ಬೆಂಗಳೂರು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜನ ಬಂಧನ

ಕಾಂಗ್ರೆಸ್ ಶಾಸಕರೊಬ್ಬರ ಮನೆಯ ಮೇಲೆ ದಾಳಿ ಮಾಡಲು ಮತಾಂಧರನ್ನು ಪ್ರಚೋದಿಸಿರುವ ಆರೋಪ

ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶತ್ರುಗಳೆಂದು ಇದರಿಂದ ಗಮನಕ್ಕೆ ಬರುತ್ತದೆ ! ಒಬ್ಬ ಹಿಂದೂ ತನ್ನ ಪಕ್ಷದ ಮತ್ತು ಅದರಲ್ಲೂ ಹಿಂದೂ ಶಾಸಕರ ಮೇಲೆ ಆಕ್ರಮಣ ಮಾಡಲು ಮತಾಂಧರನ್ನು ಪ್ರಚೋದಿಸುತ್ತಾನೆ, ಇದಕ್ಕಿಂತ ಭಯಾನಕವಾದದ್ದು ಏನಿದೆ ! ಮುಂದಿನ ಚುನಾವಣೆಗಳಲ್ಲಿ ಹಿಂದೂಗಳು ಅವರಿಗೆ ಪಾಠ ಕಲಿಸಿದರೆ ಆಶ್ಚರ್ಯವೇನಿಲ್ಲ !

ಬೆಂಗಳೂರು – ಡಿ ಜೆ ಹಳ್ಳಿಯಲ್ಲಿ ನಡೆದ ಮತಾಂಧರ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಜನಸಮೂಹವನ್ನು ಪ್ರಚೋದಿಸಿದ ಆರೋಪವಿದೆ. ಈ ಗಲಭೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ ೧೧ ರ ರಾತ್ರಿ ನಗರದ ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಪ್ರದೇಶಗಳಲ್ಲಿ ಗಲಭೆಗಳು ನಡೆದವು. ಮತಾಂಧರು ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಪ್ರದೇಶದ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ್ದರು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೂ ಬೆಂಕಿ ಹಚ್ಚಲಾಗಿತ್ತು. ಮೂರ್ತಿಯವರ ಮನೆಯ ಮೇಲೆ ದಾಳಿ ಮಾಡಲು ಕಾರ್ಪೋರೇಟರ್ ಸಂಪತ ರಾಜ್ ಮತಾಂಧರ ಗುಂಪನ್ನು ಪ್ರಚೋದಿಸಿದ್ದರು. ಮೂರ್ತಿ ಮತ್ತು ಅವರ ಸಹೋದರಿ ಜಯಂತಿ ಅವರನ್ನು ಗುರಿಯಾಗಿಸಲು ಸಂಪತ ರಾಜ್ ಜನಸಮೂಹವನ್ನು ಕೆರಳಿಸಿದ್ದರು ಎಂದು ಆರೋಪಿಸಲಾಗಿದೆ. ಸಂಪತ ರಾಜ್ ಇವರು ಕೊರೋನಾ ಕಾಯಿಲೆಯಿಂದ ಬಳಲುತ್ತಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು; ಆದರೆ ನಂತರ ಅವರು ಪರಾರಿಯಾಗಿದ್ದರು.