‘ಲವ್ ಜಿಹಾದ್’ಗೆ ಪ್ರ್ರೇತ್ಸಾಹ ನೀಡುವ ‘ಲಕ್ಷ್ಮೀ’ ಚಲನಚಿತ್ರವನ್ನು ನಿರ್ಬಂಧಿಸಿರಿ !

ವಜ್ರದಳ ಸಂಘಟನೆಯ ವಿಮಲಚಂದ ಜೈನ್ ಇವರಿಂದ ಧಾರಾವಿ(ಮುಂಬಯಿ)ಯ ಪೊಲೀಸ್ ಠಾಣೆಯಲ್ಲಿ ದೂರು

ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಯನ್ನು ನೋಯಿಸಿದರೇ ಕೂಡಲೇ ಕ್ರಮ ಕೈಗೊಳ್ಳುವ ಪೊಲೀಸರು ಬಹುಸಂಖ್ಯಾತ ಹಿಂದೂಗಳ ದೂರುಗಳಿಗೆ ಏಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳತ್ತ ಆಗುತ್ತಿರುವ ದುರ್ಲಕ್ಷವು ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಅನಿವಾರ್ಯಗೊಳಿಸುತ್ತದೆ !

ಮುಂಬಯಿ, ನವೆಂಬರ ೬ (ವರದಿ.) – ‘ಲಕ್ಷ್ಮೀ’ ಈ ಚಲನಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ನಟನನ್ನು ಮುಸಲ್ಮಾನ ಹಾಗೂ ನಟಿಯನ್ನು ಬ್ರಾಹ್ಮಣ ಎಂದು ತೋರಿಸಿ ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡಲಾಗಿದೆ. ಆದ್ದರಿಂದ ಈ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು, ಎಂದು ಧಾರಾವಿಯ ವಜ್ರದಳ ಸಂಘಟನೆಯ ಕೋಶಾಧ್ಯಕ್ಷ ಶ್ರೀ. ವಿಮಲಚಂದ ಜೈನ್ ಇವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಅವರು ನವೆಂಬರ ೪ ರಂದು ಧಾರಾವಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ದಿಪಾವಳಿಯ ಸಮಯದಲ್ಲಿಯೇ ಚಲನಚಿತ್ರದ ಹೆಸರು ‘ಲಕ್ಷ್ಮೀ’ ಎಂದು ಇಟ್ಟು ಅದರಲ್ಲಿ ದೇವಿಯ ಹೆಸರನ್ನು ಅವಮಾನಿಸಲಾಗಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ, ಎಂದೂ ಅವರು ಈ ದೂರಿನಲ್ಲಿ ತಿಳಿಸಿದ್ದಾರೆ. ಜೈನ್ ಇವರು ಚಲನಚಿತ್ರದ ‘ಟ್ರೆಲರ್’ನಲ್ಲಿರುವ ಆಕ್ಷೇಪಾರ್ಹ ಭಾಗಗಳ ಉದಾಹರಣೆಯನ್ನೂ ಈ ದೂರಿನಲ್ಲಿ ಉಲ್ಲೇಖಿಸಿದ್ದಾರೆ.