ಭಯೋತ್ಪಾದಕ ಹಫೀಜ್ ಸಯೀದ್‌ಗೆ ೧೦ ವರ್ಷಗಳ ಸೆರೆಮನೆ ಶಿಕ್ಷೆ

ಮುಂಬಯಿನಲ್ಲಿ ನಡೆದ ೨೬/೧೧ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರದಾರ ಮತ್ತು ‘ಜಮಾತ್-ಉದ್-ದವಾ’ದ ಮುಖ್ಯಸ್ಥ ಹಫೀಜ್ ಸಯೀದ್ ಅವರಿಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ೧೦ ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿದೆ.

ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತನ ಕ್ರೂರವಾಗಿ ಥಳಿಸಿ ಹತ್ಯೆ

ಇಲ್ಲಿಯ ಬಿಜೆಪಿ ಕಾರ್ಯಕರ್ತ ೫೫ ವರ್ಷದ ಕಲಾಚಂದ್ ಕರ್ಮಕಾರ ಅವರನ್ನು ಐದು ಜನರು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕರ್ಮಕಾರ ಇಲ್ಲಿ ಬಿಜೆಪಿಯ ಬೂತ್ ಸಮಿತಿಯ ಸಚಿವರಾಗಿದ್ದರು. ದಾಳಿಯಲ್ಲಿ ಇತರ ಇಬ್ಬರು ಕಾರ್ಯಕರ್ತರು ಸಹ ಗಾಯಗೊಂಡಿದ್ದಾರೆ. ಈ ಘಟನೆ ಕರಮಾಪಾಡದಲ್ಲಿ ಘಟಿಸಿದೆ.

ಭೋಪಾಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್‌ರ ವಿರುದ್ಧ ಬಂಧನದ ವಾರಂಟ್

ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಅವರು ಭೋಪಾಲ್‌ನ ಇಕ್ಬಾಲ್ ಮೈದಾನದಲ್ಲಿ ಫ್ರಾನ್ಸ್‌ನ ರಾಷ್ಟ್ರಪತಿ ಇಮ್ಯಾನುಯಲ್ ಮ್ಯಾಕ್ರಾನ್ ಇವರ ಪ್ರವಾದಿ ಮೊಹಮ್ಮದರ ಬಗೆಗಿನ ಹೇಳಿಕೆಯ ವಿರುದ್ಧ ಅನಧಿಕೃತವಾಗಿ ಆಂದೋಲನ ನಡೆಸಿ ಪ್ರಚೋದನಕಾರಿ ಭಾಷಣ ಮಾಡಿದ್ದರು.

ಸಿಬಿಐ ತನಿಖೆಗೆ ರಾಜ್ಯಗಳ ಅನುಮತಿ ಅಗತ್ಯವಿದೆ ! – ಸರ್ವೋಚ್ಚ ನ್ಯಾಯಾಲಯದ ನಿರ್ಧಾರ

ಕೇಂದ್ರ ತನಿಖಾ ದಳ (ಸಿಬಿಐನ) ವಿಚಾರಣೆ ನಡೆಸಲು ಸಂಬಂಧಪಟ್ಟ ರಾಜ್ಯದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಈ ನಿಬಂಧನೆಯು ಸಂವಿಧಾನದ ಫೆಡರಲ್ ವ್ಯಾಖ್ಯಾನಕ್ಕೆ ಸಂಬಂಧಿಸಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ದೆಹಲಿಯ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆಗೆ ಸಿಬಿಐಗೆ ನ್ಯಾಯವ್ಯಾಪ್ತಿ ಹೊಂದಲು ರಾಜ್ಯ ಸರಕಾರದ ಅನುಮತಿ ಬೇಕು.

ಬಾಂಗ್ಲಾದೇಶ ಕ್ರಿಕೆಟಿಗ ಶಾಕೀಬ್ ಅಲ್ ಹಸನ್‌ರಿಂದ ಕ್ಷಮೆಯಾಚನೆ

ಬಾಂಗ್ಲಾದೇಶ ಕ್ರಿಕೆಟ ಸಂಘದ ಕ್ರಿಕೆಟಿಗ ಶಾಕೀಬ್ ಅಲ್ ಹಸನ್ ಅವರು ಕೋಲಕಾತಾದಲ್ಲಿ ಶ್ರೀ ಮಹಾಕಾಳಿ ಮಾತೆಯ ಪೂಜೆಯನ್ನು ಮಾಡಿದ ನಂತರ ಮತಾಂಧರಿಂದ ಬೆದರಿಕೆಗಳು ಬರಲಾರಂಭವಾಗಿದೆ. ಇದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ.

ಅಂಬೇಡಕರನಗರ (ಉತ್ತರ ಪ್ರದೇಶ)ದ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳ ಮೂಲಕ ಹಾದುಹೋಗುವ ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮತ್ತು ಹರಿತವಾದ ಶಸ್ತ್ರಾಸ್ತ್ರಗಳಿಂದ ದಾಳಿ.

