ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತನ ಕ್ರೂರವಾಗಿ ಥಳಿಸಿ ಹತ್ಯೆ

ಕಳೆದ ಕೆಲವು ವರ್ಷಗಳಲ್ಲಿ ಇಂತಹ ಅನೇಕ ಘಟನೆಗಳು ನಡೆದರೂ, ಪ್ರಜಾಪ್ರಭುತ್ವದ ರಕ್ಷಣೆಯ ಬಗ್ಗೆ ಸದಾ ಮಾತನಾಡುವ ರಾಜಕೀಯ ಪಕ್ಷಗಳು ಈ ವಿಷಯಗಳ ಬಗ್ಗೆ ಏಕೆ ಮೌನವಾಗಿವೆ ? ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಯಿಂದ ಅವರಿಗೆ ಆನಂದ ಸಿಗುತ್ತದೆಯೇ ?

ಕೂಚ್‌ಬಿಹಾರ (ಬಂಗಾಲ) – ಇಲ್ಲಿಯ ಬಿಜೆಪಿ ಕಾರ್ಯಕರ್ತ ೫೫ ವರ್ಷದ ಕಲಾಚಂದ್ ಕರ್ಮಕಾರ ಅವರನ್ನು ಐದು ಜನರು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕರ್ಮಕಾರ ಇಲ್ಲಿ ಬಿಜೆಪಿಯ ಬೂತ್ ಸಮಿತಿಯ ಸಚಿವರಾಗಿದ್ದರು.

ದಾಳಿಯಲ್ಲಿ ಇತರ ಇಬ್ಬರು ಕಾರ್ಯಕರ್ತರು ಸಹ ಗಾಯಗೊಂಡಿದ್ದಾರೆ. ಈ ಘಟನೆ ಕರಮಾಪಾಡದಲ್ಲಿ ಘಟಿಸಿದೆ. ಈ ಘಟನೆಯ ನಂತರ ಇಲ್ಲಿ ಉದ್ವಿಗ್ನತೆಯು ಉಂಟಾಗಿದೆ. ಪ್ರಕರಣದಲ್ಲಿ ಒಬ್ಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ‘ಹತ್ಯೆಯ ಹಿಂದೆ ಯಾವುದೇ ರಾಜಕೀಯ ಸಂಬಂಧವಿಲ್ಲ’, ಆದರೆ ಬಿಜೆಪಿ ಮತ್ತು ಕರ್ಮಕಾರ ಕುಟುಂಬಗಳು ಈ ಹತ್ಯೆಯ ಹಿಂದೆ ತೃಣಮೂಲ ಕಾಂಗ್ರೆಸ್‌ನ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.