ಓವೈಸಿಗೆ ರೋಹಿಂಗ್ಯಾಗಳು ಬೇಕು, ಅಭಿವೃದ್ಧಿ ಅಲ್ಲ ! – ಸಂಸದ ತೇಜಸ್ವಿ ಸೂರ್ಯ, ಅಧ್ಯಕ್ಷರು, ಬಿಜೆಪಿ ಯುವ ಮೋರ್ಚಾ

ರೋಹಿಂಗ್ಯಾ ಮುಸ್ಲಿಮರನ್ನು ಭಾರತಕ್ಕೆ ಕರೆತರಬೇಕೆಂದು ಎಂ.ಐ.ಎಂ.ನ ನಾಯಕ ಅಸದುದ್ದೀನ್ ಒವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಒವೈಸಿ ಒತ್ತಾಯಿಸುತ್ತಿದ್ದಾರೆ; ಆದರೆ ಅವರು ಎಂದಿಗೂ ಅಭಿವೃದ್ಧಿಯ ಭಾಷೆಯನ್ನು ಮಾತನಾಡುವುದಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಟೀಕಿಸಿದರು.

‘ಲವ್’ ಮತ್ತು ‘ಜಿಹಾದ್’ ಎರಡೂ ಒಟ್ಟಿಗೆ ಸೇರಿಸಲು ಸಾಧ್ಯವಿಲ್ಲ (ವಂತೆ) ! – ತೃಣಮೂಲ ಕಾಂಗ್ರೆಸ್‌ನ ಸಂಸದೆ ಮತ್ತು ನಟಿ ನುಸರತ್ ಜಹಾನ್

ಪ್ರೀತಿ ಅತ್ಯಂತ ವೈಯಕ್ತಿಕ ವಿಷಯವಾಗಿದೆ. ‘ಲವ್’ ಮತ್ತು ‘ಜಿಹಾದ್’ ಎರಡು ಒಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ಚುನಾವಣೆಯ ಮೊದಲು ಜನರು ಇಂತಹ ವಿಷಯಗಳೊಂದಿಗೆ ಬರುತ್ತಾರೆ. ನೀವು ಯಾರೊಂದಿಗೆ ಇರಬೇಕೆಂಬುದು ವೈಯಕ್ತಿಕ ಆಯ್ಕೆಯಾಗಿದೆ. ಪ್ರೀತಿ ಮಾಡಿ ಮತ್ತು ಪರಸ್ಪರ ಪ್ರೀತಿಸುತ್ತಲೇ ಇರಿ.

ಪಂಚತಾರಾ ಹೋಟೆಲ್‌ಗಳಿಂದ ಚುನಾವಣೆ ಸ್ಪರ್ಧಿಸಲು ಸಾಧ್ಯವಿಲ್ಲ ! – ಗುಲಾಮ್ ನಬಿ ಆಜಾದ್ ಅವರಿಂದ ಕಾಂಗ್ರೆಸ್ಸಿಗೆ ಕಪಾಳ ಮೋಕ್ಷ

ನಮ್ಮ ನಾಯಕರ ಮುಖ್ಯ ಸಮಸ್ಯೆ ಏನೆಂದರೆ, ಟಿಕೆಟ್ ಪಡೆದ ನಂತರ ಅವರು ಮೊದಲು ಪಂಚತಾರಾ ಹೋಟೆಲ್ ಕಾಯ್ದಿರಿಸುತ್ತಾರೆ. ಅಲ್ಲಿಯೂ ಸಹ ಅವರಿಗೆ ಡಿಲಕ್ಸ್ ಕೊಠಡಿ ಬೇಕಾಗಿರುತ್ತದೆ. ಹವಾನಿಯಂತ್ರಿತ ಚತುಷ್ಚಕ್ರ ವಾಹನಗಳಿಲ್ಲದೆ ಅವರು ಹೊರಬರುವುದಿಲ್ಲ.

ಕೇರಳ ಸರಕಾರದಿಂದ ಸಾಮಾಜಿಕ ಮಾಧ್ಯಮದಿಂದ ಅವಮಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾಯ್ದೆಯ ಕ್ರಮಕ್ಕೆ ತಡೆ

ಕೇರಳ ಸರಕಾರವು ಕೇರಳ ಪೊಲೀಸ್ ಕಾಯ್ದೆಯಲ್ಲಿ ಸೆಕ್ಷನ್ ೧೧೮ (ಅ) ಅನ್ನು ಸೇರಿಸುವ ಸುಗ್ರೀವಾಜ್ಞೆಯನ್ನು ಹಿಂಪಡೆಡಿದೆ. ‘ಸಧ್ಯ ಈ ಕಾನೂನು ಜಾರಿಗೆ ಬರುವುದಿಲ್ಲ’ ಎಂದು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದಾರೆ. ಈ ಕಾನೂನಿನ ಕುರಿತು ಬಂದ ಅನೇಕ ಸಲಹೆಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೇರಳದ ಚರ್ಚ್‌ನಲ್ಲಿ ಮುಸ್ಲಿಂ ಯುವಕ ಮತ್ತು ಕ್ರಿಶ್ಚಿಯನ್ ಯುವತಿಯ ವಿವಾಹ ಮಾಡಿಸಿದ್ದರಿಂದ ಗಲಾಟೆ

ಸ್ಥಳೀಯ ಸಾಯರೋ ಮಲಬಾರ್ ಚರ್ಚ್‌ನ ಕದವಂಥರಾ ಸೇಂಟ್ ಜೋಸೆಫ್ ಚರ್ಚ್‌ನಲ್ಲಿ ನವೆಂಬರ್ ೯ ರಂದು ಮುಸ್ಲಿಂ ಯುವಕ ಮತ್ತು ಕ್ರಿಶ್ಚಿಯನ್ ಯುವತಿಯ ವಿವಾಹವಾಗಿತ್ತು. ಈ ವಿವಾಹದ ಛಾಯಾಚಿತ್ರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಇದರಿಂದ ನಡೆದ ವಿವಾದದಿಂದ ಮದುವೆಯನ್ನು ಮಾಡಿಸಿದ ಮಾರ್ ಮ್ಯಾಥ್ಯೂ ವಾನಿಕಿಜಿಕ್ಕಲ್ ಮತ್ತು ಹಾಜರಿದ್ದ ಮತ್ತೊಬ್ಬ ಪಾದ್ರಿಯು ಕ್ಷಮೆಯಾಚಿಸಿರುವ ಘಟನೆ ನಡೆದಿದೆ.

