ಹಿಂದೂಗಳಿಗೆ ಕಾಂಗ್ರೆಸ್‌ನ ‘ಬಿರುಕು ಮೂಡಿಸಿ ಮತ್ತು ರಾಜ್ಯ ಆಳಿ’ ಈ ನೀತಿಗೆ ಬಲಿಯಾಗಬೇಡಿ ಎಂದು ಮನವಿ
(ವೋಟ್ ಬ್ಯಾಂಕ್ ಎಂದರೆ ಮತ ಪೆಟ್ಟಿಗೆ)
ನವದೆಹಲಿ : ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮುಸಲ್ಮಾನರಿಗೆ ‘ಕಾಂಗ್ರೆಸ್ ನ ‘ವೋಟ್ ಬ್ಯಾಂಕ್’ ಆಗಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಹಿಂದೂಗಳನ್ನು ವಿಭಜಿಸುತ್ತಿದೆ ಮತ್ತು ಮುಸಲ್ಮಾನರನ್ನು ಓಲೈಸುತ್ತಿದೆ ಎಂದು ರಿಜಿಜು ಆರೋಪಿಸಿದ್ದಾರೆ. ಚುನಾವಣೆಯ ಸಮಯದಲ್ಲಿ, ‘ನಮ್ಮ ಶೇಕಡಾ 15 ಮತಗಳ ಹಂಚಿಕೆ (ಮುಸ್ಲಿಂ ಪಾಲು) ಮೀಸಲು’ ಎಂದು ಕಾಂಗ್ರೆಸ್ ಹೇಳುತ್ತದೆ. ಇದರಿಂದ ಪಕ್ಷದ ಮನಸ್ಥಿತಿ ಕಂಡು ಬರುತ್ತದೆ. ಮುಸಲ್ಮಾನರನ್ನು ಕಾಂಗ್ರೆಸ್ ತನ್ನ ‘ವೋಟ್ ಬ್ಯಾಂಕ್’ ಎಂದು ಪರಿಗಣಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಇದೆ. ‘ಇದರಿಂದ ಮುಸಲ್ಮಾನರಿಗೆ ಸಾಕಷ್ಟು ಹಾನಿಯಾಗುತ್ತಿದೆ’ ಎಂದೂ ರಿಜಿಜು ಹೇಳಿದ್ದಾರೆ.
ಈ ಸಂದರ್ಶನದ ‘ವಿಡಿಯೋ ತುಣುಕ’ನ್ನು ರಿಜಿಜು ತಮ್ಮ ‘X’ ಖಾತೆಯಲ್ಲಿ ಪ್ರಸಾರ ಮಾಡಿದ್ದಾರೆ. ಇದರೊಂದಿಗೆ ಅವರು, ‘ಮುಸಲ್ಮಾನರಿಗೆ ನನ್ನ ಎಚ್ಚರಿಕೆ: ಕಾಂಗ್ರೆಸ್‌ನ ‘ವೋಟ್ ಬ್ಯಾಂಕ್’ ಆಗಬೇಡಿ ! ಹಿಂದೂಗಳು ಮತ್ತು ಇತರರಿಗೆ ನನ್ನ ಎಚ್ಚರಿಕೆ: ಕಾಂಗ್ರೆಸ್ ಪಕ್ಷದ ‘ಒಡೆದು ಆಳುವ’ ನೀತಿಗೆ ಬಲಿಯಾಗಬೇಡಿ!’
ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಜನರ ಸಮಸ್ಯೆಗಳ ‘ಎಬಿಸಿಡಿ’ ಕೂಡ ರಾಹುಲ್ ಗಾಂಧಿಗೆ ಗೊತ್ತಿಲ್ಲ ಎಂದು ರಿಜಿಜು ಹೇಳಿದ್ದಾರೆ. ಆದರೂ ಅವರು ಅದರ ಬಗ್ಗೆ ಸತತವಾಗಿ ಮಾತನಾಡುತ್ತಲೇ ಇರುತ್ತಾರೆ. ಅವರಿಗೆ ಈ ರೀತಿ ಮಾತನಾಡಲು ಕಲಿಸಲಾಗಿದೆ ಎಂದಿದ್ದಾರೆ.