|
ಪಾಟಲಿಪುತ್ರ (ಬಿಹಾರ) – ಇಸ್ಕಾನ ಆಧ್ಯಾತ್ಮಿಕ ಸಂಸ್ಥೆಯ ಪಾಟಲಿಪುತ್ರ ಮತ್ತು ಭಾಗಲಪುರದಲ್ಲಿರುವ ದೇವಸ್ಥಾನಗಳ ಅರ್ಚಕರ ನಡುವೆ ದೇವಸ್ಥಾನದ ಆಡಳಿತ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಾದ ಉದ್ಭವಿಸಿರುವುದು ಬೆಳಕಿಗೆ ಬಂದಿದೆ. ಅಕ್ಟೋಬರ್ 6 ರಂದು, ಈ ವಿವಾದವು ಘರ್ಷಣೆಗೆ ತಿರುಗಿತು. ಅದರಲ್ಲಿ 12ಕ್ಕೂ ಹೆಚ್ಚು ಅರ್ಚಕರು ಗಾಯಗೊಂಡರು. ಈ ದೇವಸ್ಥಾನಗಳ ಅಧ್ಯಕ್ಷರು ದೇವಸ್ಥಾನದ ಆಡಳಿತ ಹಾಗೂ ಇತರೆ ಅಂಶಗಳ ಕುರಿತು ಪರಸ್ಪರರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
1. ಪಾಟಲಿಪುತ್ರದ ಇಸ್ಕಾನ್ ದೇವಸ್ಥಾನದ ಅಧ್ಯಕ್ಷ ಕೃಷ್ಣ ಕೃಪಾ ದಾಸ ಉರ್ಫ ಕನಯ್ಯಾ ಸಿಂಗ ಅವರು ಒರ್ವ ಹುಡುಗಿಯೊಂದಿಗೆ ಅರೆಬೆತ್ತಲೆಯಲ್ಲಿರುವ ತಥಾಕಥಿತ ವಿಡಿಯೋವನ್ನು ಭಾಗಲಪುರದ ಇಸ್ಕಾನ್ ದೇವಸ್ಥಾನದ ಅಧ್ಯಕ್ಷ ರಕ್ಷಕ ಗಿರಿಧಾರಿ ದಾಸ್ ಅವರು ಪ್ರಸಾರ ಮಾಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
2. ಇಸ್ಕಾನ್ ಸಾರ್ವಜನಿಕ ಸಂಪರ್ಕ ಅಧಿಕಾರಿ ನಂದ ಗೋಪಾಲ ದಾಸ್ ಅವರು ಮಾತನಾಡಿ, ಪ್ರಸಾರ ಮಾಡಿರುವ ವಿಡಿಯೊ 7 ವರ್ಷಗಳ ಹಿಂದಿನದು; ಆದರೆ ಈಗ ಆ ವಿಷಯದ ಕುರಿತು ಜಗಳ ಪ್ರಾರಂಭವಾಗಿದೆ.
3. ಪಾಟಲೀಪುತ್ರದ ದೇವಸ್ಥಾನದಲ್ಲಿ ಹಣದ ದುಂದುವೆಚ್ಚ ಆಗುತ್ತಿರುವುದು, ಅಶ್ಲೀಲ ಕೃತ್ಯಗಳು ಹಾಗೂ ಮಹಿಳಾ ಭಕ್ತಾದಿಗಳ ಅತ್ಯಾಚಾರ, ಬ್ರಹ್ಮಚಾರಿಗಳಿಗೆ ಥಳಿಸುವುದು ಸೇರಿದಂತೆ ಇನ್ನೂ ಹಲವು ‘ಅನೈತಿಕ’ ಕೃತ್ಯಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ವಿಶೇಷ ಅಂದರೆ, ದೇವಸ್ಥಾನದ ಉನ್ನತ ಅಧಿಕಾರಿಗಳಿಗೆ ಈ ವಿಷಯದ ಕಲ್ಪನೆಯಿತ್ತು ಎಂದೂ ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಭಾಗಲಪುರ ಇಸ್ಕಾನ್ ದೇವಸ್ಥಾನದ ಬ್ರಹ್ಮಚಾರಿಗಳು ಕೋಲಕಾತಾದ ಇಸ್ಕಾನ್ ನಿಯಂತ್ರಣ ಮಂಡಳಿ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಅದರ ನಂತರ, ಈ ಸಂದರ್ಭದಲ್ಲಿ ಚರ್ಚಿಸಲು, ಪಾಟಲಿಪುತ್ರದ ಇಸ್ಕಾನ್ ಅಧಿಕಾರಿಗಳು ಭಾಗಲಪುರದ ಅರ್ಚಕರನ್ನು ಪಾಟಲಿಪುತ್ರದ ಸಭೆಗೆ ಕರೆದು ಅವರಿಗೆ ಕಾವಲುಗಾರರಿಂದ ಥಳಿಸಿದರು.
4. ಈ ಕುರಿತು ಪೊಲೀಸ್ ಉಪಾಧೀಕ್ಷಕ ಕೃಷ್ಣ ಮುರಾರಿ ಪ್ರಸಾದ್ ಮಾತನಾಡಿ, ಇಸ್ಕಾನ್ ದೇವಸ್ಥಾನಗಳ ನಿಯಂತ್ರಣದಿಂದ ಆಂತರಿಕ ಗುಂಪುಗಾರಿಕೆಯಿಂದ ಸಂಘರ್ಷ ಉಂಟಾಗಿದೆಯೆಂದು ಗಮನಕ್ಕೆ ಬಂದಿದೆ.
ಸಂಪಾದಕೀಯ ನಿಲುವುಸಂಬಂಧಿಸಿದ ಗಂಭೀರ ಆರೋಪಗಳನ್ನು ಖಚಿತಪಡಿಸಿಕೊಳ್ಳುವುದು ಆವಶ್ಯಕತೆಯಿದ್ದರೂ, ಹಿಂದೆಂದೂ ಇರದಷ್ಟು ಹಿಂದೂ ಸಂಘಟನೆಗಳ ಆವಶ್ಯಕತೆ ಈಗ ಇರುವಾಗ ದೇವಸ್ಥಾನದ ಆಂತರಿಕ ವಿವಾದದ ಪ್ರಕರಣವನ್ನು ಆದ್ಯತೆಯ ಮೇರೆಗೆ ಪರಿಹರಿಸುವ ಅವಶ್ಯಕತೆಯಿದೆ ! ಇಲ್ಲವಾದರೆ ಹಿಂದೂಗಳ ನಡುವೆ ಒಡಕು ಮೂಡಿಸಲು ಹಿಂದೂ ದ್ವೇಷಿ ಶಕ್ತಿಗಳು ಹೊಂಚು ಹಾಕುತ್ತಿದ್ದಾರೆ, ಎನ್ನುವುದನ್ನು ಮರೆಯಬಾರದು ! |