ದೆಹಲಿಯಲ್ಲಿ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ ಹಾಗೂ ಮಗನಿಗೆ ಗಾಯ !

ಬಿಜೆಪಿ ಮುಖಂಡ ಮತ್ತು ಮಾಹಿತಿ ಅಧಿಕಾರದ ಕಾರ್ಯಕರ್ತ ಜುಲ್ಫಿಕರ ಕುರೈಷಿಯನ್ನು ಇಲ್ಲಿನ ಸುಂದರನಗರ ಪ್ರದೇಶದ ಮಸೀದಿಯ ಹೊರಗೆ ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರು ಬೆಳಿಗ್ಗೆ ನಮಾಜಗಾಗಿ ಹೋಗುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ.

ಬಹು ಕೋಟಿ ಹಗರಣದ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ರೋಶನ್ ಬೇಗ್ ಬಂಧನ

ಬೆಂಗಳೂರಿನಲ್ಲಿ ‘ಐ-ಮೋನೆಟರಿ ಅಡ್ವೈಜರಿ’ಯ (ಐ.ಎಂ.ಎ.ಯ) ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಾಂಗ್ರೆಸ್ ಮಾಜಿ ಸಚಿವ ರೋಶನ್ ಬೇಗ್ ಅವರನ್ನು ಬಂಧಿಸಿದೆ. ಅವರನ್ನು ಸಿಬಿಐ ಕಚೇರಿಗೆ ಕರೆಸಲಾಗಿತ್ತು. ನಂತರ ದೃಢವಾದ ಸಾಕ್ಷ್ಯಗಳ ಆಧಾರದ ಮೇಲೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

ತುರ್ಕಿಸ್ತಾನದ ಕಟ್ಟರ ಸಂಘಟನೆಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಂಟು – ಸ್ವೀಡನ್‌ನ ಸಂಶೋಧನಾ ಸಂಸ್ಥೆಯಿಂದ ಮಾಹಿತಿ

ಸ್ವೀಡನ್‌ನ ಸಂಶೋಧನಾ ಸಂಸ್ಥೆ ‘ನಾರ್ಡಿಕ್ ಮಾನಿಟರ್ವು ತುರ್ಕಸ್ತಾನದ ಕಟ್ಟರ ಸಂಘಟನೆಯಾದ ಐ.ಎಚ್.ಎಚ್. (ಇಂಸಾನಿ ಯಾರ್ದಿಮ್ ವಕ್ಫಿ ಅಂದರೆ ಮಾನವತಾವಾದಿ ಸಹಾಯ ಸಂಸ್ಥೆ) ಹಾಗೂ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ  ಇವುಗಳಲ್ಲಿ ಪರಸ್ಪರ ನಂಟಿದೆ ಎಂದು ಆರೋಪಿಸಿದೆ.

ಕರ್ನಾಟಕ ಸರಕಾರ ಆನ್‌ಲೈನ್ ಆಟಗಳ ಮೇಲೆ ನಿಷೇಧ ಹೇರಲಿದೆ

ರಾಜ್ಯವು ಶೀಘ್ರದಲ್ಲೇ ಅಂತರ್ಜಾಲದಲ್ಲಿ ಆನ್‌ಲೈನ್ ಆಟಗಳನ್ನು ನಿಷೇಧಿಸಲಿದೆ ಎಂದು ಕರ್ನಾಟಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸರಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ ದಿನೇಶ ಗುಂಡುರಾವ್ ಸ್ವಾಗತಿಸಿದ್ದಾರೆ.

ಖಾನಾಪುರದ ಒಂದು ವೃತ್ತಕ್ಕೆ ‘ಟಿಪ್ಪು ಸುಲ್ತಾನ್ ವೃತ್ತ’ ಎಂದು ನಾಮರಣ ಮಾಡಿರುವುದನ್ನು ಬದಲಾಯಿಸಿ ! – ಹಿಂದುತ್ವನಿಷ್ಠ ಸಂಘಟನೆಯಿಂದ ಕಾಮಗಾರಿ ಇಲಾಖೆಗೆ ಮನವಿ

ಖಾನಾಪುರ ನಗರದ ಒಂದು ವೃತ್ತಕ್ಕೆ ‘ಟಿಪ್ಪು ಸುಲ್ತಾನ್ ವೃತ್ತ’ ಎಂದು ಮರುನಾಮಕರಣ ಮಾಡಲಾಗಿದೆ. ಈ ಹೆಸರನ್ನು ಬಿಜೆಪಿ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸಿವೆ. ಕರ್ನಾಟಕ ಸರಕಾರವು ಟಿಪ್ಪು ಸುಲ್ತಾನದ ಜಯಂತಿಯನ್ನು ರದ್ದುಗೊಳಿಸಿದ್ದು ಆತನಿಗೆ ಸಂಬಂಧಿಸಿದ ಇತಿಹಾಸವನ್ನು ಸಹ ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆ.