|
ನವ ದೆಹಲಿ – ಬಾಂಗ್ಲಾದೇಶದ ಹಿಂದೂ ದೇವಾಲಯಗಳ ಧ್ವಂಸದ ಘಟನೆಗಳನ್ನು ಭಾರತವು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಭಾರತ ಸರಕಾರವು ಹೇಳಿದೆ. ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿಯವರು ಬಾಂಗ್ಲಾದೇಶದ ೧೫ ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ಬಹಿರಂಗಪಡಿಸಿದ ನಂತರ ಇದು ಭಾರತ ಸರಕಾರವು ನೀಡಿದ ಮೊದಲ ಪ್ರತಿಕ್ರಿಯೆಯಾಗಿದೆ.
India has taken up with Bangladeshi authorities the issue of violence targeting Hindu families in Bangladesh’s Comilla district and the matter is being probed by the authorities there, the Ministry of External Affairs said on Friday.https://t.co/he57qrFVAD
— The Wire (@thewire_in) November 7, 2020
೧. ಫೇಸ್‌ಬುಕ್ ಪೋಸ್ಟ್‌ಗಳ ಮೂಲಕ ಇಸ್ಲಾಂ ಧರ್ಮವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಇಲ್ಲಿಯ ಮತಾಂಧರು ದೇವಾಲಯಗಳ ಮೇಲೆ ದಾಳಿ ಮಾಡಿದ್ದರು. ಘಟನೆಯ ನಂತರ ಚೌಧರಿ ಅವರು ದೇವಾಲಯಗಳನ್ನು ಧ್ವಂಸ ಮಾಡಿದ ವಿಷಯವನ್ನು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರಲ್ಲಿ ವಿಚಾರಿಸಬೇಕು ಎಂದು ಹೇಳಿದ್ದರು.
೨. ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ನವೆಂಬರ್ ೧ ರಂದು ಬಾಂಗ್ಲಾದೇಶದ ಬ್ರಹ್ಮನ್‌ಬರಿಯಾ ಜಿಲ್ಲೆಯಲ್ಲಿರುವ ನಾಸಿರ್‌ನಗರದ ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು ಹಾಗೂ ಹಿಂದೂ ಪ್ರದೇಶಗಳಲ್ಲಿ ೧೦೦ ಕ್ಕೂ ಹೆಚ್ಚು ಮನೆಗಳನ್ನು ಲೂಟಿ ಮಾಡಲಾಗಿದೆ. ಹಲವಾರು ಗಂಟೆಗಳ ಹಿಂಸಾಚಾರದ ನಂತರ ಹಬಿಗಂಜ್‌ನ ಮಾಧವಪುರದ ಬಳಿಯ ಎರಡು ದೇವಾಲಯಗಳ ಮೇಲೂ ದಾಳಿ ನಡೆಸಲಾಯಿತು. ಇದರಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆರು ಜನರನ್ನು ಬಂಧಿಸಲಾಗಿದೆ. ತದನಂತರ, ನಾಸಿರ್‌ನಗರ ಮತ್ತು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಅರೆಸೈನಿಕ ಪಡೆ ಮತ್ತು ಪೊಲೀಸರನ್ನು ನಿಯೋಜಿಸಲಾಯಿತು.