ಹಿಂದೂ ಜನಜಾಗೃತಿ ಸಮಿತಿಯ ಪ್ರಬೋಧನೆ, ಶ್ರೀ ಹನುಮಂತನ ವಿಡಂಬನೆಗೆ ತಡೆ

ಸ್ಥಳೀಯ ಎಸ್.ಆರ್.ಜೆ. ಎಂಬ ಹೆಸರಿನ ಖಾಸಗಿ ಸಂಸ್ಥೆಯು ಉಪ್ಪಿನ ಪೊಟ್ಟಣದ ಮೇಲೆ ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುತ್ತಿತ್ತು. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿದಾಗ ‘ಇದರಿಂದ ದೇವತೆಗಳ ಅವಮಾನ ಹೇಗಾಗುತ್ತಿದೆ?’, ಎಂಬುವುದರ ಬಗ್ಗೆ ಪ್ರಬೋಧನೆ ಮಾಡಿದ ನಂತರ ಅವರು ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುವುದನ್ನು ನಿಲ್ಲಿಸಲು ಒಪ್ಪಿದರು.

ಪಾಕಿಸ್ತಾಮದಲ್ಲಿ ಅಲ್ಪಸಂಖ್ಯಾರ ಮೇಲಿನ ಅತ್ಯಾಚಾರದ ಬಗ್ಗೆ ಮಾಹಿತಿಯನ್ನು ನೀಡುವ ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತ ರಾಹತ ಆಸ್ಟಿನ್ ಇವರ ಮೇಲೆ ಮಾರಣಾಂತಿಕ ಹಲ್ಲೆ

ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿರುವ ವಕೀಲರಾದ ರಹತ್ ಆಸ್ಟಿನ್ ಅವರ ಮೇಲೆ ಮತಾಂಧರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಒಡಿಶಾದ ದೇವಾಲಯಗಳಲ್ಲಿ ಅಜ್ಞಾತರಿಂದ ದೇವತೆಗಳ ವಿಗ್ರಹಗಳ ಧ್ವಂಸ !

ಒಡಿಶಾ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ರಾಯಗಡ ಜಿಲ್ಲೆಯ ಹುಕುಮಾಟೊಲಾ ಗ್ರಾಮದಲ್ಲಿರುವ ಭಗವಾನ ರಾಮೇಶ್ವರ ಮಹಾದೇವ ದೇವಸ್ಥಾನದಲ್ಲಿ ಅಪರಿಚಿತ ವ್ಯಕ್ತಿಗಳು ಶ್ರೀ ಸರಸ್ವತಿ ದೇವಿ, ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ವೃಂದಾವತಿ ದೇವಿ ವಿಗ್ರಹಗಳನ್ನು ಭಗ್ನಗೊಳಿಸಿದ್ದಾರೆ.

ಕೇರಳದಲ್ಲಿ ಭಯೋತ್ಪಾದಕ ತರಬೇತಿ ಕೇಂದ್ರವನ್ನು ನಡೆಸಲು ಪಿ.ಎಫ್.ಐ. ಹಣ ಸಂಗ್ರಹಿಸಿತ್ತು ! – ಈಡಿ ಆರೋಪ

ಕೇರಳದ ಕಣ್ಣೂರು ಜಿಲ್ಲೆಯ ಭಯೋತ್ಪಾದಕ ತರಬೇತಿ ಕೇಂದ್ರಕ್ಕೆ ಹಣಕಾಸು ಒದಗಿಸುವಲ್ಲಿ ಪಾಪ್ಯುಲರ್ ಫ್ರಂಟ್ ಭಾಗಿಯಾಗಿದೆ ಎಂದು ಅದರ ವಿರುದ್ಧದ ಹಣಕಾಸು ದುರುಪಯೋಗದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಈಡಿ) ಹೇಳಿದೆ.

ನಾವೂ ಕೇರಳ ಮುಖ್ಯಮಂತ್ರಿಯ ಗುಲಾಮರಲ್ಲ ! – ಕೇರಳದ ಆರ್ಥೊಡಾಕ್ಸ್ ಚರ್ಚ್‌ನ ಎಚ್ಚರಿಕೆ

ನಾವು ಕೇರಳ ಮುಖ್ಯಮಂತ್ರಿಯ ಗುಲಾಮರಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚರ್ಚ್‌ನೊಂದಿಗಿನ ವ್ಯವಹಾರದಲ್ಲಿ ಸಭ್ಯರಾಗಿರಬೇಕು ಎಂದು ರಾಜ್ಯದ ಆರ್ಥೊಡಾಕ್ಸ್ ಚರ್ಚ್ ಎಚ್ಚರಿಕೆ ನೀಡಿದೆ. ಆರ್ಥೊಡಾಕ್ಸ್ ಚರ್ಚ್ ಮತ್ತು ಜಾಕೋಬೈಟ್ ಚರ್ಚ್ ನಡುವಿನ ವಿವಾದದ ಬಗ್ಗೆ ಮುಖ್ಯಮಂತ್ರಿ ವಿಜಯನ್ ಒಬ್ಬ ಪಾದ್ರಿಯನ್ನು ಕೇಳಿದ್ದರು.

