ಅಂಬೇಡಕರನಗರ (ಉತ್ತರ ಪ್ರದೇಶ)ದ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳ ಮೂಲಕ ಹಾದುಹೋಗುವ ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮತ್ತು ಹರಿತವಾದ ಶಸ್ತ್ರಾಸ್ತ್ರಗಳಿಂದ ದಾಳಿ.

೨ ಹಿಂದೂಗಳಿಗೆ ಗಂಭೀರ ಗಾಯ

  • ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವಿರುವಾಗ, ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮತಾಂಧರಿಂದ ದಾಳಿಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ಇಲ್ಲಿ ಮತಾಂಧರ ಮೇಲೆ ಹಿಡಿತ ಸಾಧಿಸುವ ಅವಶ್ಯಕತೆಯಿದೆ. ಈ ದಾಳಿಗೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸಲು ಸರಕಾರವು ಪ್ರಯತ್ನಿಸಬೇಕು !
  • ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಏಕೆ ಆಕ್ರಮಣ ಮಾಡಲಾಗುತ್ತದೆ ಎಂಬ ಉತ್ತರವನ್ನು ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತವಾದಿಗಳು ಎಂದಿಗೂ ನೀಡುವುದಿಲ್ಲ ಮತ್ತು ಅಂತಹ ಆಕ್ರಮಣಕಾರರಿಗೆ ಸರ್ವಧರ್ಮಸಮಭಾವದ ತಿಳುವಳಿಕೆಯನ್ನೂ ಯಾರೂ ನೀಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಅಂಬೇಡಕರನಗರ (ಉತ್ತರ ಪ್ರದೇಶ) – ಇಲ್ಲಿ ನವೆಂಬರ್ ೧೫ ರಂದು ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪಂಹಿತಿಪುರ ಬಜಾರನಲ್ಲಿ ಶ್ರೀ ಲಕ್ಷ್ಮೀ ಮತ್ತು ಶ್ರೀ ಗಣಪತಿಯ ವಿಗ್ರಹಗಳ ವಿಸರ್ಜನೆಯ ಮೆರವಣಿಗೆಯ ಮೇಲೆ ಮಸೀದಿಯ ಮುಂದೆ ಡಿಜೆ ಹಾಕಲಾಗಿದೆ ಎಂದು ಹೇಳುತ್ತಾ ಮತಾಂಧರು ಕಲ್ಲುತೂರಾಟ ಮಾಡಿದರು. ಮನೆಗಳ ಛಾವಣಿಗಳಿಂದ ಕಲ್ಲುತೂರಾಟ ಮಾಡಲಾಯಿತು. ಅದೇರೀತಿ ಹಿಂದೂಗಳ ಮೇಲೆ ಕೋಲು ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಯಿತು. ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ೧೦ ರಿಂದ ೧೨ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜುಬೈರ್, ಶೆರು, ಶಹಜಾದೆ, ಶಾದಾನ ಖಾನ್, ಫಾಹೀಮ್, ಶಬ್ಬರ್, ಜೀಶಾನ ಖಾನ್ ಮತ್ತು ಇತರ ೮ ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಒಟ್ಟು ೧೧ ಜನರನ್ನು ಬಂಧಿಸಿದ್ದಾರೆ. ಪೊಲೀಸರು ಇಲ್ಲಿ ಬಿಗಿಬಂದೋಬಸ್ತು ಮಾಡಿದ್ದಾರೆ.