ಯಾವುದೇ ವ್ಯಕ್ತಿಗೆ ಅವನ ಧಾರ್ಮಿಕ ಶ್ರದ್ಧೆ ಅಥವಾ ಆಚರಣೆಯನ್ನು ಇನ್ನೊಬ್ಬರ ಮೇಲೆ ಹೇರುವಂತಿಲ್ಲ ! – ಕೇರಳ ಉಚ್ಚನ್ಯಾಯಾಲಯ

ಕೇರಳ ಉಚ್ಚನ್ಯಾಯಾಲಯದ ಸ್ಪಷ್ಟನೆ !

ತಿರುವನಂತಪುರಂ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ಒಂದು ಮಹತ್ವಪೂರ್ಣ ತೀರ್ಪಿನಲ್ಲಿ, ‘ಯಾವುದೇ ವ್ಯಕ್ತಿಗೆ ಅವನ ಧಾರ್ಮಿಕ ಶ್ರದ್ಧೆ ಅಥವಾ ಆಚರಣೆಯನ್ನು ಇನ್ನೊಬ್ಬರ ಮೇಲೆ ಹೇರುವ ಅಧಿಕಾರವಿಲ್ಲ’ ಎಂದು ಹೇಳಿದೆ. ನ್ಯಾಯಾಲಯವು ಈ ಪ್ರಕರಣದಲ್ಲಿ ಒರ್ವ ಪುರುಷನ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತು.

1. ಈ ಪ್ರಕರಣದಲ್ಲಿ ಓರ್ವ ಮುಸಲ್ಮಾನ ಹುಡುಗಿಯ ಮೇಲೆ ಶರೀಯತ ಕಾನೂನನ್ನು ಉಲ್ಲಂಘಿಸಿರುವ ಮತ್ತು ವ್ಯಭಿಚಾರ ಮಾಡಿರುವ ಆರೋಪವಿತ್ತು; ಕಾರಣ ಅವಳು ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಹಣಕಾಸು ಸಚಿವ ಡಾ. ಥಾಮಸ ಐಜಾಕ್ ಇವರೊಂದಿಗೆ ಹಸ್ತಲಾಘವ ಮಾಡಿದ್ದಳು.

2. ಹಣಕಾಸು ಸಚಿವ ಡಾ. ಥಾಮಸ ಐಜಾಕ ಕೇರಳದ ಒಂದು ಕಾಲೇಜಿಗೆ ಭೇಟಿ ನೀಡಿದಾಗ ಈ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ದೂರುದಾರ (ಮುಸಲ್ಮಾನ ಹುಡುಗಿ) ಸಚಿವರಿಗೆ ಪ್ರಶ್ನೆ ಕೇಳಿದಳು ಮತ್ತು ಉಡುಗೊರೆಯನ್ನು ಸ್ವೀಕರಿಸುವಾಗ ಹಸ್ತಲಾಘವ ಮಾಡಿದ್ದಳು. ಇದು ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿತ್ತು.

3. ಈ ಘಟನೆಯ ಬಳಿಕ ಆರೋಪಿಯು ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಒಂದು ಪೋಸ್ಟ್ ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದನು. ಇದರಲ್ಲಿ ಅವನು ಹುಡುಗಿಗೆ ಶರಿಯತ ಕಾನೂನಿನ ಉಲ್ಲಂಘನೆ ಮತ್ತು ಇಸ್ಲಾಮಿಕ್ ಸಂಪ್ರದಾಯಗಳನ್ನು ಅವಮಾನಿಸಿದ್ದಾಳೆ ಎಂದು ಆರೋಪಿಸಿದ್ದನು. ತದನಂತರ ಹುಡುಗಿಯು ಆರೋಪಿಯ ವಿರುದ್ಧ ಅಪರಾಧ ದಾಖಲಿಸಿದ್ದಾಳೆ.

4. ಕೇರಳದ ಉಚ್ಚ ನ್ಯಾಯಾಲಯವು, ಹಸ್ತಲಾಘವ ಇದು ಒಂದು ಸಾಮಾನ್ಯ ಮತ್ತು ಸಾಂಪ್ರದಾಯಿಕ ಶಿಷ್ಟಾಚಾರವಾಗಿದೆ. ಆಧುನಿಕ ಸಮಾಜದಲ್ಲಿ ಆತ್ಮವಿಶ್ವಾಸ ಮತ್ತು ವೃತ್ತಿಪರತೆಯ ಸಂಕೇತವೆಂದು ಪರಿಗಣಿಸಲಾಗಿದೆ. ಅಪರಿಚಿತ ಪುರುಷ ಮತ್ತು ಮಹಿಳೆಯ ನಡುವಿನ ದೈಹಿಕ ಸಂಬಂಧಗಳನ್ನು ಇಸ್ಲಾಂನಲ್ಲಿ ಹರಾಮ್ (ಇಸ್ಲಾಂ ವಿರೋಧಿ) ಎಂದು ಪರಿಗಣಿಸಬಹುದು; ಆದರೆ ಇದು ವೈಯಕ್ತಿಕ ವಿಷಯವಾಗಿದೆ. ಅದನ್ನು ಹೇರುವ ಹಕ್ಕು ಯಾರಿಗೂ ಇಲ್ಲ. ಭಾರತದ ಸಂವಿಧಾನವು ಎಲ್ಲಾ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯದ ಅಧಿಕಾರವನ್ನು ನೀಡಿದ್ದು, ಯಾವುದೇ ವ್ಯಕ್ತಿಗೆ ತನ್ನ ಧಾರ್ಮಿಕ ಶ್ರದ್ಧೆಯನ್ನು ಪಾಲಿಸುವಂತೆ ಒತ್ತಡ ಹೇರಲು ಸಾಧ್ಯವಿಲ್ಲ. ಒಂದು ವೇಳೆ ಆರೋಪಿಯ ಮೇಲಿನ ಆರೋಪ ನಿಜವೆಂದು ಸಾಬೀತಾದರೆ, ಅದನ್ನು ವೈಯಕ್ತಿಕ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆಯೆಂದು ತಿಳಿಯಲಾಗುತ್ತದೆ ಮತ್ತು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಇದನ್ನು ಸಹಿಸಲಾಗುವುದಿಲ್ಲ. ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದೆ.