ದೇವಸ್ಥಾನದ ಭೂಮಿಯನ್ನು ಧಾರ್ಮಿಕ ಕಾರ್ಯವನ್ನು ಹೊರತು ಪಡಿಸಿ ಇತರ ಯಾವುದಕ್ಕೂ ಬಳಸಬಾರದು ! – ಮದ್ರಾಸ ಉಚ್ಚ ನ್ಯಾಯಾಲಯ

ದೇವಸ್ಥಾನದ ಮೇಲಿನ ಅತಿಕ್ರಮಣವನ್ನು ತೆಗೆಯುವಂತೆ ಆದೇಶ

  • ದೇವಸ್ಥಾನದ ಸರಕಾರಿಕರಣವಾದ ನಂತರ ದೇವಸ್ಥಾನದ ಭೂಮಿಯನ್ನು ಯಾವುದಕ್ಕಾದರೂ ಬಳಸಲಾಗುತ್ತದೆ. ಆದ್ದರಿಂದ ನ್ಯಾಯಾಲಯಕ್ಕೆ ಈ ಆದೇಶವನ್ನು ನೀಡಬೇಕಾಗುತ್ತಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಈಗ ಹಿಂದೂಗಳು ದೇವಸ್ಥಾನದ ಸರಕಾರಿಕರಣವಾಗುವುದನ್ನೇ ತಡೆಯಲು ನ್ಯಾಯಾಂಗ ಹೋರಾಟ ಮಾಡಬೇಕಿದೆ !

  • ಸರಕಾರಿಕರಣ ಆಗಿರುವ ದೇವಸ್ಥಾನಗಳ ಭೂಮಿಯ ಮೇಲೆ ಹೇಗೆ ಅತಿಕ್ರಮಣ ಆಗುತ್ತದೆ ? ಸರಕಾರ ಮಲಗಿರುತ್ತದೆಯೇ ? ಹಾಗೂ ಅತಿಕ್ರಮಣವಾದ ನಂತರ ಅದನ್ನು ತೆಗೆಯಲು ನ್ಯಾಯಾಲಯ ಆದೇಶ ನೀಡುವ ತನಕ ಸರಕಾರ ಏನು ಮಾಡುತ್ತಿರುತ್ತದೆ ?

ಚೆನ್ನೈ(ತಮಿಳುನಾಡು) – ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ರಾಜ್ಯ ಸರಕಾರಕ್ಕೆ, ಧಾರ್ಮಿಕ ಕಾರ್ಯಕ್ರಮವನ್ನು ಹೊರತು ಪಡಿಸಿ ಇತರ ಯಾವುದೇ ಕಾರ್ಯಕ್ರಮಗಳಿಗೆ ದೇವಸ್ಥಾನದ ಭೂಮಿಯನ್ನು ಬಳಸಬಾರದು, ತಮಿಳುನಾಡಿನ ದೇವಸ್ಥಾನಗಳು ಕೇವಲ ಪ್ರಾಚೀನ ಸಂಸ್ಕೃತಿಯ ಸಂಕೇತವಷ್ಟೇ ಆಗಿರದೇ ಅವು ಕಲೆ, ವಿಜ್ಞಾನ ಹಾಗೂ ಮೂರ್ತಿಕಲೆಯ ಕ್ಷೇತ್ರದಲ್ಲಿಯೂ ಪ್ರತಿಭೆಯ ಗೌರವದ ಹಾಗೂ ಜ್ಞಾನದ ಸಂಕೇತ ಹಾಗೂ ಪ್ರಮಾಣವಾಗಿದೆ, ಎಂದು ಹೇಳಿದೆ (ನ್ಯಾಯಾಲಯಕ್ಕೆ ತಿಳಿಯುವ ವಿಷಯ ಸರಕಾರಕ್ಕೆ ಏಕೆ ತಿಳಿಯುವುದಿಲ್ಲ ? ಅಥವಾ ಸರಕಾರ ದೇವಸ್ಥಾನಗಳನ್ನು ಕೇವಲ ಹಣ ಸಂಪಾದನೆ ಮಾಡುವ ಸಾಧನವೆಂದು ನೋಡುತ್ತದೆಯೇ ? – ಸಂಪಾದಕರು)

