೫೦೦ ವರ್ಷಗಳ ನಂತರ ಶ್ರೀ ರಾಮ ಜನ್ಮಭೂಮಿಯಲ್ಲಿ ದೀಪೋತ್ಸವ !

ಇಲ್ಲಿ ದೀಪಾವಳಿಯ ನಿಮಿತ್ತ ಶ್ರೀ ರಾಮ್ ಜನ್ಮಭೂಮಿಯಲ್ಲಿ ೫೦೦ ವರ್ಷಗಳ ನಂತರ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಗುತ್ತಿದೆ. ಈ ದೀಪೋತ್ಸವವನ್ನು ನವೆಂಬರ್ ೧೧ ರಿಂದ ನವೆಂಬರ್ ೧೩ ರವರೆಗೆ ಆಚರಿಸಲಾಗುತ್ತಿದೆ.

ಮೆರಠ (ಉತ್ತರ ಪ್ರದೇಶ) – ೧೫ ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ೫ ತಿಂಗಳ ಕಾಲ ಅತ್ಯಾಚಾರ ಎಸಗಿದ ಮತಾಂಧನ ಬಂಧನ

ಇಲ್ಲಿನ ಸಿಂಧವಾಲಿ ಗ್ರಾಮದ ೧೫ ವರ್ಷದ ಬಾಲಕಿಯನ್ನು ಅದೇ ಗ್ರಾಮದ ಶಾಕಿಬ್ ಎಂಬವನು ಮೇ ತಿಂಗಳಲ್ಲಿ ಅಪಹರಿಸಿದ್ದ. ೫ ತಿಂಗಳವರೆಗೆ ಅವಳ ಯಾವುದೇ ಕುರುಹು ಕಂಡುಬಂದಿಲ್ಲ. ಕೊನೆಗೆ ಪೊಲೀಸರ ತಂಡ ಶಕೀಬ್‌ನನ್ನು ಬಂಧಿಸಿತು.

ಚಲನಚಿತ್ರದಲ್ಲಿ ‘ಬಾಂಬ್’ ಬಗ್ಗೆ ಯಾವುದೇ ಸಂದರ್ಭ ಇಲ್ಲದಿದ್ದಾಗ, ಅದಕ್ಕೆ ಉದ್ದೇಶಪೂರ್ವಕವಾಗಿ ‘ಲಕ್ಷ್ಮೀ ಬಾಂಬ್’ ಎಂದು ಹೆಸರಿಸಲು ಪ್ರಯತ್ನ ನಡೆದಿರುವುದು ಬಹಿರಂಗವಾಗಿದೆ ! – ‘ಆಜ್ ತಕ್’ ಸುದ್ದಿ ವಾಹಿನಿಯ ವರದಿ

ದಕ್ಷಿಣ ಭಾರತದ ಚಲನಚಿತ್ರ ‘ಕಂಚನಾ’ ದ ಹಿಂದಿ ಆವೃತ್ತಿ ಎಂದು ನವೆಂಬರ್ ೯ ರಂದು ಬಿಡುಗಡೆಯಾದ ‘ಲಕ್ಷ್ಮೀ’ ಈ ಚಲನಚಿತ್ರವನ್ನು ಮೊದಲು ‘ಲಕ್ಷ್ಮಿ ಬಾಂಬ್’ ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಹಿಂದೂ ಧರ್ಮಾಭಿಮಾನಿಗಳು ವಿರೋಧಿಸಿದಾಗ ಅದನ್ನು ‘ಲಕ್ಷ್ಮಿ’ ಎಂದು ಬದಲಾಯಿಸಲಾಯಿತು.

ಭಾರತವು ಜೋ ಬಾಯಡೆನ್ ಮತ್ತು ಕಮಲಾ ಹ್ಯಾರಿಸ್ ಅವರನ್ನು ಹೆಚ್ಚು ಪ್ರಶಂಸಿಸಬಾರದು ! – ಡಾ. ಸುಬ್ರಹ್ಮಣ್ಯಂ ಸ್ವಾಮಿ

