ಒಸಾಮಾ ಬಿನ್ ಲಾಡೆನ್ ನ ಮಗನಿಗೆ ಶಾಶ್ವತವಾಗಿ ನಿರ್ಬಂಧ ಹೇರಿದ ಫ್ರಾನ್ಸ್ !

ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಬರಹದಿಂದಾಗಿ ಫ್ರಾನ್ಸ ಸರಕಾರದ ನಿರ್ಣಯ

ಪ್ಯಾರಿಸ್ (ಫ್ರಾನ್ಸ್) – ಜಿಹಾದಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನ ಪುತ್ರ ಒಮರ್ ಬಿನ್ ಲಾಡೆನ್ ಇವನಿಗೆ ಫ್ರಾನ್ಸ್‌ ದೇಶದಲ್ಲಿ ಪ್ರವೇಶಿಸುವುದನ್ನು ಶಾಶ್ವತವಾಗಿ ನಿರ್ಬಂಧಿಸಿದೆ. ಫ್ರಾನ್ಸ ಗೃಹಸಚಿವ ಬ್ರುನೋ ರಿತೆಒ ಇವರು ಅಕ್ಟೋಬರ್ 8 ರಂದು ಈ ಆದೇಶಕ್ಕೆ ಸಹಿ ಹಾಕಿದರು. ಅವರು ಮಾತನಾಡಿ, 43 ವರ್ಷದ ಓಮರ್ ಸಾಮಾಜಿಕ ಮಾಧ್ಯಮದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ ಪೋಸ್ಟ್ ಮಾಡಿರುವುದರಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆಯೆಂದು ಹೇಳಿದರು. ಒಮರ್ 2016 ರಿಂದ ಫ್ರಾನ್ಸನ ನಾರ್ಮಂಡಿ ನಗರದಲ್ಲಿ ವಾಸಿಸುತ್ತಿದ್ದನು.

ಒಮರ್ 2006 ರಲ್ಲಿ ಬ್ರಿಟಿಷ್ ಪ್ರಜೆ ಝೈನಾ ಮಹಮ್ಮದ್ ಅಲ್-ಸಬಾಹ್ (ಮೊದಲಿನ ಹೆಸರು ಜೆನ ಫೆಲಿಕ್ಸ ಬ್ರೌನ್) ಅವರನ್ನು ವಿವಾಹವಾದನು. ತದನಂತರ ಅವನಿಗೆ ಫ್ರಾನ್ಸ್‌ನಲ್ಲಿ ವಾಸಿಸಲು ಅನುಮತಿ ಸಿಕ್ಕಿತು. ಇಲ್ಲಿ ಅವನು ಚಿತ್ರ ಬಿಡಿಸುವ ಮೂಲಕ ಜೀವನ ಸಾಗಿಸುತ್ತಿದ್ದನು. ಕಳೆದ ವರ್ಷ ಅವನು ಒಸಾಮಾ ಬಿನ್ ಲಾಡೆನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುವ ಪೋಸ್ಟ್ ಹಾಕಿದ್ದರಿಂದ ಫ್ರಾನ್ಸ್ ಅವನನ್ನು ದೇಶದಲ್ಲಿ ವಾಸಿಸುವ ಅವನ ಪರವಾನಿಗೆಯನ್ನು 2 ವರ್ಷಗಳ ಕಾಲ ರದ್ದುಗೊಳಿಸಿತ್ತು. ಆಗಿನಿಂದ ಅವನು ಪತ್ನಿಯೊಂದಿಗೆ ಕತಾರ ದೇಶಕ್ಕೆ ಹೋದನು. ಈಗ ಮಾತ್ರ ಅವನ ಮೇಲೆ ಶಾಶ್ವತವಾಗಿ ನಿರ್ಬಂಧ ವಿಧಿಸಲಾಗಿದೆ.

ಒಮರ್ ಬಿನ್ ಲಾಡೆನ್ ನ ಇತಿಹಾಸ !

ಒಮರ್ ಇವನು ಒಸಾಮಾನ ನಾಲ್ಕನೇ ಮಗನಾಗಿದ್ದು, ಅವನು ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್-ಖೈದಾ ತರಬೇತಿ ಕೇಂದ್ರದಲ್ಲಿ ಭಯೋತ್ಪಾದನಾ ತರಬೇತಿಯನ್ನು ಪಡೆದಿದ್ದಾನೆ. ಒಮರ್ 1991 ರಿಂದ 1996 ರವರೆಗೆ ತನ್ನ ತಂದೆಯೊಂದಿಗೆ ಸುಡಾನ್‌ನಲ್ಲಿ ವಾಸಿಸುತ್ತಿದ್ದನು. ಒಮರ್ ನು 2001 ರಲ್ಲಿ, ತನ್ನ ತಂದೆಯನ್ನು ಬಿಟ್ಟ ಬಳಿಕ ತಾನು ಅಲ್-ಖೈದಾ ತರಬೇತಿ ಶಿಬಿರಗಳಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ಪಡೆದಿರುವುದನ್ನು ಒಪ್ಪಿಕೊಂಡಿದ್ದನು.

ಸಂಪಾದಕೀಯ ನಿಲುವು

ಸಾಮಾಜಿಕ ಮಾಧ್ಯಮದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ ಪೋಸ್ಟ್‌ ಹಾಕಿದ್ದರಿಂದ ಒಸಾಮಾ ಬಿನ್ ಲಾಡೆನ್ ನ ಮಗನಿಗೆ ಫ್ರಾನ್ಸ ತನ್ನ ದೇಶದಲ್ಲಿ ನಿಷೇಧಿಸಿರುವುದು ಭಾರತವು ಕಲಿಯಬೇಕಾಗಿದೆ. ಭಾರತದಲ್ಲಿ ಬಹಳಷ್ಟು ಮತಾಂಧರು ಭಯೋತ್ಪಾದಕತೆಯನ್ನು ಬೆಂಬಲಿಸುತ್ತಾರೆ. ಭಾರತ ಇಂತಹವರ ಮೇಲೆ ಏನು ಕ್ರಮ ಕೈಕೊಳ್ಳುವುದು ?