‘ಆಲ್ಟ್ ನ್ಯೂಸ್’ ಸಹ-ಸಂಸ್ಥಾಪಕ ಮಹಮ್ಮದ್ ಜುಬೆರ ವಿರುದ್ಧ ದೂರು ದಾಖಲು

ಗಾಜಿಯಾಬಾದನ ಶ್ರೀ ಡಾಸನಾದೇವಿ ದೇವಸ್ಥಾನದ ಮೇಲೆ ದಾಳಿ ಮಾಡಲು ಸಾವಿರಾರು ಮುಸ್ಲಿಮರನ್ನು ಪ್ರಚೋದಿಸಲಾಯಿತು

ಗಾಜಿಯಾಬಾದ (ಉತ್ತರ ಪ್ರದೇಶ) – ಇಲ್ಲಿನ ಶ್ರೀ ಡಾಸನಾದೇವಿ ದೇವಸ್ಥಾನದ ಹೊರಗೆ ಅಕ್ಟೋಬರ 4 ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದರು. ದೇವಸ್ಥಾನದ ಮಹಂತ ಯತಿ ನರಸಿಂಹಾನಂದರು ಮಹಮ್ಮದ ಪೈಗಂಬರ ವಿಷಯದಲ್ಲಿ ಹೇಳಿರುವ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯಿಂದ ಮುಸಲ್ಮಾನರು ನಿಷೇಧಕ್ಕಾಗಿ ದೇವಸ್ಥಾನದ ಹೊರಗೆ ಜಮಾಯಿಸಿದ್ದರು. ಅವರು ದೇವಸ್ಥಾನದಲ್ಲಿ ನುಗ್ಗಲು ಪ್ರಯತ್ನಿಸಿದರು. ಈ ಸಮಯದಲ್ಲಿ `ಸರ್ ತನ್ ಸೆ ಜುದಾ’ (ಶಿರಚ್ಛೇದ ಮಾಡುವುದು) ಘೋಷಣೆ ಕೂಗುತ್ತಿದ್ದರು. ಈ ಸಮಯದಲ್ಲಿ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿ ಅವರನ್ನು ಚದುರಿಸಿದರು. ಇಲ್ಲಿ ಮುಸಲ್ಮಾನರನ್ನು ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡಿಸುವಲ್ಲಿ `ಅಲ್ಟ ನ್ಯೂಸ’ ಸಹಸಂಸ್ಥಾಪಕ ಮಹಮ್ಮದ ಜುಬೇರ ಇದ್ದಾನೆಂದು ಪ್ರಾಥಮಿಕ ಮಾಹಿತಿ ಸಿಕ್ಕ ಬಳಿಕ ಪೊಲೀಸರು ಅವನ ವಿರುದ್ಧ ದೂರು ದಾಖಲಿಸಿದ್ದಾರೆ. `ಜುಬೇರ ಸೇರಿದಂತೆ ಇತರೆ ಮುಸಲ್ಮಾನರ ಮೇಲೆ ರಾಷ್ಟ್ರೀಯ ಭದ್ರತಾ ಕಾನೂನಿನ ಅಡಿಯಲ್ಲಿ ಕ್ರಮ ಕೈಕೊಳ್ಳಬೇಕು’ ಎಂದು ಹಿಂದೂ ಸಂಘಟನೆಗಳು ಆಗ್ರಹಿಸುತ್ತಿದ್ದಾರೆ. ಹಾಗೆ ಮಾಡದೇ ಇದ್ದರೆ ಅಕ್ಟೋಬರ್ 13 ರಂದು ಮಹಾಪಂಚಾಯತ್ ಆಯೋಜಿಸುವುದಾಗಿ ಘೋಷಿಸಿದ್ದಾರೆ.

1. ಈ ಘಟನೆಯ ಪ್ರತ್ಯಕ್ಷದರ್ಶಿಗಳು ಮತ್ತು ಸಂತ್ರಸ್ಥರಾಗಿರುವ ಭಾಜಪ ನಾಯಕ ಡಾ. ಉದಿತಾ ತ್ಯಾಗಿಯವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.

