ಕರ್ನಾಟಕದ ಕಿಷ್ಕಿಂಧೆಯಲ್ಲಿ ೨೧೫ ಮೀಟರ್ ಎತ್ತರದ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗುವುದು

ಅಯೋಧ್ಯೆ (ಉತ್ತರ ಪ್ರದೇಶ) – ಕರ್ನಾಟಕದ ವಿಶ್ವ ಪ್ರಸಿದ್ಧ ಹಂಪಿಯ ‘ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಮುಖ್ಯಸ್ಥ ಸ್ವಾಮಿ ಗೋವಿಂದ ಆನಂದ ಸರಸ್ವತಿ ಅವರು ೨೧೫ ಮೀಟರ್ ಎತ್ತರದ ಹನುಮಾನ್ ವಿಗ್ರಹವನ್ನು ಕರ್ನಾಟಕದ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಕಿಷ್ಕಿಂಧೆಯು ಸುಗ್ರೀವನ ಸಾಮ್ರಾಜ್ಯವಾಗಿತ್ತು. ಅಯೋಧ್ಯೆಯ ಶ್ರೀ ರಾಮ್ ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿಯಾದ ನಂತರ ಸ್ವಾಮಿ ಗೋವಿಂದ್ ಆನಂದ್ ಸರಸ್ವತಿ ಈ ಘೋಷಣೆ ಮಾಡಿದ್ದಾರೆ. ‘ಈ ವಿಗ್ರಹಕ್ಕೆ ೧ ಸಾವಿರದ ೨೦೦ ಕೋಟಿ ರೂಪಾಯಿ ಖರ್ಚು ಆಗಲಿದೆ. ಇದಕ್ಕಾಗಿ ದೇಶದಾದ್ಯಂತ ದೇಣಿಗೆ ಸಂಗ್ರಹಿಸಲು ರಥಯಾತ್ರೆ ಆಯೋಜಿಸಲಾಗುವುದು’ ಎಂದೂ ಕೂಡ ಹೇಳಿದರು.