ಇಲ್ಲಿ ನವೆಂಬರ್ ೧೫ ರಂದು ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪಂಹಿತಿಪುರ ಬಜಾರನಲ್ಲಿ ಶ್ರೀ ಲಕ್ಷ್ಮೀ ಮತ್ತು ಶ್ರೀ ಗಣಪತಿಯ ವಿಗ್ರಹಗಳ ವಿಸರ್ಜನೆಯ ಮೆರವಣಿಗೆಯ ಮೇಲೆ ಮಸೀದಿಯ ಮುಂದೆ ಡಿಜೆ ಹಾಕಲಾಗಿದೆ ಎಂದು ಹೇಳುತ್ತಾ ಮತಾಂಧರು ಕಲ್ಲುತೂರಾಟ ಮಾಡಿದರು.

‘ಪ್ರೀತಿಸುವ ಮೊದಲು ಧರ್ಮವನ್ನು ನೋಡಬೇಕೆ ?’(ಅಂತೆ) – ನಟ ಝಿಶಾನ್ ಅಯ್ಯುಬ್ ಅವರ ಪ್ರಶ್ನೆ

ಪ್ರೀತಿಸಿದ ನಂತರ ಜೈಲಿಗೆ ಹೋಗಬೇಕಾಗುವುದೋ ಅಥವಾ ಪ್ರೀತಿಯನ್ನು ಮಾಡುವ ಮೊದಲು ಧರ್ಮವನ್ನು ನೋಡಬೇಕಾಗುವುದು ? ಭಯ ಪಡಬೇಡಿ. ಸಮಾಜದಲ್ಲಿ ದ್ವೇಷವನ್ನು ಹರಡುವವರನ್ನು ಈಗ ಯಾರೂ ತಡೆಯುವುದಿಲ್ಲ. ಬದಲಾಗಿ, ಅವರು ಶ್ಲಾಘನೆಗೆ ಒಳಗಾಗುತ್ತಾರೆ. ‘ಲವ್ ಜಿಹಾದ್’ ನಂತಹ ಸುಳ್ಳು ಪರಿಕಲ್ಪನೆಯ ಮೇಲೆ ಕಾನೂನು ಸಿದ್ಧವಾಗುತ್ತಿದೆ.

ಪೋಪ್ ಫ್ರಾನ್ಸಿಸ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಓರ್ವ ಮಾಡೆಲ್‌ನ ಮಾದಕ ಫೋಟೋವನ್ನು ಲೈಕ್ ಮಾಡಿದ್ದಕ್ಕೆ ಟೀಕೆ

ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್‌ರು ತಮ್ಮ ಅಧಿಕೃತ ‘ಇನ್‌ಸ್ಟಾಗ್ರಾಮ್’ ಖಾತೆಯಲ್ಲಿ ಬ್ರೆಜಿಲ್‌ನ ಮಾಡೆಲ್(ರೂಪದರ್ಶಿ) ನತಾಲಿಯಾ ಗರಿಬೊಟೊ ಅವರ ಅರೆನಗ್ನ ಮಾದಕ ಛಾಯಾಚಿತ್ರಕ್ಕೆ ‘ಲೈಕ್’(ಇಷ್ಟ) ಮಾಡಿದ್ದಾರೆ. ಇದರಿಂದ ಸಾಮಾಜಿಕ ಮಾಧ್ಯಮಗಳಿಂದ ವ್ಯಾಪಕವಾಗಿ ಟೀಕೆಯಾಗಲು ಆರಂಭವಾಗಿರುವುದನ್ನು ನೋಡಿ ಪೋಪ್‌ರು ‘ಅನ್‌ಲೈಕ್’(ಇಷ್ಟವಿಲ್ಲ) ಮಾಡಿದ್ದಾರೆ.

ಬೆಂಗಳೂರು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜನ ಬಂಧನ

ಡಿ ಜೆ ಹಳ್ಳಿಯಲ್ಲಿ ನಡೆದ ಮತಾಂಧರ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಜನಸಮೂಹವನ್ನು ಪ್ರಚೋದಿಸಿದ ಆರೋಪವಿದೆ. ಈ ಗಲಭೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಕಿಷ್ಕಿಂಧೆಯಲ್ಲಿ ೨೧೫ ಮೀಟರ್ ಎತ್ತರದ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗುವುದು

ಕರ್ನಾಟಕದ ವಿಶ್ವ ಪ್ರಸಿದ್ಧ ಹಂಪಿಯ ‘ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಮುಖ್ಯಸ್ಥ ಸ್ವಾಮಿ ಗೋವಿಂದ ಆನಂದ ಸರಸ್ವತಿ ಅವರು ೨೧೫ ಮೀಟರ್ ಎತ್ತರದ ಹನುಮಾನ್ ವಿಗ್ರಹವನ್ನು ಕರ್ನಾಟಕದ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.