ಪ್ರಸಾರ ಮಾಧ್ಯಮದಲ್ಲಿನ ಸುದ್ದಿಗನುಸಾರ ಜೋ ಬಾಯಡೆನ್ ಮತ್ತು ಕಮಲಾ ಹ್ಯಾರಿಸ್ ಅವರ ಸರಕಾರವನ್ನು ಭಾರತಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿವೆ. ಇಬ್ಬರನ್ನೂ ಕೇಂದ್ರ ಸರಕಾರವು ಹೆಚ್ಚು ಪ್ರಶಂಸಿಸಬಾರದು. ಭಾರತಕ್ಕೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಜೋ ಬಾಯಡೆನ್ ಇವರು ಕಮಲಾ ಹ್ಯಾರಿಸ್ ಮೂಲಕ ಪ್ರವೇಶಿಸುವರು ಮತ್ತು ಕಮಲಾ ಹ್ಯಾರಿಸ್ ಹಿಂದೂ ರಾಷ್ಟ್ರೀಯತೆಯ ವಿರುದ್ಧ ಅಂದರೆ ಬಿಜೆಪಿಯ ವಿರುದ್ಧವಾಗಿದ್ದಾರೆ.

ದೇಶದ ಕಟ್ಟರವಾದಿಗಳ ಮೇಲೆ ನಿಗಾ ಇಟ್ಟು ಅವರ ವಿಚಾರಸರಣಿಯಲ್ಲಿ ಬದಲಾವಣೆ ಮಾಡಲು ಕೇಂದ್ರ ಸರಕಾರದಿಂದ ಭದ್ರತಾ ಪಡೆಗಳಿಗೆ ಆದೇಶ

ಕೇಂದ್ರ ಸರಕಾರವು ದೇಶದ ಭದ್ರತಾ ಪಡೆಗಳಿಗೆ, ಇಸ್ಲಾಮಿಕ್ ಕಟ್ಟರವಾದಿ ಜನರನ್ನು ಹಾಗೂ ಅವರ ಸುತ್ತಮುತ್ತಲಿನವರನ್ನು ಗುರುತಿಸಲು ಪ್ರಾರಂಭಿಸಿರಿ. ಅದೇರೀತಿ ಅಂತಹವರಿಗೆ ತಿಳುವಳಿಕೆ ನೀಡಿ ಅವರಿಗೆ ಉಪದೇಶವನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿ ಎಂದು ಆದೇಶ ನೀಡಿದೆ.

ಸನಾತನ ಪ್ರಭಾತ ಇನ್ನು ‘ಟೆಲಿಗ್ರಾಮ್ನಲ್ಲಿಯೂ ಲಭ್ಯ !

ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿನ ರಾಷ್ಟ್ರ ಹಾಗೂ ಧರ್ಮಜಾಗೃತಿಯ ವಿಷಯಗಳು, ಅದೇರೀತಿ ಸಮಾಜದಲ್ಲಿ ಎಲ್ಲೆಡೆ ಅದಷ್ಟು ಹೆಚ್ಚು ಜನರಿಗೆ ಪಿಡಿಎಫ್ ಮೂಲಕ ತಲುಪಿಸಲು ‘ಸೋಶಿಯಲ್ ಮೀಡಿಯಾದ ವಿವಿಧ ಮಾಧ್ಯಮಗಳನ್ನು ಉಪಯೋಗಿಸಲಾಗುತ್ತದೆ. ವಾಟ್ಸ್ ಆಪ್, ಫೇಸ್‌ಬುಕ್ ಹಾಗೂ ಟ್ವೀಟರ್ ನಂತರ ಈಗ ‘ಟೆಲಿಗ್ರಾಮ್ ಈ ಸೋಶಿಯಲ್ ಮೀಡಿಯಾದಲ್ಲಿಯೂ ಸನಾತನ ಪ್ರಭಾತ ನಿಯತಕಾಲಿಕೆಗಳ ‘ಟೆಲಿಗ್ರಾಮ್ ಚಾನೆಲ್ಸ್ ‘ಗಳನ್ನು ಆರಂಭಿಸಲಾಗಿದೆ.

‘ಸನಾತನ ಪ್ರಭಾತ ಈಗ ‘ಡೈಲಿ ಹಂಟ್ನಲ್ಲಿ ಲಭ್ಯ !

