ಇಂತಹ ಶಬ್ದ ಮಾಲಿನ್ಯ ಮಾಡುವವರ ವಿರುದ್ಧ ಸರಕಾರ ಸ್ವತಃ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ !
ಬೆಂಗಳೂರು : ಮಲ್ಲೇಶ್ವರಂ ಪ್ರದೇಶದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಜಿ.ಎಂ. ನಟರಾಜ ಇವರು ಮಾಡಿದ ಪ್ರಯತ್ನ ಗಳಿಂದ ಇಲ್ಲಿನ ಎರಡು ಮಸೀದಿಗಳಿಂದಾಗುತ್ತಿದ್ದ ಶಬ್ದ ಮಾಲಿನ್ಯ ತಡೆಗಟ್ಟುವಲ್ಲಿ ಯಶಸ್ಸು ಲಭಿಸಿದೆ.
೧. ನ್ಯಾಯವಾದಿ ನಟರಾಜ ಹಾಗೂ ಅನೇಕ ವಕೀಲರ ಕಚೇರಿಗಳು ಮಲ್ಲೇಶ್ವರಂನಲ್ಲಿದೆ. ಅಲ್ಲಿಂದ ೧ ಕಿ.ಮೀ ದೂರದಲ್ಲಿ ೨ ಮಸೀದಿಗಳಿವೆ. ಈ ಮಸೀದಿಯಲ್ಲಿ ಧ್ವನಿವರ್ಧಕದಿಂದ ಬೆಳಗ್ಗೆ ೫.೩೦ ರಿಂದ ರಾತ್ರಿ ೮.೩೦ ರ ವರೆಗೆ ೫ ಸಲ ಆಜಾನ್ ನೀಡಲಾಗುತ್ತಿದ್ದು ಶಬ್ದ ಮಾಲಿನ್ಯ ಆಗುತ್ತಿತ್ತು.
೨. ಧ್ವನಿವರ್ಧಕಗಳಿಂದ ಬರುವ ಶಬ್ದದಿಂದ ವೃದ್ಧ ನಾಗರಿಕರಿಗೆ ಮತ್ತು ವಿವಿಧ ಕಾಯಿಲೆ ಗಳಿಂದ ಬಳಲುತ್ತಿರುವ ರೋಗಿಗಳಿಗೆ ನಿರಂತರ ಮಾನಸಿಕ ತೊಂದರೆಯಾಗುತ್ತಿತ್ತು. ಈ ಶಬ್ದದಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗು ತ್ತಿತ್ತು ಒಂದು ಸರಕಾರಿ ಪ್ರಾಥಮಿಕ ಶಾಲೆ ಮತ್ತು ಕೆ.ಸಿ. ಜನರಲ್ ಆಸ್ಪತ್ರೆಯು ಮಸೀದಿಗಳಿಗೆ ಹತ್ತಿರದಲ್ಲಿದೆ ಮತ್ತು ಮಸೀದಿಗಳಿಂದ ಬರುವ ಶಬ್ದವು ನೂರಾರು ವಿದ್ಯಾರ್ಥಿ ಗಳು ಮತ್ತು ರೋಗಿಗಳ ಮೇಲೆ ಪರಿಣಾಮ ಬೀರುತ್ತಿತ್ತು.
೩. ಈ ಮಸೀದಿಗಳಿಗೆ ಪ್ರತಿದಿನ ಧ್ವನಿವರ್ಧಕ ಗಳನ್ನು ಬಳಸಲು ಅನುಮತಿ ನೀಡಲಾಗಿದೆಯೇ ಎಂದು ತಿಳಿದುಕೊಳ್ಳಲು ನ್ಯಾಯವಾದಿ ಜಿ.ಎಂ. ನಟರಾಜ ಇವರು ಮಾಹಿತಿ ಹಕ್ಕು ಕಾಯ್ದೆಯಡಿ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದ್ದರು.
೪. ೨ ಅಕ್ಟೋಬರ್ ೨೦೨೦ ರಂದು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ ಮತ್ತು ಮಸೀದಿಗಳಿಂದ ಉಂಟಾಗುವ ಶಬ್ದ ಮಾಲಿನ್ಯದ ಬಗ್ಗೆ ಜನರಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದರು. ಅದಕ್ಕಾಗಿ. ಜಿ.ಎಂ. ನಟರಾಜ ಇವರು ಧ್ವನಿವರ್ಧಕದ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರನ್ನು ನೀಡಲು ಅನೇಕ ಹಿಂದೂ ಕಾರ್ಯಕರ್ತರನ್ನು ಸಂಪರ್ಕ ಮಾಡಿದ್ದರು.
೫. ಕೆಲವು ದಿನಗಳ ನಂತರ ಮಸೀದಿಯಲ್ಲಿ ಧ್ವನಿವರ್ಧಕಗಳು ಬಂದ್ ಆಗಿರುವುದು ಕಂಡು ಬಂದಿತು. ಮಾಹಿತಿ ಹಕ್ಕು ಕಾಯ್ದೆಯಡಿ ಮಾಡಿದ ಅರ್ಜಿಯ ಆಧಾರದಲ್ಲಿ ಪೊಲೀಸರು ಸಕ್ರಿಯರಾಗಿ ಧ್ವನಿವರ್ಧಕಗಳನ್ನು ನಿಲ್ಲಿಸಿದರು, ಎಂಬುದು ಗಮನಕ್ಕೆ ಬಂದಿತು.
ಮಸೀದಿಗಳಿಂದ ಉಂಟಾಗುವ ಶಬ್ದ ಮಾಲಿನ್ಯದ ವಿರುದ್ಧ ದೂರು ನೀಡಲು ಭಯಪಡುವ ಹಿಂದೂಗಳು !ನ್ಯಾಯವಾದಿ ಜಿ.ಎಂ. ನಟರಾಜರು ‘ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ರ ಕಲಮ್ ೩೭ ಮತ್ತು ೧೦೯ ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ದೂರು ನೀಡಲು ನಿರ್ಧರಿಸಿದ್ದರು. ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಿದ್ಧರಾಗಿದ್ದರು. ಆ ಸಂದರ್ಭದಲ್ಲಿ ಅವರು ಅನೇಕ ಸ್ಥಳೀಯ ನಿವಾಸಿಗಳು ಮತ್ತು ಹಿಂದೂ ಸಂಘಟನೆಗಳ ಬಳಿಯೂ ಸಹಾಯ |