ಈಗ ಕೇರಳದಲ್ಲಿಯೂ ಅರ್ಚಕರಾಗಿ ಪರಿಶಿಷ್ಟ ಜಾತಿಯ ವ್ಯಕ್ತಿಯ ನೇಮಕ.

ತಿರುವಾಂಕೂರು ದೇವಸ್ವಮ್ ಮಂಡಳಿಯಿಂದ ಅರೆಕಾಲಿಕ ಅರ್ಚಕರ ಹುದ್ದೆಗೆ ನೇಮಕಾತಿ

ಹಿಂದೂ ದೇವಾಲಯಗಳಲ್ಲಿ ಜಾತಿಗನುಸಾರ ಅರ್ಚಕರನ್ನು ನೇಮಿಸುವ ಆಡಳಿತಗಾರರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಧರ್ಮಶಾಸ್ತ್ರವನ್ನು ಅವಮಾನಿಸುತ್ತಿದ್ದಾರೆ. ಈ ರೀತಿಯ ಹಸ್ತಕ್ಷೇಪವನ್ನು ಯಾವುದೇ ಸರಕಾರವು ಇತರ ಧರ್ಮದ ಅಂದರೆ ಮೌಲಾನ ಮತ್ತು ಪಾದ್ರಿಗಳಂತಹ ನೇಮಕಾತಿಯ ಸಂದರ್ಭದಲ್ಲಿ ಮಾಡುವುದಿಲ್ಲ. ಏಕೆಂದರೆ ಚರ್ಚುಗಳು ಮತ್ತು ಮಸೀದಿಗಳನ್ನು ಎಂದಿಗೂ ಸರಕಾರೀಕರಣ ಗೊಳಿಸಲಾಗುವುದಿಲ್ಲ. ಹಿಂದೂ ದೇವಾಲಯಗಳ ಸರಕಾರಿಕರಣ ಆಗುತ್ತಿರುವುದರಿಂದ ಇಂತಹ ಕೃತಿಗಳನ್ನು ಮಾಡಲಾಗುತ್ತಿದೆ. ಧರ್ಮಶಾಸ್ತ್ರವನ್ನು ಬದಿಗೊತ್ತಿರುವುದರಿಂದ ಹೀಗೆ ನಡೆಯುತ್ತಿದೆ ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರು ಅದನ್ನು ಪ್ರಗತಿ(ಅಧೋಗತಿ)ಪರ ಎಂದು ತಿಳಿದು ಮೌನವಾಗಿ ನೋಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಮತ್ತು ಹಿಂದೂ ಧರ್ಮಶಾಸ್ತ್ರದ ಆಚರಣೆ ಮಾಡಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !

ತಿರುವನಂತಪುರಂ (ಕೇರಳ) – ಕೇರಳದ ತ್ರಾವಣಕೋರ ದೇವಸ್ವಂ ಬೋರ್ಡ್ ಇದೇ ಮೊದಲ ಬಾರಿಗೆ ತನ್ನ ವ್ಯಾಪ್ತಿಯಲ್ಲಿರುವ ೧೨೦೦ ಕ್ಕೂ ಹೆಚ್ಚು ದೇವಾಲಯಗಳಲ್ಲಿ ಒಂದರಲ್ಲಿ ಪರಿಶಿಷ್ಟ ಜಾತಿ ವ್ಯಕ್ತಿಗಳನ್ನು ದೇವಾಲಯದ ಅರ್ಚಕರಾಗಿ ನೇಮಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ಒಬ್ಬ ವ್ಯಕ್ತಿಯನ್ನು ಅರೆಕಾಲಿಕ ಅರ್ಚಕರಾಗಿ ನೇಮಿಸಲಾಗುವುದು. ಇದೇ ಮಂಡಳಿಯು ಪ್ರಸಿದ್ಧ ಶಬರಿಮಲೆಯ ಭಗವಾನ್ ಅಯ್ಯಪ್ಪ ದೇವಾಲಯವನ್ನೂ ನಡೆಸುತ್ತಿದೆ. ಕೇರಳದ ಕಮ್ಯುನಿಸ್ಟ್ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಸರ್ಕಾರವು ಕಳೆದ ನಾಲ್ಕೂವರೆ ವರ್ಷಗಳಲ್ಲಿ ವಿವಿಧ ದೇವಾಲಯಗಳಲ್ಲಿ ಒಟ್ಟು ೧೩೩ ಬ್ರಾಹ್ಮಣೇತರ ಪುರೋಹಿತರನ್ನು ನೇಮಿಸಿದೆ. ಈ ಪೈಕಿ ೧೯ ಅರ್ಚಕರು ಅರೆಕಾಲಿಕ ಅರ್ಚಕರಾಗಿದ್ದಾರೆ. ಅದರಲ್ಲಿಯೂ ಪರಿಶಿಷ್ಟ ಜಾತಿಯ ೧೮ ಮಂದಿ ಮತ್ತು ಪರಿಶಿಷ್ಟ ಪಂಗಡದ ಒಬ್ಬರು ಅರ್ಚಕರು ಇದ್ದಾರೆ.

ಕೇರಳದ ದೇವಸ್ವಂ ಸಚಿವ ಕೆ. ಸುರೇಂದ್ರನ್ ಇವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ೨೦೧೭ ರಲ್ಲಿ ಪ್ರಕಟವಾದ ವರ್ಗ ಪಟ್ಟಿಯಿಂದ ಇಲ್ಲಿಯವರೆಗೆ ತ್ರಾವಣಕೋರ ದೇವಸ್ವಂ ಬೋರ್ಡ್‌ನ ದೇವಾಲಯಗಳಲ್ಲಿ ೩೧೦ ಜನರನ್ನು ಅರೆಕಾಲಿಕ ಅರ್ಚಕರಾಗಿ ನೇಮಿಸಲಾಗಿದೆ ಎಂದು ಹೇಳಿದರು.