಧಗಳಲ್ಲಿನ ಇತ್ತೀಚಿನ ಉದ್ವಿಗ್ನತೆಯ ಕುರಿತು ಪ್ರಶ್ನಿಸಿದಾಗ, ಬಾಂಗ್ಲಾದೇಶದ ಇತ್ತೀಚಿನ ಘಟನೆಗಳಿಂದ ಭಾರತವು ‘ನಿರಾಶೆ’ಗೊಂಡಿದೆ ಮತ್ತು ಅದು ಬಾಂಗ್ಲಾದೇಶದ ಬದಲಾವಣೆಯಿಂದ ಸಂತೋಷವಾಗಿಲ್ಲ ಎಂದು ಯುನೂಸ ಹೇಳಿದರು.
ಯುನೂಸ ಮಾತನಾಡುತ್ತಾ, ಈ ಬದಲಾವಣೆಯ ಬಳಿಕವೂ ಭಾರತವು ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಾಣ ಮಾಡಬೇಕು; ಏಕೆಂದರೆ ಅದು ಅವರ ಸ್ವಂತ ಹಿತಕ್ಕೆ ಆವಶ್ಯಕವಾಗಿದೆಯೆಂದು ಹೇಳಿದರು. (ಪುಟ್ಟ ಬಾಂಗ್ಲಾದೇಶ ಭಾರತಕ್ಕೆ ಅದರ ಹಿತದ ವಿಷಯವನ್ನು ಹೇಳುವ ಧೈರ್ಯ ತೋರಿಸುತ್ತದೆ. ಭಾರತವು ತನ್ನ ಹಿತ ಯಾವುದರಲ್ಲಿದೆಯೆಂದು ನೋಡಿಕೊಳ್ಳುತ್ತದೆ; ಬಾಂಗ್ಲಾದೇಶವು ಅದನ್ನು ಹೇಳುವ ಆವಶ್ಯಕತೆಯಿಲ್ಲವೆಂದು ಭಾರತವು ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಬೇಕು ! – ಸಂಪಾದಕರು)
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವಾಗ ಭಾರತ ಹೇಗೆ ಸಂತೋಷವಾಗಿರಲು ಸಾಧ್ಯ? ಭಾರತವನ್ನು ಸಂತೋಷಗೊಳಿಸಲು ಬಾಂಗ್ಲಾದೇಶವು ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವುದೇ ? ಎನ್ನುವುದನ್ನು ಯುನೂಸ ಮೊದಲು ಘೋಷಿಸಬೇಕು ! |