ಭಾಗ್ಯನಗರ (ತೆಲಂಗಾಣಾ) – ಧೈರ್ಯವಿದ್ದರೆ, ಚೀನಾ ಸೈನ್ಯದ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ಮಾಡಿ ತೋರಿಸಲಿ. ಭಾರತದ ಭೂಪ್ರದೇಶವನ್ನು ಚೀನಾ ಸ್ವಾಧೀನಪಡಿಸಿಕೊಂಡಿರುವ ಲಡಾಖ್‌ನಲ್ಲಿ ಅಂತಹ ಧೈರ್ಯವನ್ನು ಬಿಜೆಪಿ ಏಕೆ ತೋರಿಸುತ್ತಿಲ್ಲ ಎಂದು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಒವೈಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಇಲ್ಲಿ ನಡೆದ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
(ಸೌಜನ್ಯ : Hindustan Times)
ನರೇಂದ್ರ ಮೋದಿ ಅವರು ಸರ್ಜಿಕಲ್ ಸ್ರೈಕ್ ನಡೆಸಿರಿ ನೀವು ಚೀನಾ ಬಗ್ಗೆ ಏಕೆ ಮೌನ ವಹಿಸಿದ್ದೀರಿ ? ನೀವು ಈ ದೇಶದ ಪ್ರಧಾನ ಮಂತ್ರಿ, ಆದರೆ ಚೀನಾ ಹೆಸರನ್ನು ತೆಗೆಯಲು ಕೂಡ ನೀವು ಭಯಪಡುತ್ತೀರಿ. ನೀವು ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ, ನಾವು ಕೂಡ ನಿಮ್ಮನ್ನು ಪ್ರಶಂಸಿಸುತ್ತೇವೆ. ಸರ್ಜಿಕಲ್ ಸ್ರೈಕ್ ಮಾಡಿ ಚೀನಾದ ಸೈನ್ಯದಿಂದ ಪಲಾಯನಗೈಯ್ಯುವಂತೆ ಮಾಡಿ. ನಮ್ಮ ಸೈನಿಕರು ಹುತಾತ್ಮರಾದ ಸ್ಥಳದಲ್ಲಿ ನೀವು ಧೈರ್ಯವನ್ನು ತೋರಿಸುವುದಿಲ್ಲ. ಭಾರತೀಯ ಭೂಮಿಯನ್ನು ಪುನಃ ಸ್ವಾಧೀನಪಡಿಸಿಕೊಳ್ಳುವುದಿಲ್ಲ; ಆದರೆ ಬಿಜೆಪಿ ಮುಖಂಡರೊಬ್ಬರು ‘ನಾವು ಹಳೆಯ ಭಾಗ್ಯನಗರದ ಮೇಲೆ ಸರ್ಜಿಕಲ್ ಸ್ರೈಕ್ ನಡೆಸುತ್ತೇವೆ’ ಎಂದು ಹೇಳುತ್ತಾರೆ. ನೀವು ಯಾವ ಸರ್ಜಿಕಲ್ ಸ್ರೈಕ್ ನಡೆಸುತ್ತೀರಿ ? ನಗರಕ್ಕಾಗಿ ನೀವು ಏನು ಮಾಡಿದ್ದೀರಿ ? ಎಂದು ಓವೈಸಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.