ಅಮೇರಿಕಾದಲ್ಲಿ ಕಳೆದ ೨ ದಶಕಗಳಿಂದ ಯೋಗ ಮಾಡುವವರ ಸಂಖ್ಯೆ ಶೇ. ೫೦೦ ರಷ್ಟು ಏರಿಕೆ !

  • ಶೇ. ೨೦ ರಷ್ಟು ಅಮೆರಿಕ ನಾಗರಿಕರು ಯೋಗ ಮಾಡುತ್ತಾರೆ !

  • ಶೇ. ೭೫ ರಷ್ಟು ಅಮೆರಿಕ ನಾಗರೀಕರು ಯೋಗವನ್ನು ಆರೋಗ್ಯಕ್ಕೆ ಲಾಭದಾಯಕ ಎಂದು ನಂಬುತ್ತಾರೆ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಪ್ರತಿಯೊಬ್ಬ ಐದನೇ ವ್ಯಕ್ತಿ ಎಂದರೆ ನಿವ್ವಳ ಶೇ. ೨೦ ರಷ್ಟು ಜನರು ಯೋಗ (ಯೋಗಾಸನ) ಮಾಡುತ್ತಾರೆ. ಅಮೇರಿಕಾದಲ್ಲಿ ಈಗ ಕೇವಲ ಶಾರೀರಿಕ ವ್ಯಾಯಾಮವೆಂದು ನೋಡದೆ ಆರೋಗ್ಯ, ಆಧ್ಯಾತ್ಮ, ಆಧ್ಯಾತ್ಮಿಕ ಶಾಂತಿ ಮತ್ತು ಸಾಧನೆಯ ರೂಪದಲ್ಲಿ ಅದನ್ನು ನೋಡುತ್ತಿದ್ದಾರೆ. ೨೦೦೨ ರಲ್ಲಿ ಎಲ್ಲಿ ಕೇವಲ ಶೇ. ೪ ರಷ್ಟು ಅಮೇರಿಕ ನಾಗರೀಕರು ಯೋಗದ ಅಭ್ಯಾಸ ಮಾಡುತ್ತಿದ್ದರು, ಈಗ ಅದರ ಸಂಖ್ಯೆ ಶೇ. ೫೦೦ ರಷ್ಟು (೫ ಪಟ್ಟು) ಹೆಚ್ಚಾಗಿದೆ. ಇದರಲ್ಲಿ ಕೂಡ ಮಹಿಳೆಯರ ಪ್ರಮಾಣ ಗಣನೀಯವಾಗಿದೆ. ಶೇ. ೨೩ ರಷ್ಟು ಅಮೇರಿಕಾದ ಮಹಿಳೆಯರು ಯೋಗ ಮಾಡುತ್ತಾರೆ. ವಿಶೇಷ ಎಂದರೆ ‘ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್’ (‘ಸಿಡಿಸಿ’ಯ) ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಶೇ. ೭೫ ರಷ್ಟು ಅಮೇರಿಕಾದ ನಾಗರಿಕರು, ಯೋಗ ಅವರ ಆರೋಗ್ಯಕ್ಕೆ ಲಾಭದಾಯಕವಾಗಿದೆ ಎಂದು ನಂಬುತ್ತಾರೆ.

ಸಿಡಿಸಿ ಯ ಸಮೀಕ್ಷೆಯಲ್ಲಿನ ಅಂಕಿಅಂಶಗಳು !

೧. ಶೇ. ೯೦ ರಷ್ಟು ಅಮೆರಿಕಾದ ನಾಗರಿಕರು ಯೋಗದ ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ೩ ವರ್ಷಗಳ ಹಿಂದೆ ಈ ಸಂಖ್ಯೆ ಶೇ. ೭೫ ರಷ್ಟು ಇತ್ತು.
೨. ಶೇ. ೭೦ ರಷ್ಟು ಅಮೇರಿಕಾದವರು ಆರೋಗ್ಯ ಉತ್ತಮವಾಗಿರಲು ಯೋಗ ಮಾಡುತ್ತಾರೆ.
೩. ಶೇ. ೩೦ ರಷ್ಟು ಜನರು ನೋವುಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಮಾಡುತ್ತಾರೆ. ಅದರಲ್ಲಿ ಕೂಡ ಕತ್ತು ಮತ್ತು ಬೆನ್ನು ನೋವಿನಿಂದ ಪೀಡಿತರಾಗಿರುವ ಜನರು ಯೋಗದ ಸಹಾಯ ಪಡೆಯುತ್ತಿದ್ದಾರೆ.

