ಕೇರಳ ಉಚ್ಚನ್ಯಾಯಾಲಯದ ಆದೇಶ
ತಿರುವನಂತಪುರಂ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ತ್ರಾವಣಕೋರ ದೇವಸ್ವಂ ಬೋರ್ಡಗೆ ಶಬರಿಮಲಾ ದೇವಸ್ಥಾನಕ್ಕೆ ಬರುವ ಭಕ್ತರ ಮೇಲೆ ‘ಪೊಟ್ಟುಕುತಲ’ ವಿಧಿಗಾಗಿ ಶುಲ್ಕ ಸಂಗ್ರಹಿಸಿ ಅವರ ಶೋಷಣೆ ಮಾಡುವ ಅಕ್ರಮ ಸಂಸ್ಥೆಗಳ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ನ್ಯಾಯಾಲಯವು, ಅಯ್ಯಪ್ಪ ದೇವರನ್ನು ಪೂಜಿಸಲು ಶಬರಿಮಲಾ ಯಾತ್ರೆಗೆ ಹೋಗುವ ಯಾತ್ರಾರ್ಥಿಗಳನ್ನು ಶೋಷಣೆ ಮಾಡಲು ಸಾಧ್ಯವಿಲ್ಲ. ಯಾವುದೇ ಭಕ್ತನನ್ನು ಅಥವಾ ಯಾತ್ರಿಕರನ್ನು ಯಾವುದೇ ವ್ಯಕ್ತಿಯಿಂದ ಶೋಷಣೆಯಾಗಲು ಸಾಧ್ಯವಿಲ್ಲ ಎಂದು ಹೇಳಿದೆ.
1. ತ್ರಾವಣಕೋರ ದೇವಸ್ವಂ ಬೋರ್ಡ್ ಜಾರಿಗೊಳಿಸಿದ ಟೆಂಡರ್ ನೋಟಿಸ್‌ನಿಂದಾಗಿ ವಿವಾದ ಪ್ರಾರಂಭವಾಯಿತು. ಇದರಲ್ಲಿ ಕೆಲವು ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಿಗೆ ಭಕ್ತರಿಗಾಗಿ ಮುಖ್ಯ ಆಧಾರ ಶಿಬಿರವಾಗಿರುವ ಎರುಮೇಲಿಯಲ್ಲಿ ವಿಧಿಗಾಗಿ ಯಾತ್ರಾರ್ಥಿಗಳಿಂದ ಪ್ರತಿ ವ್ಯಕ್ತಿಯಿಂದ 10 ರೂಪಾಯಿ ಸಂಗ್ರಹಿಸುವ ಅನುಮತಿಯನ್ನು ನೀಡಲಾಗಿತ್ತು.
2. ಈ ಅಧಿಸೂಚನೆಗೆ ಭಾರಿ ವಿರೋಧ ವ್ಯಕ್ತವಾಯಿತು. ಈ ಅಧಿಸೂಚನೆಯಿಂದ ಭಕ್ತರ ಸಂವಿಧಾನಾತ್ಮಕ ಅಧಿಕಾರದ ಉಲ್ಲಂಘನೆಯಾಗುತ್ತಿದೆಯೆಂದು ಹೇಳುತ್ತಾ, ಬೋರ್ಡನ ನಿರ್ಣಯವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ದೂರ ದಾಖಲಿಸಲಾಯಿತು. `ಈ ಟೆಂಡರ ಭಕ್ತರ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಇಲ್ಲಿ ದೇಣಿಗೆ ಐಚ್ಛಿಕವಾಗಿತ್ತು; ಆದರೆ ಶುಲ್ಕವನ್ನು ಕಡ್ಡಾಯಗೊಳಿಸುವುದು ಅಯೋಗ್ಯವಾಗಿದೆ’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
3. ತದನಂತರ ದೇವಸ್ವಂ ಬೋರ್ಡ್ ಟೆಂಡರ್ ಅನ್ನು ಹಿಂಪಡೆಯಿತು ಮತ್ತು ಇನ್ನುಮುಂದೆ ಪೊಟ್ಟುಕುಥಲ ವಿಧಿ ಉಚಿತವಾಗಿ ಮಾಡಲು ನೀಡಲಾಗುವುದು ಎಂದು ಘೋಷಿಸಿತು. ಭವಿಷ್ಯದಲ್ಲಿ ಅಂತಹ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಮತ್ತು ಯಾತ್ರಾರ್ಥಿಗಳಿಂದ ಯಾರಾದರೂ ಶುಲ್ಕವನ್ನು ಸಂಗ್ರಹಿಸಿದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೋರ್ಡ್ ಸ್ಪಷ್ಟಪಡಿಸಿದೆ.
‘ಪೊಟ್ಟುಕುತಲ್’ ವಿಧಿ ಎಂದರೇನು?
ಸ್ವಾಮಿ ಅಯ್ಯಪ್ಪ ಇವರ ದರ್ಶನಕ್ಕೆ ತೆರಳುವ ಭಕ್ತರು ಮೊದಲು ಎರುಮೇಲಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಪುಣ್ಯಸ್ನಾನದ ನಂತರ ಭಕ್ತರ ಶರೀರದ ಮೇಲೆ ಕುಂಕುಮ, ಚಂದನ ಅಥವಾ ವಿಭೂತಿ ಹಚ್ಚಲಾಗುತ್ತದೆ. ಅದನ್ನು ‘ಪೊಟ್ಟುಕುಥಲ’ ವಿಧಿಯೆಂದು ಹೇಳುತ್ತಾರೆ.