ಹಾಸನ (ಕರ್ನಾಟಕ) ದ ಪ್ರಾಚೀನ ದೇವಾಲಯದಲ್ಲಿ ಶ್ರೀ ಮಹಾಕಾಳಿದೇವಿಯ ವಿಗ್ರಹ ಅಜ್ಞಾತರಿಂದ ಧ್ವಂಸ

ಇಲ್ಲಿನ ದೊಡ್ಡಗಡಾವಳ್ಳಿ ಚತುಶಕುತಾ ದೇವಸ್ಥಾನದಲ್ಲಿ ಶ್ರೀ ಮಹಾಕಾಳಿದೇವಿಯ ವಿಗ್ರಹವನ್ನು ಅಜ್ಞಾತ ವ್ಯಕ್ತಿಗಳು ಒಡೆದಿರುವುದು ಬೆಳಕಿಗೆ ಬಂದಿದೆ. ಈ ದೇವಸ್ಥಾನವನ್ನು ೧೧೧೩ ರಲ್ಲಿ ಹೊಯ್ಸಳ ರಾಜವಂಶದ ರಾಜ ವಿಷ್ಣುವರ್ಧನ ಇವರ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿತ್ತು.

ಮಥುರಾ (ಉತ್ತರ ಪ್ರದೇಶ)ದ ಆಶ್ರಮದಲ್ಲಿ ೨ ಸಾಧುಗಳ ಅನುಮಾನಾಸ್ಪದ ಸಾವು, ಮೂರನೆಯವರ ಸ್ಥಿತಿ ಗಂಭೀರ

ಗೋವರ್ಧನದ ಕಾಡಿನಲ್ಲಿರುವ ಗಿರಿರಾಜ ಉದ್ಯಾನವನದ ಹಿಂದುಗಡೆ ೩ ಸನ್ಯಾಸಿಗಳು ಒಂದು ವರ್ಷದಿಂದ ಆಶ್ರಮ ಕಟ್ಟಿ ಅಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ೨ ಸಾಧುಗಳ ಶವಗಳು ಆಶ್ರಮದಲ್ಲಿ ಪತ್ತೆಯಾಗಿವೆ, ಮತ್ತು ಮೂರನೆಯವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ.

ಕೇರಳ ರಾಜ್ಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ‘ಆಕ್ಷೇಪಾರ್ಹ’ ಪೋಸ್ಟ್ ಹಾಕಿದರೆ ೫ ವರ್ಷ ಸೆರೆಮನೆ ಶಿಕ್ಷೆ

ಸಾಮಾಜಿಕ ಮಾಧ್ಯಮದಲ್ಲಿ(ಸೋಶಲ್ ಮೀಡಿಯಾ) ಯಾವುದೇ ವ್ಯಕ್ತಿಯ ಮಾನಹಾನಿ, ಆತನಿಗೆ ನೀಡಿದ ಬೆದರಿಕೆ ಮತ್ತು ಆತನನ್ನು ಅವಮಾನಿಸುವುದು, ಶಿಕ್ಷಾರ್ಹ ಅಪರಾಧವಾಗಿದ್ದು ೫ ವರ್ಷಗಳವರೆಗೆ ಸೆರೆಮನೆ ಶಿಕ್ಷೆ ಅಥವಾ ೧೦,೦೦೦ ರೂಪಾಯಿಗಳ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ಫ್ರಾನ್ಸ್‌ನ ‘ಆ’ ಶಾಲೆಯಲ್ಲಿನ ‘ಎಲ್ಲರನ್ನು ಕೊಲ್ಲುವೆವು’ ಎಂದು ಮತಾಂಧರಿಂದ ಬೆದರಿಕೆ

ಕೆಲವು ವಾರಗಳ ಹಿಂದೆ ಫ್ರಾನ್ಸ್‌ನ ಶಾಲೆಯೊಂದರ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿಯು ‘ಶಾರ್ಲಿ ಹೆಬ್ದೋ’ ಈ ಪತ್ರಿಕೆಯಲ್ಲಿ ಪ್ರಕಟವಾದ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದರು. ಆದ್ದರಿಂದ ಮತಾಂಧ ವಿದ್ಯಾರ್ಥಿಯೊಬ್ಬ ಆ ಶಿಕ್ಷಕಕರ ಕತ್ತು ಸೀಳಿದ್ದನು ಅವರ ಕೊಲೆಗೈದನು.

ಐಎಎಸ್ ಅಧಿಕಾರಿ ದಂಪತಿ ಟೀನಾ ಡಾಬಿ ಮತ್ತು ಅಥರ್ ಖಾನ್ ವಿವಾಹ ವಿಚ್ಛೇದನೆಗಾಗಿ ಅರ್ಜಿ

ಹಿಂದೂ ಮಹಾಸಭೆಯು ‘ಲವ್ ಜಿಹಾದ್’ ಎಂದು ಆರೋಪಿಸಿದ ಐ.ಎ.ಎಸ್. ಅಧಿಕಾರಿ ಟೀನಾ ದಾಬಿ ಮತ್ತು ಅಥರ್ ಖಾನ್ ಮದುವೆಯಾದ ಎರಡು ವರ್ಷಗಳ ನಂತರ ಇಲ್ಲಿನ ಕುಟುಂಬ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