‘ಡೈಲಿ ಹಂಟ್ ಭಾರತದ ಅತ್ಯಂತ ಜನಪ್ರಿಯ ‘ನ್ಯೂಸ್ ಆಪ್ ಆಗಿದ್ದು ಇದು ೧೪ ಭಾಷೆಗಳಲ್ಲಿ ಲಭ್ಯವಿದೆ. ಭಾರತ ಸಹಿತ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಹಾಗೂ ಆಫ್ರಿಕಾ ಖಂಡದಲ್ಲಿಯೂ ಬಳಸಲಾಗುತ್ತದೆ. ಈ ಆಪ್‌ನಲ್ಲಿ, ‘ಸನಾತನ ಪ್ರಭಾತವನ್ನು ಎಲ್ಲ ಭಾಷೆಗಳಲ್ಲಿ ಅಂದರೆ ಕನ್ನಡ, ಮರಾಠಿ, ಹಿಂದಿ ಹಾಗೂ ಆಂಗ್ಲ ನಿಯತಕಾಲಿಕೆಗಳ ಲೇಖನ/ಸುದ್ದಿ ಓದಬಹುದು

ಕರ್ನಾಟಕದಲ್ಲಿ ಕ್ಷುಲ್ಲಕ ಕಾರಣದಿಂದ ಮತಾಂಧರಿಂದ ಜ್ಯೋತಿಷಿಯ ಹತ್ಯೆ

ಕಲಬುರ್ಗಿ ಜಿಲ್ಲೆಯ ಹಲಕರ್ಟಿ ಗ್ರಾಮದ ಅಂಬಿಗರ ಚೌಡಯ್ಯ ವೃತ್ತದಲ್ಲಿರುವ ಹೋಟೆಲಿನಲ್ಲಿ ನವೆಂಬರ ೬ ರಂದು ಮಧ್ಯಾಹ್ನ ಜ್ಯೋತಿಷಿ ಸುರೇಶ ಇವರು ಭಜ್ಜಿ ತಿನ್ನುತ್ತಿದ್ದರು. ಅಲ್ಲಿಗೆ ಬಂದಿದ್ದ ಜನರು ಅವರ ಭಜ್ಜಿಯ ತಟ್ಟೆಗೆ ಕೈ ಹಾಕಿದರು ಇದರಿಂದ ವಾದ ಉಂಟಾಗಿ. ಅಲ್ಲಿಂದ ಸುರೇಶ ಇವರನ್ನು ಹೊಟೆಲ್ ನಿಂದ ಹೊರಗೆ ತಂದು ಅವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದರು.

‘ಯುವಕರಿಗೆ ನೌಕರಿ ಸಿಗದಿದ್ದರೆ, ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವುದರ ಹೊರತು ಬೇರೆ ಆಯ್ಕೆ ಇರಲಾರದು!’(ವಂತೆ) – ಮೆಹಬೂಬಾ ಮುಫ್ತಿಯವರಿಂದ ಪ್ರಚೋದನೆ

ಯುವಕರಿಗೆ ಉದ್ಯೋಗ ಸಿಗದಿದ್ದರೆ, ಅವರಿಗೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವುದೊಂದೇ ದಾರಿ(ಪರ್ಯಾಯ), ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖಂಡೆ ಮತ್ತು ಜಮ್ಮು – ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.

ಯಾವ ದಿನ ಕುರಿ ಇಲ್ಲದೆ ಬಕ್ರಿದ್ ಆಚರಿಸಲಾಗುವುದೋ, ಆಗಲೇ ನಾವು ಪಟಾಕಿ ಇಲ್ಲದೆ ದೀಪಾವಳಿಯನ್ನು ಆಚರಿಸುವೆವು ! – ಬಿಜೆಪಿ ಸಂಸದ ಸಾಕ್ಷಿ ಮಹಾರಾಜರು

ಯಾವ ದಿನ ಕುರಿ ಇಲ್ಲದೆ ಬಕ್ರಿದ್ ಆಚರಿಸುವರೋ, ಆ ದಿನವೇ ಪಟಾಕಿ ಸಿಡಿಸದೆ ದೀಪಾವಳಿಯನ್ನು ಸಹ ಆಚರಿಸಲಾಗುವುದು. ಮಾಲಿನ್ಯದ ಹೆಸರಿನಡಿಯಲ್ಲಿ ಪಟಾಕಿಯ ಬಗ್ಗೆ ಹೆಚ್ಚು ಉಪದೇಶ ನೀಡದಿರಿ, ಇಂತಹ ಶಬ್ದಗಳಲ್ಲಿ ಇಲ್ಲಿಯ ಬಿಜೆಪಿ ಸಂಸದ ಸಾಕ್ಷಿ ಮಹಾರಾಜರು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.