ಮಧ್ಯಪ್ರದೇಶ ಸರಕಾರವು ಪ್ರಸ್ತಾಪಿಸಿದ ಲವ್ ಜಿಹಾದ್ ವಿರೋಧಿ ಕಾನೂನಿಗೆ ವಿರೋಧ
|
ಮುಂಬಯಿ – ಪ್ರೀತಿಸಿದ ನಂತರ ಜೈಲಿಗೆ ಹೋಗಬೇಕಾಗುವುದೋ ಅಥವಾ ಪ್ರೀತಿಯನ್ನು ಮಾಡುವ ಮೊದಲು ಧರ್ಮವನ್ನು ನೋಡಬೇಕಾಗುವುದು ? ಭಯ ಪಡಬೇಡಿ. ಸಮಾಜದಲ್ಲಿ ದ್ವೇಷವನ್ನು ಹರಡುವವರನ್ನು ಈಗ ಯಾರೂ ತಡೆಯುವುದಿಲ್ಲ. ಬದಲಾಗಿ, ಅವರು ಶ್ಲಾಘನೆಗೆ ಒಳಗಾಗುತ್ತಾರೆ. ‘ಲವ್ ಜಿಹಾದ್’ ನಂತಹ ಸುಳ್ಳು ಪರಿಕಲ್ಪನೆಯ ಮೇಲೆ ಕಾನೂನು ಸಿದ್ಧವಾಗುತ್ತಿದೆ. (ಅಯ್ಯುಬ್ ಇದನ್ನು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ ? – ಸಂಪಾದಕ) ಅರೆ ವಾಹ್ ಸರಕಾರ, ನೀವು ಅಚ್ಚರಿ ಪಡಿಸಿದ್ದೀರಿ, ಎಂದು ನಟ ಝಿಶಾನ್ ಅಯ್ಯುಬ್ ಇವರು ಮಧ್ಯಪ್ರದೇಶ ಸರಕಾರವು ತರಲಿರುವ ‘ಲವ್ ಜಿಹಾದ್’ ವಿರೋಧಿ ಕಾನೂನನ್ನು ವಿರೋಧಿಸಲು ಟ್ವೀಟ್ ಮಾಡಿದ್ದಾರೆ.
प्यार करने पर जेल जाना पड़ेगा!!!
या प्यार करने से पहले धर्म देखना पड़ेगा!!!
घबराइए मत, नफ़रत करने पर कोई नहीं टोकेगा, बल्कि तालियाँ बजाईं और बजवाईं जाएँगी!!👏🏼👏🏼👏🏼
#lovejihaad जैसे झूठ पर क़ानून बनाया जा रहा है! वाह साहेब वाह!!! https://t.co/7IgbrGh5vG— Mohd. Zeeshan Ayyub (@Mdzeeshanayyub) November 17, 2020
ಮಧ್ಯಪ್ರದೇಶ ಸರಕಾರವು ಜಾಮೀನು ರಹಿತ ಅಪರಾಧ ಆಗಿರುವ ಕಾನೂನು ತರಲಿದೆ. ಇದರಲ್ಲಿ ಅಪರಾಧಿಗಳಿಗೆ ೫ ವರ್ಷಗಳವರೆಗೆ ಶಿಕ್ಷೆ ವಿಧಿಸುವ ಏರ್ಪಾಡು ಇರಲಿದೆ.