ಹಿಂದೂ ಧರ್ಮದಲ್ಲಿ ದೇವರು ಸೃಷ್ಟಿಸಿದ ವರ್ಣವ್ಯವಸ್ಥೆ ಇದೆ ವಿನಃ ಅದರಲ್ಲಿ ಯಾವುದೇ ಜಾತಿಗಳಿಲ್ಲ. ಜಾತಿಗಳನ್ನು ಮನುಷ್ಯ ನಿರ್ಮಿಸಿದ್ದಾನೆ. ಆದ್ದರಿಂದ ಈಶ್ವರೀ ರಾಜ್ಯದಲ್ಲಿ, ಅಂದರೆ ಹಿಂದೂ ರಾಷ್ಟ್ರದಲ್ಲಿ ಅಂತಹ ಜಾತಿ ತಾರತಮ್ಯವಿಲ್ಲದ ಕಾರಣ, ಯಾರಿಗೂ ಅನ್ಯಾಯವಾಗುವುದಿಲ್ಲ !
ಮೈಸೂರು – ಹಲ್ಲಾರೆ ಗ್ರಾಮದಲ್ಲಿರುವ ಮಲ್ಲಿಕಾರ್ಜುನ್ ಶೆಟ್ಟಿಯವರ ಕ್ಷೌರದಂಗಡಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಕೂದಲನ್ನು ಕತ್ತರಿಸಿದಕ್ಕೆ ಶೆಟ್ಟಿಯವರಿಗೆ ಗ್ರಾಮಸ್ಥರು ೫೦ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಅದೇರೀತಿ ಇದರಿಂದಾಗಿಯೇ ಕಳೆದ ಕೆಲವು ದಿನಗಳಿಂದ ಶೆಟ್ಟಿ ಹಾಗೂ ಅವರ ಕುಟುಂಬದವರ ಸಾಮಾಜಿಕ ಬಹಿಷ್ಕಾರ ಮಾಡಿದ್ದಾರೆ. ದಲಿತರ ಕೂದಲನ್ನು ಕತ್ತರಿಸಬೇಡಿ ಎಂದು ಶೆಟ್ಟಿಯವರಿಗೆ ಮೊದಲೇ ಹೇಳಲಾಗಿತ್ತು.
೧. ‘ನಾನು ಪೊಲೀಸರಿಗೆ ದೂರು ನೀಡುವ ಬಗ್ಗೆ ಹೇಳಿದಾಗ ಅವರು ನನ್ನನ್ನು ಥಳಿಸಿದರು ಮತ್ತು ನನ್ನಲ್ಲಿದ್ದ ೫ ಸಾವಿರ ರೂಪಾಯಿಗಳನ್ನು ಕಸಿದುಕೊಂಡರು’ ಎಂದು ಶೆಟ್ಟಿ ಹೇಳಿದರು.
೨. ಈ ಸಂದರ್ಭದಲ್ಲಿ, ಶೆಟ್ಟಿ ತಾವಾಗಿ ದೂರು ನೀಡಲು ಸಿದ್ಧರಿಲ್ಲ, ಆದ್ದರಿಂದ ಎರಡೂ ಕಡೆಯಿಂದ ಚರ್ಚೆ ನಡೆಸಿ ಉಪಾಯೋಜನೆ ತೆಗೆಯಲಾಗುವುದು ಎಂದು ಪೊಲೀಸರು ಹೇಳಿದರು.