‘ಮುಸ್ಲಿಮರಿಗೆ ರಾಜಕೀಯದಲ್ಲಿ ಭಾಗವಹಿಸುವ ಹಕ್ಕು ಇರಬಾರದು’, ಎಂಬ ಸುಳ್ಳಿನ ಮೇಲೆ ಹಿಂದುತ್ವ ನಿಂತಿದೆ ! – ಅಸದುದ್ದೀನ್ ಒವೈಸಿ

ರಾಜಕೀಯ ಅಧಿಕಾರವನ್ನು ಒಂದು ಸಮುದಾಯದಲ್ಲಿ ಮಾತ್ರ ಕೇಂದ್ರೀಕರಿಸಬೇಕು ಮತ್ತು ಮುಸ್ಲಿಮರಿಗೆ ರಾಜಕೀಯದಲ್ಲಿ ಭಾಗವಹಿಸುವ ಯಾವುದೇ ಹಕ್ಕು ಇರಬಾರದು. ಈ ಸುಳ್ಳಿನ ಮೇಲೆ ರಾ. ಸ್ವಂ. ಸೇವಕ ಸಂಘದ ಹಿಂದುತ್ವ ಆಧಾರಿತವಾಗಿದೆ.

ಬಂಗಾಲದಲ್ಲಿ ಬಿಜೆಪಿ ಸರಕಾರ ಬಂದರೆ, ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸುತ್ತೇವೆ ! – ಬಂಗಾಲದ ಬಿಜೆಪಿಯ ಸಂಸದೆ, ಲಾಕೆಟ್ ಚಟರ್ಜಿ

ರಾಜ್ಯದಲ್ಲಿ ೨೦೨೧ ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ‘ಲವ್ ಜಿಹಾದ್’ ವಿರುದ್ಧ ಕಾನೂನು ಜಾರಿಗೊಳಿಸುತ್ತೇವೆ ಮತ್ತು ‘ಲವ್ ಜಿಹಾದ್’ ಅನ್ನು ನಿಷೇಧಿಸುತ್ತೇವೆ, ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಬಂಗಾಲದ ಸಂಸದೆ ಲಾಕೆಟ್ ಚಟರ್ಜಿ ಹೇಳಿದರು. ‘ಲವ್ ಜಿಹಾದ್’ ಪ್ರಕರಣಗಳಲ್ಲಿ ಬಂಗಾಲ ಮುಂಚೂಣಿಯಲ್ಲಿದೆ’ ಎಂದು ಈ ಹಿಂದೆ ವಿಶ್ವ ಹಿಂದೂ ಪರಿಷತ್ತು ಹೇಳಿತ್ತು.

ಕೇಂದ್ರ ಸರಕಾರದಿಂದ ‘ಸುದರ್ಶನ್ ಟಿವಿ’ಯ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮಕ್ಕೆ ಅನುಮತಿ

ಕೇಂದ್ರದ ಬಿಜೆಪಿ ಸರಕಾರವು ‘ಸುದರ್ಶನ್ ಟಿವಿ’ ಈ ಖಾಸಗಿ ಸುದ್ದಿ ವಾಹಿನಿಯಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುವ ‘ಬಿಂದಾಸ್ ಬೋಲ್ ’ಕಾರ್ಯಕ್ರಮದಲ್ಲಿ ‘ಯು.ಪಿಎಸ್.ಸಿ. ಜಿಹಾದ್’ ವಿಷಯದ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಪ್ರಸರಣಕ್ಕೆ ಅನುಮತಿ ನೀಡಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ.

‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸಲು ಉತ್ತರ ಪ್ರದೇಶ ಸರಕಾರದಿಂದ ಕಾನೂನು ಇಲಾಖೆಗೆ ಪ್ರಸ್ತಾವನೆ

‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸಲು ಉತ್ತರ ಪ್ರದೇಶ ಸರಕಾರದ ಗೃಹ ಸಚಿವಾಲಯ ಕಾನೂನು ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ. ರಾಜ್ಯದಲ್ಲಿ ಲವ್ ಜಿಹಾದ್ ಘಟನೆಗಳು ಹೆಚ್ಚಾದ ಕಾರಣ ಕಾನೂನು ರೂಪಿಸಲು ಸರಕಾರ ನಿರ್ಧರಿಸಿದೆ. ಈ ಸಂಬಂಧ, ಈ ಪ್ರಸ್ತಾಪವನ್ನು ಕಳುಹಿಸಲಾಗಿದೆ.

ದಲಿತರಿಗಾಗಿ ಸರಕಾರಿ ಕ್ಷೌರದಂಗಡಿ ತೆರೆಯಬೇಕು !

ರಾಜ್ಯದ ವಿವಿಧ ಹಳ್ಳಿಗಳಲ್ಲಿ ಕ್ಷೌರದಂಗಡಿ ಇಂದ ಜಾತಿಭೇದ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅನೇಕರು ದಲಿತರ ಕೂದಲನ್ನು ಕತ್ತರಿಸಲು ಹಾಗೂ ಗಡ್ಡ ತೆಗೆಯುವುದಕ್ಕೆ ನಿರಾಕರಿಸುತ್ತಿದ್ದಾರೆ. (ಸರಕಾರ ಅಂತಹವರಿಗೆ ಶಿಕ್ಷೆ ವಿಧಿಸಬೇಕು ! – ಸಂಪಾದಕ) ಆದ್ದರಿಂದ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯು ಸರಕಾರಿ ಕೇಶಾಲಂಕಾರಗೃಹವನ್ನು ನಡೆಸಬೇಕೆಂದು ಶಿಫಾರಸು ಮಾಡಿದೆ.