ಒಮರ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿ !
ನವದೆಹಲಿ – ಹರಿಯಾಣಾ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 8 ರಂದು ನಡೆಯಿತು. ಇದರಲ್ಲಿ ಹರಿಯಾಣದಲ್ಲಿ ಭಾಜಪ ಮುನ್ನಡೆ ಸಾಧಿಸುತ್ತಿರುವುದು, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಕ್ಕೂಟ ಮುನ್ನಡೆ ಸಾಧಿಸುತ್ತಿರುವುದು ಕಂಡು ಬಂದಿದೆ. ಇದುವರೆಗೂ ಎಲ್ಲಾ ಸ್ಥಾನಗಳ ತೀರ್ಪು ಚುನಾವಣಾ ಆಯೋಗದಿಂದ ಘೋಷಣೆಯಾಗಿಲ್ಲ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅವರ ಹೆಸರನ್ನು ಅವರ ತಂದೆ ಮತ್ತು ಪಕ್ಷದ ಹಿರಿಯ ನಾಯಕ ಫಾರೂಕ್ ಅಬ್ದುಲ್ಲಾ ಘೋಷಿಸಿದರು.
BJP retains its stronghold with a hat-trick win in #Haryana
Jammu and Kashmir chooses National Conference – Rejects the PDP
Omar Abdullah to be the new Chief Minister of Jammu and Kashmir.
जम्मू कश्मीर I हरियाणा#HaryanaElectionResult #JammuKashmirResults pic.twitter.com/aTi13ZTise
— Sanatan Prabhat (@SanatanPrabhat) October 8, 2024
ಜಮ್ಮು ಮತ್ತು ಕಾಶ್ಮೀರದ ಜನರು ಪಿಡಿಪಿಯನ್ನು ತಿರಸ್ಕರಿಸಿದ್ದಾರೆ !
1. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡಿದ ಕಲಂ 370 ಅನ್ನು ತೆಗೆದುಹಾಕಿದ ನಂತರ, ಇಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗಳು ನಡೆದವು.
2. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಕ್ಕೂಟವು 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗೆಯೇ ಭಾಜಪ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಭಾಜಪಗೆ 30 ಸ್ಥಾನ ಪಡೆದಿತ್ತು.
3. ಕಳೆದ ಬಾರಿ ಭಾಜಪ ಮತ್ತು ಮೆಹಬೂಬಾ ಮುಫ್ತಿಯವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಪಕ್ಷ ಸರಕಾರವನ್ನು ಸ್ಥಾಪಿಸಿತ್ತು. ಈ ಬಾರಿ ಮಾತ್ರ ಇಬ್ಬರಿಗೂ ಬಹುಮತದ ಅಂಕಿಅಂಶವನ್ನು ತಲುಪಲು ಸಾಧ್ಯವಾಗಲಿಲ್ಲ. ಪಿಡಿಪಿ ಪಕ್ಷ ಈ ಬಾರಿ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಿಂದ ಕಾಶ್ಮೀರದ ಜನರು ಪಿಡಿಪಿಯನ್ನು ನಿರಾಕರಿಸಿರುವುದು ಕಂಡು ಬಂದಿದೆ.
4. ಜಮ್ಮು ಮತ್ತು ಕಾಶ್ಮೀರದಲ್ಲಿ ಆಮ್ ಆದ್ಮಿ ಪಕ್ಷ ಮೊಟ್ಟಮೊದಲ ಬಾರಿಗೆ ಖಾತೆ ತೆರೆದಿದೆ. ಡೊಡಾ ವಿಧಾನಸಭಾ ಕ್ಷೇತ್ರದಲ್ಲಿ ಆಪ್ ಪಕ್ಷದ ಅಭ್ಯರ್ಥಿ ಮೆಹರಾಜ್ ಮಲಿಕ್ ಗೆದ್ದಿದ್ದಾರೆ.
ಹರಿಯಾಣದಲ್ಲಿ ತೀವ್ರ ಪೈಪೋಟಿಯಲ್ಲಿ ಭಾಜಪ ಗೆಲುವು !
1. ವಿವಿಧ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಅದೇ ಅಂದಾಜಿನ ಪ್ರಕಾರ, ಹರಿಯಾಣದಲ್ಲಿ ಬೆಳಿಗ್ಗೆ ಮತ ಏಣಿಕೆ ಪ್ರಾರಂಭವಾದಾಗ, ಕಾಂಗ್ರೆಸ್ ಬಹುಮತದತ್ತ ಮುನ್ನಡೆ ಸಾಧಿಸುತ್ತಿರುವುದು ಕಂಡುಬಂದಿತು. ಬೆಳಗ್ಗೆ 10 ಗಂಟೆಯವರೆಗೂ ಇದೇ ಸ್ಥಿತಿ ಇತ್ತು. ಅದರ ನಂತರ, ದಿಢೀರ್ ಆಗಿ ಬದಲಾವಣೆಯಾಗಿ ಭಾಜಪ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಅದು ಬಹುಮತದತ್ತ ದಾಪುಗಾಲು ಹಾಕುತ್ತಿರುವುದು ಕಂಡು ಬಂದಿತು. ಸಾಯಂಕಾಲದವರೆಗೆ ಈ ಸಂಖ್ಯೆ ಸ್ಥಿರವಾಗಿತ್ತು.
2. ಇದರಿಂದ ಕಾಂಗ್ರೆಸ್ ಚುನಾವಣಾ ಆಯೋಗದ ಮೇಲೆ ಪ್ರಶ್ನೆ ಚಿಹ್ನೆಗಳನ್ನು ಎತ್ತಿದೆ. (ಯಾರಿಗೆ ತನ್ನ ಸ್ವಂತ ಕ್ಷಮತೆಯ ಮೇಲೆ ಆತ್ಮವಿಶ್ವಾಸವಿರುವುದಿಲ್ಲವೋ, ಅವನೇ ಈ ರೀತಿ ಹುರುಳಿಲ್ಲದ ಆರೋಪ ಮಾಡಲು ಪ್ರಾರಂಭಿಸುತ್ತಾನೆ ! – ಸಂಪಾದಕರು)
3. ಅಕ್ಟೋಬರ್ 8ರ ಬೆಳಗ್ಗೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದರು; ಆದರೆ ಪ್ರಾಥಮಿಕ ಸುತ್ತಿನ ಬಳಿಕ ಭಾಜಪ ಮುನ್ನಡೆ ಸಾಧಿಸಿದ್ದರಿಂದ ಕಾಂಗ್ರೆಸ್ಸಿನ ಆನಂದದ ಮೇಲೆ ತಣ್ಣೀರು ಎರಚಿದಂತಾಯಿತು.
4.ಇದಾದ ಬಳಿಕ ಈಗ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸಂಸದ ಜೈರಾಮ ರಮೇಶ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದಾರೆ. ಜೈರಾಮ ರಮೇಶ್ ಮಾತನಾಡಿ, ಮತ ಎಣಿಕೆಯ 10 ರಿಂದ 12 ಸುತ್ತಿನ ತೀರ್ಪು ಬಹಿರಂಗವಾಗಿದೆ; ಆದರೆ ಸಂಕೇತಸ್ಥಳದ ಮೇಲೆ 4-5 ಸುತ್ತಿನ ಅಂಕಿ-ಅಂಶಗಳನ್ನು ತೋರಿಸಲಾಗುತ್ತಿದೆ. ಇದರಿಂದ ಮಾಧ್ಯಮಗಳೂ ತಪ್ಪು ಸುದ್ದಿಯನ್ನು ತೋರಿಸಿವೆ. ಲೋಕಸಭೆ ಚುನಾವಣೆಯಲ್ಲಿಯೂ ಇದೇ ರೀತಿ ನಡೆದಿತ್ತು. ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದೆ. ಈ ರೀತಿ ಸ್ಥಳೀಯ ಆಡಳಿತದ ಮೇಲೆ ಒತ್ತಡ ಹೇರುವುದು ಸೂಕ್ತವಲ್ಲ ಎಂದು ಹೇಳಿದರು.
ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ ಗೆಲುವು !
ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ ಅವರು ಕಾಂಗ್ರೆಸ್‌ನ ಜುಲಾನಾ ಮತಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರ ಗೆಲುವು ಸಾಧಿಸಿದ್ದಾರೆ. ಅವರು ಭಾಜಪ ಅಭ್ಯರ್ಥಿ ಯೋಗೇಶ್ ಬೈರಾಗಿ ಅವರನ್ನು ಸೋಲಿಸಿದರು.
‘ಜೈಲಿನಲ್ಲಿರುವ ಅಮಾಯಕರನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತಾರಂತೆ !’ – ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ ಮತ ಎಣಿಕೆಯ ಸಮಯದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡುವಾಗ, 10 ವರ್ಷಗಳ ನಂತರ ಜನರು ನಮಗೆ ಬಹುಮತ ನೀಡಿದ್ದಾರೆ. ನಾವು ಜನರ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗಲಿ ಎಂದು ಅಲ್ಲಾನ ಬಳಿ ಪ್ರಾರ್ಥಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಸರಕಾರವೆಂದರೆ ‘ಪೊಲೀಸ್ ಆಡಳಿತ’ ಅಲ್ಲ ಜನರ ಆಡಳಿತವಾಗಿರಲಿದೆ. ನಾವು ಜೈಲಿನಲ್ಲಿರುವ ಅಮಾಯಕರನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇವೆ. ಮಾಧ್ಯಮಗಳಿಗೆ ಸ್ವಾತಂತ್ರ್ಯವಿರಲಿದೆ. ಹಿಂದೂ-ಮುಸಲ್ಮಾನರ ನಡುವೆ ವಿಶ್ವಾಸ ನಿರ್ಮಾಣ ಮಾಡಬೇಕಾಗುವುದು. ನನಗೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮತ್ತೊಮ್ಮೆ ದೊರಕಿಸಿಕೊಡಲು ಇಂಡಿ ಒಕ್ಕೂಟದ ಮಿತ್ರ ಪಕ್ಷದವರು ನಮ್ಮೊಂದಿಗೆ ನಿಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಆಂತರಿಕ ವಿವಾದದಿಂದ ಹರಿಯಾಣದಲ್ಲಿ ಕಾಂಗ್ರೆಸ್ಸಿಗೆ ಸೋಲು!