ತಾಜ್‌ಮಹಲ್‌ನಲ್ಲಿ ಕೇಸರಿ ಧ್ವಜವನ್ನು ಹಾರಿಸುತ್ತಾ ‘ಜೈ ಶ್ರೀರಾಮ’ ಘೋಷಣೆ ಕೂಗಿದ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು

ಇಲ್ಲಿನ ಪ್ರಸಿದ್ಧ ತಾಜಮಹಲ್ ಪ್ರದೇಶದಲ್ಲಿ ಹಿಂದೂ ಯುವಾ ವಾಹಿನಿಯ ಕಾರ್ಯಕರ್ತರು ಶಿವ ಚಾಲಿಸಾ ಪಠಿಸುತ್ತಾ ಕೇಸರಿ ಧ್ವಜವನ್ನು ಹಾರಿಸಿದರು. ಇಲ್ಲಿ ಕಟ್ಟೆಯ ಮೇಲೆ ಕುಳಿತು ತಮ್ಮ ಜೇಬಿನಿಂದ ಕೇಸರಿ ಧ್ವಜವನ್ನು ತೆಗೆದು ಅದನ್ನು ಹಾರಿಸಿ, ‘ಜೈ ಶ್ರೀರಾಮ’ನ ಘೋಷಣೆಯನ್ನೂ ಕೂಗಿದರು.

ಕಾಂಗ್ರೆಸ್ ಕೊಟ್ಟ ಚಿತ್ರಹಿಂಸೆಗಳಿಂದ ನಾನು ಇನ್ನೂ ಹೊರಬಂದಿಲ್ಲ ! – ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ನನ್ನ ಆರೋಗ್ಯ ಸರಿ ಇರುವುದಿಲ್ಲ; ಆದರೆ ನ್ಯಾಯಾಲಯವು ನನ್ನನ್ನು ಕರೆಸಿದಾಗಲೆಲ್ಲಾ ನಾನು ಹಾಜರಾಗುತ್ತೇನೆ. ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್ ನನಗೆ ನೀಡಿದ ಯಾತನೆಯ ಬಗ್ಗೆ ನನಗೆ ನ್ಯಾಯ ಬೇಕಿದೆ. ಕಾಂಗ್ರೆಸ್ ನೀಡಿದ ಚಿತ್ರಹಿಂಸೆಗಳಿಂದ ನಾನು ಇನ್ನೂ ಹೊರಬಂದಿಲ್ಲ ಎಂದು ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ.

ಕೇರಳದಲ್ಲಿ ಅಪ್ರಾಪ್ತ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಮತಾಂಧರ ಬಂಧನ

ಕೇರಳದಲ್ಲಿ ಅಪ್ರಾಪ್ತ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೮ ವರ್ಷದ ಮೊಹಮ್ಮದ್ ನೌಫಲ್ ಮತ್ತು ೧೯ ವರ್ಷದ ಕನಿಂಪತ್ತ ಶಮೀಮ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಹುಡುಗಿಯರೊಂದಿಗೆ ಪರಿಚಯವಾಗಿ ಅವರೊಂದಿಗೆ ಸ್ನೇಹ ಬೆಳೆಸಿದ್ದರು.

೨೦೨೦ ರಲ್ಲಿ ಬಾಂಗ್ಲಾದೇಶದಲ್ಲಿ ೧೪೯ ಹಿಂದೂಗಳ ಹತ್ಯೆ ಹಾಗೂ ೨೬೨೩ ಹಿಂದೂಗಳು ಮತಾಂತರ

೨೦೨೦ ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿವಿಧ ಘಟನೆಗಳಲ್ಲಿ ಒಟ್ಟು ೧೪೯ ಹಿಂದೂಗಳ ಹತ್ಯೆ ಮಾಡಲಾಗಿದ್ದರೆ, ೭೦೩೬ ಹಿಂದೂಗಳು ಗಾಯಗೊಂಡಿದ್ದಾರೆ. ಅಲ್ಲದೆ ೨ ಸಾವಿರ ೬೨೩ ಹಿಂದೂಗಳನ್ನು ಮತಾಂತರಗೊಳಿಸಿ ಅವರನ್ನು ಮುಸಲ್ಮಾನರನ್ನಾಗಿಸಲಾಯಿತು. ‘ಜಟಿಯಾ ಹಿಂದೂ ಮಹಾಜೋತ’ ಎಂಬ ಸಂಘಟನೆಯು ಪತ್ರಿಕಾಗೋಷ್ಠಿಯಲ್ಲಿ ಈ ಅಂಕಿ ಅಂಶಗಳನ್ನು ಬೆಳಕಿಗೆ ತಂದಿದೆ.

ದೆಹಲಿಯ ಹನುಮಾನ್ ದೇವಾಲಯವನ್ನು ಕಾನೂನುಬಾಹಿರವೆಂದು ಘೋಷಿಸಿ ನೆಲಸಮ ಮಾಡಿದ ಆಡಳಿತ !

ಸ್ಥಳೀಯ ಚಾಂದನಿ ಚೌಕ್‌ನಲ್ಲಿರುವ ಹನುಮಾನ್ ದೇವಸ್ಥಾನವನ್ನು ದೆಹಲಿ ಸರಕಾರದ ಆಡಳಿತವರ್ಗವು ಕಾನೂನು ಬಾಹಿರವೆಂದು ಹೇಳಿ ನೆಲಸಮ ಮಾಡಿದೆ. ಇದನ್ನು ವಿಶ್ವ ಹಿಂದೂ ಪರಿಷತ್ತು ವಿರೋಧಿಸಿದೆ. ವಿ.ಹಿಂ.ಪ.ನ ವಕ್ತಾರರಾದ ವಿನೋದ ಬಂಸಲ ಇವರು, ‘ಈ ಅತ್ಯಂತ ಅವಮಾನಕರ ಘಟನೆ ಔರಂಗಜೇಬ್ ಆಡಳಿತವನ್ನು ನೆನಪಿಸಿತು.