ಸಿಬಿಐ ತನಿಖೆಗೆ ರಾಜ್ಯಗಳ ಅನುಮತಿ ಅಗತ್ಯವಿದೆ ! – ಸರ್ವೋಚ್ಚ ನ್ಯಾಯಾಲಯದ ನಿರ್ಧಾರ

ನವ ದೆಹಲಿ – ಕೇಂದ್ರ ತನಿಖಾ ದಳ (ಸಿಬಿಐನ) ವಿಚಾರಣೆ ನಡೆಸಲು ಸಂಬಂಧಪಟ್ಟ ರಾಜ್ಯದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಈ ನಿಬಂಧನೆಯು ಸಂವಿಧಾನದ ಫೆಡರಲ್ ವ್ಯಾಖ್ಯಾನಕ್ಕೆ ಸಂಬಂಧಿಸಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ದೆಹಲಿಯ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆಗೆ ಸಿಬಿಐಗೆ ನ್ಯಾಯವ್ಯಾಪ್ತಿ ಹೊಂದಲು ರಾಜ್ಯ ಸರಕಾರದ ಅನುಮತಿ ಬೇಕು.

ಸಿಬಿಐ ವ್ಯಾಪ್ತಿಯ ಬಗ್ಗೆ ರಾಜ್ಯಗಳು ಹೆಚ್ಚಾಗಿ ಪ್ರಶ್ನೆಗಳನ್ನು ಎತ್ತುತ್ತವೆ. ತನಿಖೆ ನಡೆಸುವ ಮೊದಲು ಬಂಗಾಲ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ಸರಕಾರದಿಂದ ಸಿಬಿಐಯು ಅನುಮತಿ ಪಡೆಯಬೇಕು ಎಂದು ಘೋಷಿಸಿವೆ.