ಶಬರಿಮಲಾ ದೇವಸ್ಥಾನದ ದೀರ್ಘಕಾಲದ ವರೆಗೆ ಸಂಗ್ರಹಿಸಿಟ್ಟಿದ್ದ ಅರವಣ ಪ್ರಸಾದವನ್ನು ಗೊಬ್ಬರವಾಗಿ ಪರಿವರ್ತಿಸಲಾಗುವುದು

  • ತ್ರಾವಣಕೋರ ದೇವಸ್ವಮ್ ಬೋರ್ಡ್‌ನ ನಿರ್ಣಯ

  • ಐದೂವರೆ ಕೋಟಿ ರೂಪಾಯಿಗಳ ಈ ಪ್ರಸಾದವನ್ನು 6 ಲಕ್ಷ 65 ಸಾವಿರ ಚಿಕ್ಕ ಡಬ್ಬಿಗಳಲ್ಲಿ ಸಂಗ್ರಹಿಸಿಡಲಾಗಿತ್ತು

ತಿರುವನಂತಪುರಮ(ಕೇರಳ) – ಶಬರಿಮಲಾ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಬರುವ ಭಕ್ತರಿಗೆ `ಅರವಣ ಪ್ರಸಾದ’ ನೀಡಲಾಗುತ್ತದೆ.ಅಯ್ಯಪ್ಪಾ ಸ್ವಾಮಿಯ ಚಿತ್ರ ಮುದ್ರಿತಗೊಂಡಿರುವ ಚಿಕ್ಕ ಡಬ್ಬಿಯಲ್ಲಿ ಈ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಕಳೆದ ಒಂದು ವರ್ಷದಿಂದ ಸಂಗ್ರಹಿಸಿಡಲಾಗಿದ್ದ ಅರವಣ ಪ್ರಸಾದದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಳುಗಳು ಕಂಡು ಬಂದಿದ್ದರಿಂದ 2023 ರ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ದೂರುದಾರರು ಈ ಸಂದರ್ಭದಲ್ಲಿ ಯಾವುದೇ ದಾಖಲೆಗಳನ್ನು ಹಾಜರು ಪಡಿಸಿರಲಿಲ್ಲ; ಎಂದು ಸರ್ವೋಚ್ಚ ನ್ಯಾಯಾಲಯವು ದೂರನ್ನು ವಜಾಗೊಳಿಸಿತ್ತು. ತದನಂತರ ಈ ದೇವಸ್ಥಾನದ ನಿಯಂತ್ರಣ ಹೊಂದಿರುವ ತ್ರಾವಣಕೋರ ದೇವಸ್ವಮ್ ಬೋರ್ಡ್‌ನ ಸುಮಾರು 6 ಲಕ್ಷ 65 ಸಾವಿರ ಡಬ್ಬಿಗಳಲ್ಲಿ (ಟಿನ್ ಕಂಟೇನರಗಳಲ್ಲಿ) ಸಂಗ್ರಹಿಸಲಾಗಿದ್ದ ಅರವಣ ಪ್ರಸಾದವನ್ನು ದೀರ್ಘಕಾಲದ ವರೆಗೆ ಸಂಗ್ರಹಿಸಿಟ್ಟಿದ್ದರಿಂದ ಭಕ್ತರಿಗೆ ವಿತರಿಸದಿರುವಂತೆ ನಿರ್ಣಯಿಸಿದ್ದಾರೆ. ಮೊದಲು ಈ ಪ್ರಸಾದವನ್ನು ಕಾಡಿನಲ್ಲಿ ಎಸೆಯಲು ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು; ಆದರೆ ಪ್ರಸಾದವನ್ನು ಅರಣ್ಯದಲ್ಲಿ ಎಸೆಯುವ ಬದಲಾಗಿ ಅದನ್ನು ವೈಜ್ಞಾನಿಕ ಪದ್ಧತಿಯಿಂದ ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸುವುದು ಸೂಕ್ತವೆಂದು ಅಂತಿಮವಾಗಿ ನಿರ್ಧರಿಸಲಾಯಿತು. ಈ ಪ್ರಸಾದದ ಒಟ್ಟು ಮೌಲ್ಯ ಐದೂವರೆ ಕೋಟಿಗಳಷ್ಟು ಇದೆಯೆಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಯಾವುದೇ ಪ್ರಸಾದ ದೀರ್ಘಕಾಲ ಏಕೆ ಸಂಗ್ರಹಿಸಿಡಲಾಗುತ್ತದೆ ?