|

ಆಗ್ರಾ (ಉತ್ತರ ಪ್ರದೇಶ) – ಇಲ್ಲಿ 10ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಶಿಕ್ಷಕಿ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿ ಆಕೆಗೆ ದೈಹಿಕ ಸಂಬಂಧ ಇಡುವಂತೆ ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಆ ವಿದ್ಯಾರ್ಥಿಯೊಂದಿಗೆ 3 ಜನರನ್ನು ಬಂಧಿಸಿದ್ದಾರೆ.
ಈ ಶಿಕ್ಷಕಿ ಒಂದು ಶಾಲೆಯಲ್ಲಿ ಪಾಠ ಮಾಡುವುದರ ಜೊತೆ ಟ್ಯೂಶನ್ ಸಹ ನಡೆಸುತ್ತಾರೆ. ಆರೋಪಿ ವಿದ್ಯಾರ್ಥಿಯ ಶಿಕ್ಷಕಿಯ ಮನೆಗೆ ಟ್ಯೂಶನ್‌ಗಾಗಿ ಹೋಗುತ್ತಿದ್ದನು. ಅವನು ಶಿಕ್ಷಕಿ ಸ್ನಾನಕ್ಕೆ ಹೋಗಿದ್ದಾಗ ಅಡಗಿ ಶಿಕ್ಷಕಿಯ ವಿಡಿಯೋ ಮಾಡಿ ಶಿಕ್ಷಕಿಗೆ ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಿದಾಗ ಆಕೆ ಸಂಬಂಧವನ್ನು ನಿರಾಕರಿಸಿದಳು. ಆಗ ಅವನು ಈ ವಿಡಿಯೋವನ್ನು ತನ್ನ 3 ಸ್ನೇಹಿತರಿಗೆ ಕಳುಹಿಸಿದ್ದಾನೆ. ಈ ನಾಲ್ವರು ಮತ್ತೆ ಶಿಕ್ಷಕಿರ ಮೇಲೆ ಒತ್ತಡ ಹೇರಿದರು. ಶಿಕ್ಷಕಿಯು ನಿರಾಕರಿಸಿದಾಗ, ಅವರು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊವನ್ನು ಅಪ್ಲೋಡ್ ಮಾಡಿದರು. ತದನಂತರ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದನಂತರ ಪೊಲೀಸರು ಮೂವರನ್ನು ಬಂಧಿಸಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ.
ಸಂಪಾದಕೀಯ ನಿಲುವುಮಕ್ಕಳಿಗೆ ಯೋಗ್ಯ ಸಂಸ್ಕಾರ ಕಲಿಸದಿರುವುದು, ಸಾಧನೆ ಕಲಿಸದಿರುವುದು ಮತ್ತು ಸಮಾಜದಲ್ಲಿನ ವಾತಾವರಣದ ಕಾರಣದಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಇಲ್ಲಿಯವರೆಗಿನ ಆಡಳಿತಗಾರರೇ ಹೊಣೆಗಾರರಾಗಿದ್ದಾರೆ ! |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram