|
ಹಾಥರಸ (ಉತ್ತರಪ್ರದೇಶ) – ಉತ್ತರಪ್ರದೇಶ ಸರಕಾರದ ಸಾಮೂಹಿಕ ವಿವಾಹ ಯೋಜನೆಯ ದುರುಪಯೋಗ ಮಾಡಿಕೊಂಡಿರುವ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅನೇಕ ವಿವಾಹಿತ ದಂಪತಿಗಳು ಹಣದ ಆಸೆಗಾಗಿ ಪುನರ್ವಿವಾಹ ಮಾಡಿಕೊಂಡಿದ್ದಾರೆ. ವಿಚಿತ್ರವೆಂದರೆ ಹಣದ ಆಸೆಗಾಗಿ ಸಹೋದರನೊಬ್ಬನು ತನ್ನ ಸಹೋದರಿಯನ್ನೇ ವಿವಾಹವಾಗಿರುವ ಅನೈತಿಕ ಘಟನೆ ಬೆಳಕಿಗೆ ಬಂದಿದೆ. ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ಜನರಿಗಾಗಿ ಜಾರಿಗೆ ತರಲಾಗಿತ್ತು. ಕೆಲವು ಗ್ರಾಮಸ್ಥರು ಈ ಬಗ್ಗೆ ದೂರು ನೀಡಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಅಲ್ಲಿನ ಉಪಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಇದರ ವಿಚಾರಣೆಗೆ ಆದೇಶ ನೀಡಿದ್ದಾರೆ.
೧. ರಾಜ್ಯ ಸರಕಾರದ ‘ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ’ಯ ಅಡಿಯಲ್ಲಿ ವಧುವಿನ ಬ್ಯಾಂಕ್ ಖಾತೆಗೆ ೩೫ ಸಾವಿರ ರೂಪಾಯಿ, ನವ ವಿವಾಹಿತರಿಗೆ ೧೦ ಸಾವಿರ ರೂಪಾಯಿ, ಮಕ್ಕಳ ಜೀವನಾವಶ್ಯಕ ವಸ್ತು ಮತ್ತು ವಿವಾಹ ಸಮಾರಂಭದ ಖರ್ಚಿಗಾಗಿ ೬ ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.
೨. ವಿಚಿತ್ರವೆಂದರೆ ಓರ್ವ ಸರಕಾರಿ ಸಿಬ್ಬಂದಿಯೇ ಈ ಯೋಜನೆಯ ಆರ್ಥಿಕ ಲಾಭ ಪಡೆಯುವುದಕ್ಕಾಗಿ ವಂಚನೆಯ ವಿವಾಹದ ಯೋಜನೆ ಮಾಡಿದ್ದನು.
೩. ಡಿಸೆಂಬರ್ ೧೫.೨೦೨೩ ರಂದು ಹಾಥರಸದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ೨೧೭ ಜೋಡಿಗಳ ವಿವಾಹ ನೆರವೇರಿತ್ತು.
ಸಂಪಾದಕೀಯ ನಿಲುವುಇಂತಹ ಘಟನೆಯಿಂದ ಕೇವಲ ಅಭಿವೃದ್ಧಿ ಮಾಡಿ ಉಪಯೋಗವಿಲ್ಲ, ಈ ಅಭಿವೃದ್ಧಿಗೆ ಯೋಗ್ಯವಾದ ಸಮಾಜವನ್ನು ನಿರ್ಮಿಸುವುದು ಕೂಡ ಅವಶ್ಯಕವಾಗಿದೆ ಎಂಬುದು ಇದರಿಂದ ಕಂಡು ಬರುತ್ತದೆ. ಅದಕ್ಕಾಗಿ ಜನರಿಗೆ ಧರ್ಮಶಿಕ್ಷಣ ನೀಡಿ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು. |