ಯೋಗದ ಹಿಂದಿನ ತತ್ವಜ್ಞಾನ ತಿಳಿದುಕೊಳ್ಳಲು ಮಾಡುತ್ತಿರುವ ಪ್ರಯತ್ನ !

ಜೀವ ಶಿವನ ಮಿಲನ ಎಂದು ‘ಯೋಗ’ದ ವಾಸ್ತವಿಕ ಅರ್ಥವಾಗಿದೆ. ಆದ್ದರಿಂದ ಯೋಗದ ತತ್ವಜ್ಞಾನದ ಕುರಿತು ಜಿಜ್ಞಾಸೆ ಇರುವ ಅಮೆರಿಕಾದ ಜನರಿಗೆ ಹಿಂದೂ ಧರ್ಮದ ಪ್ರಕಾರ ಸಾಧನೆ ಹೇಳಿ ಅವರನ್ನು ಹಿಂದುಗಳನ್ನಾಗಿ ಮಾಡಲು ಪ್ರೇರೇಪಿಸಬೇಕು !

ಯೋಗ ಮಾಡುವ ಅಮೇರಿಕಾದ ಜನರು ಈಗ ಅದರ ಇತಿಹಾಸ ಮತ್ತು ತತ್ವಜ್ಞಾನ ತಿಳಿದುಕೊಳ್ಳುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ. ಅದಕ್ಕಾಗಿ ಅನೇಕ ವಿದ್ಯಾಪೀಠಗಳು ಮತ್ತು ಸಂಶೋಧನಾ ಸಂಸ್ಥೆಯ ವಿದ್ವಾನರು ಯೋಗಾದ ಆಳವಾದ ಅಂಶದ ಕುರಿತು ಅಭ್ಯಾಸ ಮತ್ತು ಪ್ರಶಿಕ್ಷಣ ನೀಡುತ್ತಿದ್ದಾರೆ. ಮಹಿಳೆಯರು ಅದನ್ನು ಮಾನಸಿಕ ಶಾಂತಿ ಮತ್ತು ಸಂತೂಲನ ಕಾಪಾಡುವುದಕ್ಕಾಗಿ ಆಯ್ಕೆಕೊಳ್ಳುತ್ತಿದ್ದಾರೆ. ಪ್ರತಿ ದಿನ ಯೋಗ ಮಾಡುವುದರಿಂದ ಮಾನಸಿಕ ಸಂತುಲನದಲ್ಲಿ ಸಹಾಯ ದೊರೆಯುತ್ತದೆ ಎಂದು ಅನೇಕ ಅಮೇರಿಕಾದ ಜನರ ಅಭಿಪ್ರಾಯವಾಗಿದೆ.

ಸಂಪಾದಕೀಯ ನಿಲುವು

ಯೋಗ ಇದು ಹಿಂದೂ ಧರ್ಮವು ಜಗತ್ತಿಗೆ ನೀಡಿರುವ ಅದ್ವಿತೀಯ ಕೊಡುಗೆಯಾಗಿದ್ದು ಅಮೇರಿಕಾಗೆ ಅದರ ಅನಿವಾರ್ಯತೆಯು ಈಗ ಚೆನ್ನಾಗಿಯೇ ಅರಿವಿಗೆ ಬಂದಿದೆ. ಭಾರತ ಸರಕಾರವು ಇದರ ಲಾಭ ಪಡೆದು ಈಗ ಯೋಗಕ್ಕೆ ಅದರ ಯೋಗ್ಯವಾದ ಸ್ಥಾನ ನೀಡುವುದಕ್ಕಾಗಿ ಅದನ್ನು ‘ಹಿಂದೂ ಯೋಗ’ ಎಂದು ಪ್ರಚಾರ ಮಾಡಬೇಕು !