ಭೋಪಾಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್‌ರ ವಿರುದ್ಧ ಬಂಧನದ ವಾರಂಟ್

ಅನುಮತಿಯಿಲ್ಲದೆ ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಮೆರವಣಿಗೆ ನಡೆಸಿ ಪ್ರಚೋದನಕಾರಿ ಭಾಷಣ ನೀಡಿದ ಪ್ರಕರಣ

ಪ್ರವಾದಿ ಮುಹಮ್ಮದ್‌ರ ಬಗ್ಗೆ ಫ್ರಾನ್ಸ್ ಅಧ್ಯಕ್ಷರು ನೀಡಿದ ಹೇಳಿಕೆಗೆ ಭಾರತದಲ್ಲಿ ವಿರೋಧವಾಗುತ್ತದೆ, ಆದರೆ ಭಾರತದಲ್ಲಿ ಎಷ್ಟು ಹಿಂದೂಗಳು ಮತ್ತು ಅವರ ಜನಪ್ರತಿನಿಧಿಗಳು ತಮ್ಮ ದೇವಿದೇವತೆಗಳ ಅವಮಾನವಾದಾಗ ವಿರೋಧಿಸುತ್ತಾರೆ ?

ಭೋಪಾಲ್ (ಮಧ್ಯಪ್ರದೇಶ) – ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಅವರು ಭೋಪಾಲ್‌ನ ಇಕ್ಬಾಲ್ ಮೈದಾನದಲ್ಲಿ ಫ್ರಾನ್ಸ್‌ನ ರಾಷ್ಟ್ರಪತಿ ಇಮ್ಯಾನುಯಲ್ ಮ್ಯಾಕ್ರಾನ್ ಇವರ ಪ್ರವಾದಿ ಮೊಹಮ್ಮದರ ಬಗೆಗಿನ ಹೇಳಿಕೆಯ ವಿರುದ್ಧ ಅನಧಿಕೃತವಾಗಿ ಆಂದೋಲನ ನಡೆಸಿ ಪ್ರಚೋದನಕಾರಿ ಭಾಷಣ ಮಾಡಿದ್ದರು.

ಈ ಹಿಂದೆ ಈ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಲಾಗಿತ್ತು. ಈಗ ನ್ಯಾಯಾಲಯವು ಮಸೂದ್‌ನನ್ನು ಬಂಧನದ ವಾರಂಟ್ ಹೊರಡಿಸಿದೆ.