ಫಾರೂಕ್ ಅಬ್ದುಲ್ಲಾ ಮಾತನಾಡಿ, ಹರಿಯಾಣಾದಲ್ಲಿ ಕಾಂಗ್ರೆಸ್ ಸೋಲಿನಿಂದ ನನಗೆ ಬಹಳ ಬೇಸರವಾಗಿದೆ. ಅವರ ಆಂತರಿಕ ವಿವಾದದಿಂದಾಗಿಯೇ ಈ ರೀತಿ ನಡೆದಿದೆ ಎಂದು ನನಗೆ ಅನಿಸುತ್ತದೆ, ಎಂದು ಹೇಳಿದರು.
ಸಂಪಾದಕೀಯ ನಿಲುವು
ಯಾರು ಅಮಾಯಕ ಮತ್ತು ಯಾರು ಭಯೋತ್ಪಾದಕರು ಎನ್ನುವುದನ್ನು ಅಬ್ದುಲ್ಲಾ ಹೇಗೆ ನಿರ್ಧರಿಸಲಿದ್ದಾರೆ ? ಅಮಾಯಕ ಹೆಸರಿನಲ್ಲಿ ಭಯೋತ್ಪಾದಕರನ್ನು ಅವರು ಬಿಡುಗಡೆಗೊಳಿಸಲಿದ್ದಾರೆಯೇ ?
ಜಮ್ಮೂ-ಕಾಶ್ಮೀರ (ಒಟ್ಟು ಸ್ಥಾನ 90) |
ಪಕ್ಷ |
ಮುನ್ನಡೆ |
ನ್ಯಾಶನಲ ಕಾನ್ಫರೆನ್ಸ- ಕಾಂಗ್ರೆಸ್ ಒಕ್ಕೂಟ | 49 |
ಭಾಜಪ | 29 |
ಪಿ.ಡಿ.ಪಿ. | 03 |
ಇತರೆ | 09 |
ಹರಿಯಾಣಾ( ಒಟ್ಟು ಸ್ಥಾನಗಳು 90) |
ಪಕ್ಷ |
ಮುನ್ನಡೆ |
ಭಾಜಪ | 48 |
ಕಾಂಗ್ರೆಸ್ | 37 |
ಇತರೆ | 05 |
ಭಾಜಪದ 29 ವರ್ಷದ ಶಗುನ ಪರಿಹಾರ ಕಿಶ್ತವಾಡ ಮತ ಕ್ಷೇತ್ರದಿಂದ ಗೆಲುವು !
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ನಡೆಯುತ್ತಿದ್ದು, ಕಿಶ್ತವಾಡ ಮತಕ್ಷೇತ್ರದಿಂದ ಭಾಜಪದ 29 ವರ್ಷದ ಶಗುನ್ ಪರಿಹಾರ್ ಅವರು ಕೇವಲ 521 ಮತಗಳಿಂದ ಗೆದ್ದಿದ್ದಾರೆ. ಶಗುನ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಜ್ಜದ್ ಅಹ್ಮದ್ ಕಿಚ್ಲು ಅವರನ್ನು ಸೋಲಿಸಿದರು. ಶಗುನ್ ಅವರ ತಂದೆ ಅಜಿತ ಪರಿಹಾರ ಮತ್ತು ಭಾಜಪದ ಹಿರಿಯ ನಾಯಕರಾಗಿರುವ ಅವರ ಕಾಕಾ ಅನಿಲ ಪರಿಹಾರ ಅವರನ್ನು ನವೆಂಬರ್ 1, 2018 ರಂದು ಭಯೋತ್ಪಾದಕರು ಹತ್ಯೆ ಮಾಡಿದ್ದರು.
ಚುನಾವಣಾ ಪ್ರಚಾರದ ವೇಳೆ ಶಗುನ ಪರಿಹಾರ ಅವರು ನನಗೆ ಸಿಕ್ಕ ಪ್ರತಿಯೊಂದು ಮತವೂ ತನ್ನ ಕುಟುಂಬದವರು ನೀಡಿದ ಪ್ರಾಣದಿಂದಲ್ಲ, ಬದಲಾಗಿ ಜಿಹಾದಿ ಭಯೋತ್ಪಾದಕರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಎಲ್ಲಾ ಕುಟುಂಬಗಳ ಪ್ರಾಣಾರ್ಪಣೆಗಾಗಿ ಇರಲಿದೆ ಎಂದು ಹೇಳಿದ್ದರು.