ಕರ್ನಾಟಕದ ಕಿಷ್ಕಿಂಧೆಯಲ್ಲಿ ೨೧೫ ಮೀಟರ್ ಎತ್ತರದ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗುವುದು

ಕರ್ನಾಟಕದ ವಿಶ್ವ ಪ್ರಸಿದ್ಧ ಹಂಪಿಯ ‘ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಮುಖ್ಯಸ್ಥ ಸ್ವಾಮಿ ಗೋವಿಂದ ಆನಂದ ಸರಸ್ವತಿ ಅವರು ೨೧೫ ಮೀಟರ್ ಎತ್ತರದ ಹನುಮಾನ್ ವಿಗ್ರಹವನ್ನು ಕರ್ನಾಟಕದ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಧಾರ್ಮಿಕ ಟೋಪಿಯನ್ನು ಹಾಕಿಕೊಂಡ ಪ್ರಕರಣದಲ್ಲಿ ಪೊಲೀಸ್ ಉಪನಿರೀಕ್ಷಕ ಅಮಾನತು

ಅಸ್ಸಾಂನ ವೈರ್‌ಲೆಸ್ ಮೆಸೇಜಿಂಗ್ ಘಟಕದ ಪೊಲೀಸ್ ಉಪನಿರೀಕ್ಷಕ ಮಹಮ್ಮದ ಶೌಕತ್ ಅಲಿಯನ್ನು ಕಾರ್ಯ ನಿರ್ವಹಿಸುತ್ತಿರುವಾಗ ಗೋಲಾಕಾರ (ಧಾರ್ಮಿಕ) ಟೋಪಿ ಹಾಕಿದ ಪ್ರಕರಣದಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಟೋಪಿ ಹಾಕಿಕೊಂಡಿರುವುದರ ಛಾಯಾಚಿತ್ರ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ.

ಜೆ.ಎನ್.ಯು. ಅನ್ನು ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಿ !

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಮಾಜಿ ಸಚಿವ ಸಿ.ಟಿ. ರವಿ ಇವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆ.ಎನ್.ಯು.) ಹೆಸರನ್ನು ಬದಲಾಯಿಸಿ ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ತುರ್ಕಿಸ್ತಾನದ ಕಟ್ಟರ ಸಂಘಟನೆಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಬಂಧ – ಸ್ವೀಡನ್‌ನ ಸಂಶೋಧನಾ ಸಂಸ್ಥೆಯಿಂದ ಮಾಹಿತಿ

ಸ್ವೀಡನ್‌ನ ಸಂಶೋಧನಾ ಸಂಸ್ಥೆ ‘ನಾರ್ಡಿಕ್ ಮಾನಿಟರ್’ವು ತುರ್ಕಸ್ತಾನದ ಕಟ್ಟರ ಸಂಘಟನೆಯಾದ ಐ.ಎಚ್.ಎಚ್. (ಇಂಸಾನಿ ಯಾರ್ದಿಮ್ ವಕ್ಫಿ ಅಂದರೆ ಮಾನವತಾವಾದಿ ಸಹಾಯ ಸಂಸ್ಥೆ) ಹಾಗೂ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಇವರೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿದೆ.

‘ಇಡೀ ದೇಶದಲ್ಲಿ ಎಂ.ಐ.ಎಂ.ನ ಧ್ವಜ ಹಾರಿಸುವುದನ್ನು ಜಗತ್ತು ನೋಡಲಿದೆ !’(ಅಂತೆ) – ಅಕಬರುದ್ದೀನ್ ಒವೈಸಿ

ಬಿಹಾರ ಚುನಾವಣೆಯಲ್ಲಿ ಎಂ.ಐ.ಎಂ.ಗೆ ಸಿಕ್ಕಿದ ಯಶಸ್ಸು ಭಾರತೀಯ ರಾಜಕೀಯದಲ್ಲಿ ಹೊಸ ತಿರುವನ್ನು ಸೂಚಿಸುತ್ತದೆ. ಎಂ.ಐ.ಎಂ. ಭಾರತದಾದ್ಯಂತ ಧ್ವಜ ಹಾರಿಸುತ್ತಿದೆ ಎಂದು ಎಂ.ಐ.ಎಂ. ಶಾಸಕ ಮತ್ತು ಪಕ್ಷದ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿಯವರ ಸಹೋದರ ಅಕಬರುದ್ದೀನ್ ಒವೈಸಿ ಹೇಳಿದ್ದಾರೆ.

ದೀಪಾವಳಿಯಂದು ಬೆಳಿಗ್ಗೆ ಪಟಾಕಿ ಸಿಡಿಸಲು ಕಾಂಗ್ರೆಸ್ ಮಾಜಿ ಸಂಸದ ಶಾಹಿದ್ ಸಿದ್ದಿಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ !

ದೀಪಾವಳಿಯ ಮುಂಜಾನೆ ಪಟಾಕಿ ಸಿಡಿಸುವುದಕ್ಕೆ ಕಾಂಗ್ರೆಸ್‌ನ ಮಾಜಿ ಸಂಸದ ಶಾಹಿದ್ ಸಿದ್ದಿಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬೆಳಗ್ಗೆ ೪ ಗಂಟೆಗೆ ಯಾವ ರೀತಿಯ ಜನರು ಪಟಾಕಿ ಸಿಡಿಸುತ್ತಾರೆ?’ ಎಂದು ಅವರು ಟ್ವೀಟ್ ಮಾಡಿದ್ದಾರೆ. ನಿರ್ಧಾರವನ್ನು ಸರಿಯಾಗಿ ಜಾರಿಗೊಳಿಸದಿದ್ದರೆ, ಪಟಾಕಿಗಳನ್ನು ನಿಷೇಧಿಸುವುದರಿಂದ ಏನು ಪ್ರಯೋಜನ ? ’ಎಂದು ಅವರು ಕೇಳಿದರು.

ಪಾಕಿಸ್ತಾನದಲ್ಲಿ ಪ್ರತಿದಿನ ೧೧ ಅತ್ಯಾಚಾರ ಘಟನೆಗಳು ನಡೆಯುತ್ತಿವೆ !

ಪಾಕಿಸ್ತಾನದಲ್ಲಿ ಪ್ರತಿದಿನ ೧೧ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದರೆ, ಕಳೆದ ೬ ವರ್ಷಗಳಲ್ಲಿ ದೇಶದಲ್ಲಿ ೨೨ ಸಾವಿರ ಕ್ಕೂ ಹೆಚ್ಚು ಅತ್ಯಾಚಾರ ಘಟನೆಗಳು ನಡೆದಿವೆ; ಆದರೆ ಈ ಘಟನೆಗಳಲ್ಲಿ ಕೇವಲ ೭೭ ಪ್ರಕರಣಗಳಲ್ಲಿ ಆರೋಪಿಗಳನ್ನು ಶಿಕ್ಷೆಗೊಳಪಡಿಸಲಾಗಿದೆ.

ಈ ಸಲದ ದೀಪಾವಳಿಯಲ್ಲಿ ಚೀನಾದ ಸಂಸ್ಥೆಗಳಿಗೆ ೪೦ ಸಾವಿರ ಕೋಟಿ ರೂಪಾಯಿ ನಷ್ಟ

ಚಿಲ್ಲರೆ ವ್ಯಾಪಾರಿ ಸಂಘಟನೆಯಾದ ‘ಕಾನ್ಫಡರೆಶನ್ ಆಫ್ ಆಲ್ ಇಂಡಿಯಾ ಟ್ರೆಡರ‍್ಸ್’ನ ನೀಡಿದ ಮಾಹಿತಿಯ ಪ್ರಕಾರ ಈ ವರ್ಷ ದೀಪಾವಳಿಯ ಸಂದರ್ಭದಲ್ಲಿ ಭಾರತೀಯ ಚಿಲ್ಲರೆ ವ್ಯಾಪಾರಿಗಳು ೭೨ ಸಾವಿರ ಕೋಟಿ ರೂಪಾಯಿ ಮಾರಾಟ ಮಾಡಿದರೆ, ಚೀನಾದ ಸಂಸ್ಥೆಗಳು ೪೦ ಸಾವಿರ ಕೋಟಿ ರೂಪಾಯಿ ನಷ್ಟ ಅನಭವಿಸಬೇಕಾಯಿತು

ಸ್ಮೃತಿಕಾರರು ಮಹಿಳೆಯರಿಗೆ ನೀಡಿದ ಗೌರವ ಮತ್ತು ಅವರ ಬಗ್ಗೆ ಹೇಳಿದ ಮಹತ್ವ

ಸನ್ಯಾಸವು ಹೊಸ ಜನ್ಮವಾಗಿದೆ. ಮಗನು ಸನ್ಯಾಸವನ್ನು ಸ್ವೀಕರಿಸಿದರೆ, ಅವನಿಗೆ ತನ್ನ ತಾಯಿ-ತಂದೆಯವರ ಸಂಬಂಧವು ಕೊನೆಗೊಳ್ಳುತ್ತದೆ. ಈಗ ತಂದೆಯು ಅವನಿಗೆ ನಮಸ್ಕಾರ ಮಾಡುತ್ತಾನೆ; ಆದರೆ ಸನ್ಯಾಸಿ ಮಗನು ಮಾತ್ರ ತಾಯಿಗೆ ನಮಸ್ಕಾರ ಮಾಡಬೇಕು.’

ಬಂಗಾಳ ಅಲ್ ಕೈದಾದ ತಾಣವಾಗಿ ಮಾರ್ಪಟ್ಟಿದೆ; ಅದರ ಪರಿಸ್ಥಿತಿ ಕಾಶ್ಮೀರಕ್ಕಿಂತ ಕೆಟ್ಟದಾಗಿದೆ ! – ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್

ಕೆಲವು ದಿನಗಳ ಹಿಂದೆ ಕೂಚ್‌ಬಿಹಾರ್‌ನಲ್ಲಿ ಅಲ್ ಕೈದಾ ಭಯೋತ್ಪಾದಕರನ್ನು ಗುರುತಿಸಲಾಗಿತ್ತು. ಅವರ ಜಾಲವು ಬಂಗಾಲದಾದ್ಯಂತ ಹರಡಿದೆ. ಈ ರಾಜ್ಯ ಭಯೋತ್ಪಾದಕರ ತಾಣವಾಗಿ ಮಾರ್ಪಟ್ಟಿದೆ. ಕಾಶ್ಮೀರಕ್ಕಿಂತ ಇಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಬಿಜೆಪಿಯ ಬಂಗಾಳ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ.