ನನಗೆ ಪಾಕಿಸ್ತಾನಕ್ಕೆ ಹೋಗಲಿಕ್ಕೆ ಇದ್ದರೆ, ನಾನು ೧೯೪೭ ರಲ್ಲಿಯೇ ಹೋಗಿರುತ್ತಿದ್ದೆ ! – ಫಾರೂಕ್ ಅಬ್ದುಲ್ಲಾ

ಅಬ್ದುಲ್ಲಾರಿಗೆ ಪಾಕಿಸ್ತಾನಕ್ಕೆ ಹೋಗಲು ಇಷ್ಟವಿರಲಿಲ್ಲ; ಯಾಕೆಂದರೆ ಅವರಿಗೆ ಕಾಶ್ಮೀರವು ಹಿಂದೂ ಬಹುಸಂಖ್ಯಾತ ರಾಜ್ಯವಾಗುವುದು ಇಷ್ಟವಿರಲಿಲ್ಲ. ಆದ್ದರಿಂದಲೇ ಅಬ್ದುಲ್ಲಾ ಅವರಂತಹ ಜನರು ಕಾಶ್ಮೀರದಲ್ಲಿ ಬಹುಸಂಖ್ಯಾತರಾಗಿ ಉಳಿದರು ಹಾಗೂ ನಂತರ ಅವರಲ್ಲಿ ಕೆಲವು ಮತಾಂಧರು ಹಿಂದೂಗಳ ವಂಶಸಂಹಾರವನ್ನು ಮಾಡಲು ಪ್ರಾರಂಭಿಸಿ ಕಾಶ್ಮೀರವನ್ನು ಹಿಂದೂರಹಿತರನ್ನಾಗಿ ಮಾಡಿದರು !

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) – ಯಾರೆಲ್ಲ ನನಗೆ ಪಾಕಿಸ್ತಾನಕ್ಕೆ ಹೋಗಬೇಕೆಂದು ಸಲಹೆ ನೀಡುತ್ತಿದ್ದಾರೆಯೋ ಅವರು ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು, ಏನೆಂದರೆ ನಮಗೆ ಪಾಕಿಸ್ತಾನಕ್ಕೆ ಹೋಗಲಿಕ್ಕೆ ಇದ್ದಿದ್ದರೆ ನಾವು ೧೯೪೭ ರಲ್ಲಿಯೇ ಹೋಗುತ್ತಿದ್ದೆವು. ಆ ಸಮಯದಲ್ಲಿ ನಮ್ಮನ್ನು ತಡೆಯಲು ಯಾರೂ ಇರಲಿಲ್ಲ; ಆದರೆ ನಾವು ಭಾರತದಲ್ಲಿಯೇ ಇರಲು ನಿರ್ಧರಿಸಿದ್ದೇವೆ. ಇದು ನಮ್ಮ ಭಾರತವಾಗಿದೆ. ಹೌದು ಮ.ಗಾಂಧಿಯವರ ಭಾರತವಾಗಿದೆ, ಬಿಜೆಪಿಯದ್ದಲ್ಲ, ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಇಲ್ಲಿ ನಡೆದ ನ್ಯಾಶನಲ್ ಕಾನ್ಫರೆನ್ಸ್‌ನ ಒಂದು ದೊಡ್ಡ ಸಮಾವೇಶದಲ್ಲಿ ಮಾತನಾಡುತ್ತಾ ಟೀಕಾತ್ಮಕವಾಗಿ ಹೇಳಿದರು.

‘ಜಮ್ಮು ಮತ್ತು ಕಾಶ್ಮೀರ ಹಳೆಯ ದರ್ಜೇ ಮರಳಿ ಸಿಗುವ ತನಕ ನಾನು ಸಾಯುವುದಿಲ್ಲ’ ಎಂದು ಸಹ ಅವರು ಹೇಳಿದರು. (ಇದು ಅಬ್ದುಲ್ಲಾ ಅವರ ಭಾರತವಾಗಿದ್ದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತದ ಇತರ ರಾಜ್ಯಗಳಿಗಿಂತ ವಿಭಿನ್ನ ಸ್ಥಾನಮಾನವನ್ನು ನೀಡುವ ೩೭೦ರ ವಿಧಿ(ಕಲಂ) ಏಕೆ ಬೇಕು, ದೇಶದ ವಿಭಜನೆಯ ವಿಚಾರವನ್ನು ಮಾಡುವ ಇಂತಹ ಜನರಿಗೆ ನಿಜವಾಗಿ ಜೀವಾವಧಿ ಶಿಕ್ಷೆಯನ್ನು ನೀಡುವುದು ಅಗತ್ಯವಿದೆ. – ಸಂಪಾದಕ) ಅಬ್ದುಲ್ಲಾ ಅವರು ಭಾಜಪವು ದೇಶದ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು. ಭಾಜಪವು ಜಮ್ಮು ಮತ್ತು ಕಾಶ್ಮೀರದೊಂದಿಗೆ ಲಡಾಖನಲ್ಲಿನ ಜನರಿಗೆ ಸುಳ್ಳು ಭರವಸೆ ನೀಡಿದೆ ಎಂದು ಆರೋಪಿಸಿದರು.