೧. ನ್ಯಾಯಾಲಯವು ರಾಜ್ಯದ ಹಿಂದೂ ಧಾರ್ಮಿಕ ಹಾಗೂ ಧರ್ಮಾರ್ಥ ವ್ಯವಸ್ಥಾಪನೆಯ ವಿಭಾಗಕ್ಕೆ, ಅದು ಆಯಾ ಸಮಯದಲ್ಲಿ ವರದಿಯನ್ನು ಸಲ್ಲಿಸಲು ಒಬ್ಬ ಅಧಿಕಾರಿಯನ್ನು ನೇಮಿಸಬೇಕು. ಅದೇರೀತಿ ದೇವಸ್ಥಾನದ ಭೂಮಿಯ ಮೇಲಿನ ಅತಿಕ್ರಮಣವನ್ನು ಪತ್ತೆ ಹಚ್ಚಬೇಕು ಹಾಗೂ ಭೂಮಿಯನ್ನು ಸುರಕ್ಷಿತವಾಗಿಡಬೇಕು, ಎಂದು ಹೇಳಿದೆ. (ಈ ರೀತಿಯಲ್ಲಿ ಏಕೆ ಆದೇಶ ನೀಡಬೇಕಾಗುತ್ತದೆ ? ಸರಕಾರಕ್ಕೆ ಇದು ತಿಳಿಯುವುದಿಲ್ಲವೇ ? -ಸಂಪಾದಕರು)

೨. ರಾಜ್ಯ ನೀಲಕಂರಯಿಯ ಸಾಕ್ಷಿ ಮುಥಮ್ಮನ ದೇವಸ್ಥಾನ ಹಾಗೂ ಸಾಲೇಮ್ ಇಲ್ಲಿಯ ಕೊಟ್ಟ್ಯಿ ಮರಿಯಮ್ಮನ ದೇವಸ್ಥಾನದ ಭೂಮಿಯ ಮೇಲೆ ಅತಿಕ್ರಮಣದ ಬಗ್ಗೆ ಈ ಖಟ್ಲೆ ನಡೆಯುತ್ತಿದೆ. ಆ ಬಗ್ಗೆ ನ್ಯಾಯಾಲಯವು ಈ ಮೇಲಿನ ಆದೇಶವನ್ನು ನೀಡಿದೆ. ನ್ಯಾಯಾಲಯವು ಈ ಸಮಯದಲ್ಲಿ ಅತಿಕ್ರಮಣವನ್ನು ತೆಗೆಯಲು ಆದೇಶ ನೀಡಿತು.

೩. ನ್ಯಾಯಾಲಯವು ಈ ಸಮಯದಲ್ಲಿ ದೇವಸ್ಥಾನದ ಉಸ್ತುವಾರಿ ಹಾಗೂ ಅದರ ಗುಣವೈಶಿಷ್ಟ್ಯಗಳ ಬಗ್ಗೆ ನಿಗಾವಹಿಸುವಂತೆ ಆದೇಶ ನೀಡಿದೆ. ಅದೇರೀತಿ ಹಿಂದೂ ಧಾರ್ಮಿಕ ಹಾಗೂ ಧರ್ಮಾರ್ಥ ಆಡಳಿತ ಮಂಡಳಿಗೆ ದೇವಸ್ಥಾನದ ಸಂಪತ್ತಿನ ಉಸ್ತುವಾರಿ ಸರಿಯಾಗಿ ನೋಡಿಲ್ಲ ಎಂದು ಛೀಮಾರಿ ಹಾಕಿದೆ. (ದೇವಸ್ಥಾನಗಳ ಸರಕಾರಿಕರಣದ ನಂತರ ಇದೇ ರೀತಿ ನಡೆಯುತ್ತದೆ. ಆದ್ದರಿಂದ ಹಿಂದೂಗಳ ದೇವಸ್ಥಾನಗಳು ಭಕ್ತರ ನಿಯಂತ್ರಣದಲ್ಲಿ ಇರಬೇಕು. ಅದಕ್ಕಾಗಿ ನ್ಯಾಯಾಲಯವು ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)