2. ದೂರಿನಲ್ಲಿ ಅವರು ಗಾಜಿಯಾಬಾದ್ ಪೊಲೀಸ್ ಆಯುಕ್ತರಿಗೆ, ‘ಡಾಸನಾ ದೇವಾಲಯದ ಮೇಲಿನ ದಾಳಿಯು ಪೂರ್ವನಿಯೋಜಿತ ಸಂಚು ಆಗಿತ್ತು. ಈ ದಾಳಿಗಾಗಿ ಮುಸಲ್ಮಾನರನ್ನು ಮಹಮ್ಮದ್ ಜುಬೇರ್, ಅಸಾದುದ್ದೀನ್ ಓವೈಸಿ ಮತ್ತು ಅರ್ಷದ್ ಮದನಿ ಇವರು ಪ್ರಚೋದಿಸಿದರು. ಈ ಆಕ್ರಮಣದಲ್ಲಿ ಹೊರಗಿನಿಂದ ಬಂದಂತಹ ಮುಸ್ಲಿಮರು ಇರುವುದು ಬೆಳಕಿಗೆ ಬಂದಿದೆ.

3. ಈ ಹಿಂಸಾಚಾರದ ಹಿಂದೆ ನರಸಿಂಹಾನಂದ ಗಿರಿ ಅವರನ್ನು ಹತ್ಯೆ ಮಾಡುವ ಸಂಚು ಇತ್ತು ಎಂದೂ ಗಂಭೀರ ಆರೋಪವನ್ನು ಡಾ. ಉದಿತಾ ತ್ಯಾಗಿಯವರು ಮಾಡಿದ್ದಾರೆ. ಈ ದೂರಿನ ಮೇಲೆ ದೇವಸ್ಥಾನದಲ್ಲಿ ಉಪಸ್ಥಿತರಿದ್ದ ಹಿಂದೂ ಸಮಾಜದ 12 ಕ್ಕಿಂತ ಅಧಿಕ ಜನರ ಹಸ್ತಾಕ್ಷರವಿದೆ. ದಾಳಿಯ ಸಮಯದಲ್ಲಿ ಡಾಸನಾ ದೇವಸ್ಥಾನದಲ್ಲಿ ಇರೆಲ್ಲರೂ ಉಪಸ್ಥಿತರಿದ್ದರು.

4. ಡಾ. ಉದಿತಾ ತ್ಯಾಗಿ ಪೊಲೀಸ್ ಆಯುಕ್ತರಿಗೆ ಮತ್ತೊಂದು ದೂರು ನೀಡಿದ್ದಾರೆ. ಇದರಲ್ಲಿ ಜುಬೇರನು ಕಟ್ಟರವಾದಿಗಳ ಗುರಿಯಾಗಿರುವ 10 ಹಿಂದುತ್ವನಿಷ್ಠರ ಯಾದಿಯನ್ನು ಸಿದ್ಧಪಡಿಸಿದ್ದಾನೆ. ಇದರಲ್ಲಿ ಅವರ ಹೆಸರೂ ಸೇರಿದೆ. `ಜುಬೇರನನ್ನು ಕಾರಾಗೃಹಕ್ಕೆ ಕಳುಹಿಸದೇ ಇದ್ದರೆ ಅವನಿಂದಾಗಿ ಅನೇಕ ಹಿಂದೂಗಳ ಜೀವಕ್ಕೆ ಅಪಾಯ ನಿರ್ಮಾಣವಾಗಲಿದೆ’ ಎಂದೂ ಈ ದೂರಿನಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಮಹಮ್ಮದ ಜುಬೇರನನ್ನು ಈ ಹಿಂದೆಯೂ ಹಿಂದೂಗಳ ವಿರುದ್ಧ ಕೃತ್ಯ ಮಾಡಿದ್ದರಿಂದ ಬಂಧಿಸಲಾಗಿತ್ತು. ಇದರಿಂದ ಅವನ ಜಿಹಾದಿ ಮಾನಸಿಕತೆ ಗಮನಕ್ಕೆ ಬರುತ್ತದೆ. ಇಂತಹವರನ್ನು ಜೀವಾವಧಿ ಕಾರಾಗೃಹದಲ್ಲಿ ಹಾಕಲು ಪೊಲೀಸರು ಮತ್ತು ಸರಕಾರ ಪ್ರಯತ್ನಿಸಬೇಕು !