ಆಸ್ಟ್ರೀಯಾದಲ್ಲಿ ಕಟ್ಟರ್ ವಾದಿ ಮಸೀದಿಗಳನ್ನು ಮುಚ್ಚಲು ಪ್ರಾರಂಭ !

  • ಎರಡು ಮಸೀದಿಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ

  • ವಿಯೆನ್ನಾದಲ್ಲಿ ೬ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಕರಣ

ಆಸ್ಟ್ರಿಯಾದಂತಹ ಸಣ್ಣ ದೇಶವು ಭಯೋತ್ಪಾದಕ ದಾಳಿಯ ನಂತರ ಜಿಹಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ತಕ್ಷಣ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಮತ್ತೊಂದೆಡೆ ಕಳೆದ ಮೂರು ದಶಕಗಳಿಂದ ಜಿಹಾದಿ ಭಯೋತ್ಪಾದನೆಯಿಂದ ಬಳಲುತ್ತಿರುವ ಭಾರತವು ‘ಜಾತ್ಯತೀತತೆ’ ಹಾಗೂ ಅಲ್ಪಸಂಖ್ಯಾತರ ಓಲೈಕೆ’ ಈ ರಾಷ್ಟ್ರಘಾತಕ ರಾಜಕೀಯ ನೀತಿಗಳಿಗೆ ಬಲಿಯಾಗಿ ಕೈ ಕಟ್ಟಿ ಕುಳಿತಿದೆ. ಇದನ್ನು ತಡೆಗಟ್ಟಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು, ಏಕೈಕ ಮಾರ್ಗವಾಗಿದೆ !

ವಿಯೆನ್ನಾ (ಆಸ್ಟ್ರಿಯಾ) – ಯೂರೋಪ ದೇಶದ ರಾಜಧಾನಿಯಾದ ಆಸ್ಟ್ರಿಯಾದಲ್ಲಿ ನವೆಂಬರ್ ೨ ರಂದು ನಡೆದ ಭಯೋತ್ಪಾದಕ ದಾಳಿಯ ನಂತರ, ಸರಕಾರವು ಕಟ್ಟರವಾದದ ಇಸ್ಲಾಮಿಕ್ ಶಿಕ್ಷಣವನ್ನು ನೀಡುವ ಮಸೀದಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲು ಪ್ರಾರಂಭಿಸಿದೆ. ಸರಕಾರವು ಇತ್ತೀಚೆಗೆ ಎರಡು ಮಸೀದಿಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

೧. ದಾಳಿಯಲ್ಲಿ ಮೃತಪಟ್ಟ ಕುಜ್ತಿಮ್ ಫೆಜುಲೈ ಎಂಬ ೨೦ ವರ್ಷದ ವ್ಯಕ್ತಿ ಒಟ್ಟಾಕ್ರಿಂಗ್‌ನ ‘ಮೆಲಿಟ್ ಇಬ್ರಾಹಿಂ ಮಸೀದಿ’ ಮತ್ತು ಮೆಡಿನ್ ಪ್ರದೇಶದ ‘ತೆವ್ಹಿಡ್’ ಮಸೀದಿಗೆ ಹೋಗುತ್ತಿದ್ದ ಎಂಬುದು ಬೆಳಕಿಗೆ ಬಂದನಂತರ ಈ ಎರಡೂ ಮಸೀದಿಯಲ್ಲಿ ತೀವ್ರವಾಗಿ ತನಿಖೆ ನಡೆಸಲಾಗುತ್ತಿದೆ. ಈ ಮಸೀದಿಯಲ್ಲಿ ಕಟ್ಟರ ಇಸ್ಲಾಂಅನ್ನು ಕಲಿಸಲಾಗುತ್ತಿದೆ ಮತ್ತು ಭಯೋತ್ಪಾದಕರು ಅಲ್ಲಿಗೆ ಹೋಗಿ ಬಂದು ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಆದ್ದರಿಂದ ಸರಕಾರ ತಕ್ಷಣವೇ ಕ್ರಮಕೈಗೊಂಡು ಮಸೀದಿಯನ್ನು ಮುಚ್ಚುವ ನಿರ್ಣಯ ತೆಗೆದುಕೊಂಡಿದೆ.

೨. ಕಟ್ಟರ ಇಸ್ಲಾಂನ ಶಿಕ್ಷಣವನ್ನು ನೀಡುವ ಇತರ ಮಸೀದಿಗಳ ವಿರುದ್ಧವೂ ಸರಕಾರವು ಕ್ರಮ ಕೈಗೊಳ್ಳಲಿದೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಎಲ್ಲಾ ಮಸೀದಿಗಳನ್ನು ಮುಚ್ಚಲಾಗುವುದು. ಎಂದು ಆಸ್ಟ್ರಿಯಾದ ಗೃಹ ಸಚಿವ ಕಾರ್ಲ್ ನೆಹೈಮರ್ ಹೇಳಿದ್ದಾರೆ.

೩. ನವೆಂಬರ್ ೨ ರಂದು ವಿಯೆನ್ನಾದಲ್ಲಿ ನಡೆದ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ಇಸ್ಲಾಮಿಕ್ ಸ್ಟೇಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

೪. ಭಯೋತ್ಪಾದಕ ದಾಳಿಯ ನಂತರ ಈವರೆಗೆ ೧೫ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ೭ ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ೪ ಮಂದಿಯನ್ನು ಭಯೋತ್ಪಾದನೆ ಆರೋಪದಡಿಯಲ್ಲಿ ಅಪರಾಧಿಗಳೆಂದು ಎಂದು ಘೋಷಿಸಲಾಗಿದೆ.