ಜಮ್ಮು ಕಾಶ್ಮೀರ್ : ಭಯೋತ್ಪಾದಕರು ಅಪಹರಿಸಿದ್ದ ಯೋಧನ ಶವ ಪತ್ತೆ !

೨ ಸೈನಿಕರ ಅಪಹರಣ ಆಗಿತ್ತು

ಶ್ರೀನಗರ (ಜಮ್ಮು ಕಾಶ್ಮೀರ) – ಭಯೋತ್ಪಾದಕರು ದಕ್ಷಿಣ ಕಾಶ್ಮೀರದಲ್ಲಿ ಅನಂತನಾಗ ಜಿಲ್ಲೆಯಲ್ಲಿರುವ ಶಾಂಗಸ್ ಮತ್ತು ಕೊಕರನಾಗ ಇಲ್ಲಿಯ ಕಾಡುಗಳಲ್ಲಿ ಗಸ್ತು ಹಾಕುತ್ತಿರುವ ಪ್ರಾದೇಶಿಕ ಸೈನ್ಯದ ೨ ಸೈನಿಕರನ್ನು ಅಕ್ಟೋಬರ್ ೮ ರಂದು ಅಪಹರಿಸಿದ್ದರು. ಇದರಲ್ಲಿನ ಓರ್ವ ಸೈನಿಕನು ಗಾಯಗೊಂಡಿರುವ ಸ್ಥಿತಿಯಲ್ಲಿ ಭಯೋತ್ಪಾದಕರ ಹಿಡಿತದಿಂದ ತಪ್ಪಿಸಿಕೊಂಡಿದ್ದನು ಹಾಗೂ ಇನ್ನೊಬ್ಬ ಸೈನಿಕನನ್ನು ಒತ್ತೆ ಇಟ್ಟುಕೊಂಡಿರುವ ಮಾಹಿತಿ ಲಭ್ಯವಾಗಿತ್ತು. ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಸಮಯದಲ್ಲಿ ಸೈನಿಕರನ್ನು ಅಪಹರಿಸಲಾಗಿತ್ತು. ನಾಪತ್ತೆ ಸೈನಿಕರನ್ನು ಹುಡುಕುವುದಕ್ಕಾಗಿ ಅಕ್ಟೋಬರ್ ೯ ರಂದು ಬೆಳಿಗ್ಗೆ ಪರಿಸರದಲ್ಲಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು. ಆ ಸಮಯದಲ್ಲಿ ಕೋಕರನಾಗ ಪ್ರದೇಶದಲ್ಲಿನ ಉತ್ರುಸು ಕಾಡಿನಲ್ಲಿ ಈ ಸೈನಿಕನ ಶವ ದೊರೆತಿದೆ. ಮುಕೇಧಮಪೊರಾ ನೊಗಾಮ್ ಇಲ್ಲಿಯ ನಿವಾಸಿ ಆಗಿರುವ ಈ ಸೈನಿಕನ ಹೆಸರು ಹಿಲಾಲ ಅಹಮದ್ ಭಟ್ ಎಂದಾಗಿತ್ತು ಎಂದು ಸೈನ್ಯವು ಮಾಹಿತಿ ನೀಡಿದೆ.

‘ಚಿನಾರ್ ಕಾರ್ಪ್ಸ್’ ಒಂದು ಪೋಸ್ಟ್ ನಲ್ಲಿ, ಗೌಪ್ಯ ಮಾಹಿತಿಯ ಆಧಾರದಲ್ಲಿ ಭಾರತೀಯ ಸೈನಿಕರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಕ್ಟೋಬರ್ 8 ರಂದು ಕಾಜ್ವಾನ್ ಜಂಗಲ್ ಪ್ರದೇಶದಲ್ಲಿ ಜಂಟಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ವೇಳೆ ಕಾಡಿನಲ್ಲಿ ಗಸ್ತು ತಿರುಗುತ್ತಿದ್ದಾಗ ಹಿಲಾಲ್ ಅಹಮದ್ ಭಟ್ ಅವರನ್ನು ಅಪಹರಿಸಲಾಗಿತ್ತು.

ಸಂಪಾದಕೀಯ ನಿಲುವು

  • ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕಪ್ರೇಮಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಇವರ ಸರಕಾರ ರಚನೆ ಆಗುವುದರಿಂದ ಈ ರೀತಿಯ ಘಟನೆ ಈಗ ಮೇಲಿಂದ ಮೇಲೆ ಘಟಿಸಿದರೆ ಆಶ್ಚರ್ಯ ಅನೀಸಬಾರದು !
  • ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ಸರಕಾರ ರಚನೆ ಆಗುವುದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಆದಷ್ಟು ಬೇಗನೆ ಹಿಡಿತ ಸಾಧಿಸುವುದು ಈಗ ಹೆಚ್ಚು ಅವಶ್ಯಕವಾಗಿದೆ. ಇದನ್ನು ಭಾರತ ಸರಕಾರ ಗಮನಕ್ಕೆ ತೆಗೆದುಕೊಳ್ಳಬೇಕು !