ನವದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ರಾಷ್ಟ್ರಪತಿ ಮಹಮ್ಮದ್ ಮುಯೀಜ್ಜೂ ಅವರ ನಡುವೆ ನವದೆಹಲಿಯ ಹೈದರಾಬಾದ್ ಹೌಸನಲ್ಲಿ ಸಭೆ ನಡೆಯಿತು. ಈ ಸಭೆಯ ನಂತರ ಉಭಯ ನಾಯಕರು ಜಂಟಿ ಸುತ್ತೋಲೆ ಪ್ರಸಾರ ಮಾಡಿದರು. ಪ್ರಧಾನಮಂತ್ರಿ ಮೋದಿ ಅವರು, ನಾವು ಸಂರಕ್ಷಣೆ ಮತ್ತು ಸುರಕ್ಷೆ ಸಹಕಾರ್ಯದಲ್ಲಿನ ವಿವಿಧ ಅಂಶಗಳ ಕುರಿತು ಕ್ರಮವಾರು ಚರ್ಚಿಸಿದ್ದೇವೆ. ಅಭಿವೃದ್ಧಿಯು ನಮ್ಮ ಸಂಬಂಧದ ಒಂದು ಮಹತ್ವದ ಅಂಶವಾಗಿದೆ ಮತ್ತು ನಾವು ಯಾವಾಗಲೂ ಮಾಲ್ಡೀವ್ಸ್ ಜನರ ಹಿತಕ್ಕೆ ಪ್ರಾಧಾನ್ಯತೆ ನೀಡಿದ್ದೇವೆ. ನಾವು ಮಾಲ್ಡೀವ್ಸ್ ನಲ್ಲಿ ಮೂಲಭೂತ ಸೌಲಭ್ಯದ ವಿಕಾಸಕ್ಕಾಗಿ ಸಿದ್ದರಿದ್ದೇವೆ. ಮಾಲ್ಡೀವ್ಸ್ ಜನರ ಜೀವನಾವಶ್ಯಕ ವಸ್ತುಗಳ ಬೇಡಿಕೆಯನ್ನು ಪೂರೈಸುವದಾಗಿರಲಿ, ನೈಸರ್ಗಿಕ ವಿಪತ್ತಿನಲ್ಲಿ ಕುಡಿಯುವ ನೀರು ಪೂರೈಕೆ ಆಗಿರಲಿ ಅಥವಾ ಕೋವಿಡ್ ಸಮಯದಲ್ಲಿ ಲಸಿಕೆ ಪೂರೈಕೆಯಾಗಿರಲಿ, ಭಾರತ ಯಾವಾಗಲು ತನ್ನ ನೆರೆಯ ದೇಶದ ಕುರಿತಾದ ಜವಾಬ್ದಾರಿಯನ್ನು ನೆರವೇರಿಸಿದೆ ಎಂದು ಹೇಳಿದರು.
ಮೋದಿ ಅವರನ್ನು ಮಾಲ್ಡೀವ್ಸ್ ಪ್ರವಾಸಕ್ಕೆ ಆಮಂತ್ರಿಸಿದ ಮುಯೀಜ್ಜೂ
ಮಾಲ್ಡೀವ್ಸ್ ರಾಷ್ಟ್ರಪತಿ ಮಹಮ್ಮದ್ ಮುಯೀಜ್ಜೂ ಅವರು ಪ್ರಧಾನಮಂತ್ರಿ ಮೋದಿ ಅವರನ್ನು ಮಾಲ್ಡೀವ್ಸ್ ಪ್ರವಾಸಕ್ಕೆ ಆಮಂತ್ರಿಸಿದ್ದಾರೆ. ನಾನು ಪ್ರಧಾನಮಂತ್ರಿ ಮೋದಿ ಅವರನ್ನು ಮಾಲ್ಡೀವ್ಸ್ ಭೇಟಿಗಾಗಿ ಆಮಂತ್ರಿಸಲು ಇಚ್ಚಿಸುತ್ತೇನೆ. ಮಾಲ್ಡೀವ್ಸ್ ನ ಸಂಕಟದ ಸಮಯದಲ್ಲಿ ಭಾರತ ಯಾವತ್ತೂ ನಮ್ಮ ಬೆಂಬಲಕ್ಕೆ ನಿಂತಿದೆ. ಮಾಲ್ಡೀವ್ಸ್ ಗೆ ನೀಡಿದ ಸಹಾಯಕ್ಕಾಗಿ ನಾನು ಪ್ರಧಾನಮಂತ್ರಿ ಮೋದಿ ಮತ್ತು ಭಾರತ ಸರಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮುಯೀಜ್ಜೂ ಹೇಳಿದರು.
ಭಾರತೀಯ ಪ್ರವಾಸಿಗರು ಪ್ರವಾಸಕ್ಕೆ ಬರಲು ಮುಯೀಜ್ಜೂ ಅವರ ಕರೆ !
ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕೆ ಬರಲು ಕರೆ ನೀಡುತ್ತಾ ಮುಯೀಜ್ಜೂ, ನೆರೆಯ ಮತ್ತು ಮಿತ್ರರನ್ನು ಗೌರವಿಸುವುದು ಭಾರತೀಯರು ನಮಗೆ ನೀಡಿದ ಸರ್ಕಾರಾತ್ಮಕ ಕೊಡುಗೆಯಾಗಿದೆ. ಭಾರತೀಯ ಪ್ರವಾಸಿಗರಿಗೆ ನಮ್ಮ ದೇಶದಲ್ಲಿ ಸ್ವಾಗತವಿವೆ. ಮಾಲ್ಡೀವ್ಸ್ ಮತ್ತು ಭಾರತದಲ್ಲಿನ ಸಂಬಂಧ ಯಾವಾಗಲೂ ದೃಢವಾಗಿತ್ತು ಮತ್ತು ಈ ಭೇಟಿಯಿಂದ ಈ ಸಂಬಂಧ ಇನ್ನಷ್ಟು ದೃಢವಾಗುವುದು ಎಂದು ನನಗೆ ವಿಶ್ವಾಸವಿದೆ ಎಂದವರು ಹೇಳಿದರು.