ತಿರುಪತಿ ಲಡ್ಡುವಿನ ಗುಣಮಟ್ಟದಲ್ಲಿ ಸುಧಾರಣೆ ! – ಆಂಧ್ರಪ್ರದೇಶ ಮುಖ್ಯಮಂತ್ರಿ ನಾಯ್ಡು

ತಿರುಪತಿ (ಆಂಧ್ರಪ್ರದೇಶ) – ವೆಂಕಟೇಶ ಬಾಲಾಜಿ ದೇವಸ್ಥಾನದಲ್ಲಿ ‘ಲಡ್ಡು ಪ್ರಸಾದ’ದ ಗುಣಮಟ್ಟ ಹೆಚ್ಚಿದ್ದು, ಅನೇಕ ಭಕ್ತರು ಸಂತಸ ಮತ್ತು ಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದರು. ತಿರುಮಲದಲ್ಲಿ ‘ತಿರುಮಲ ತಿರುಪತಿ ದೇವಸ್ಥಾನಂ’ (‘ಟಿಟಿಡಿ’ಯಿಂದ) ಸ್ಥಾಪಿಸಿದ ಮಧ್ಯವತೀ ಪಾಕಶಾಲೆಯನ್ನು ‘ವಕುಲಮಠ’ವನ್ನು ಮುಖ್ಯಮಂತ್ರಿ ನಾಯ್ಡು ಅವರು ಉದ್ಘಾಟಿಸಿದರು. ಈ ವೇಳೆ ಅವರು ಮೇಲಿನ ಹೇಳಿಕೆ ನೀಡಿದರು.

ನಾಯ್ಡು ಹೇಳಿದ್ದು…,

1. ಪ್ರಸಾದದ ಲಡ್ಡು ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯ ಸ್ಥಾಪಿಸುವುದರ ಜೊತೆಗೆ ಅಗತ್ಯ ಬಿದ್ದರೆ ‘ಐಐಟಿ’ಗಳ ಸಲಹೆಯನ್ನೂ ಪಡೆಯಲಾಗುವುದು.

2. ಈ ಹಿಂದೆ ‘ವೈ.ಎಸ್.ಆರ್. ಕಾಂಗ್ರೆಸ್’ ಆಡಳಿತದಲ್ಲಿ ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗುತ್ತಿತ್ತು.

3. ಲಡ್ಡುವಿನ ಗುಣಮಟ್ಟದ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ ಹಲವು ಘಟನೆಗಳು ಹಿಂದಿನ ಸರಕಾರದ ಅವಧಿಯಲ್ಲಿ ನಡೆದಿವೆ; ಆದರೆ ಅದರತ್ತ ಕಡೆಗಣಿಸಲಾಗಿತ್ತು.

4. ಇತ್ತೀಚೆಗೆ ದೇವಸ್ಥಾನದ ನಿರ್ವಾಹಕ ‘ಟಿಟಿಡಿ’ಯ ಹಿರಿಯ ಅಧಿಕಾರಿಗಳೊಂದಿಗೆ ಇತ್ತಿಚೆಗೆ ಪರಿಶೀಲನಾ ಸಭೆ ನಡೆಸಿದ್ದೆ. ಪ್ರಸಾದ ತಯಾರಿಕೆಯಲ್ಲಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಮಾತ್ರ ಬಳಸುವಂತೆ ನಾನೇ ನೋಡಿಕೊಂಡೆವು.

5. ನಮ್ಮ ಸರಕಾರ ಯಾವುದೇ ಕಲಬೆರಕೆಯನ್ನು ಸಹಿಸುವುದಿಲ್ಲ.

6. ಭಗವಾನ್ ಬಾಲಾಜಿಯ ಪಾವಿತ್ರ್ಯತೆ ಮತ್ತು ಪಾವಿತ್ರ್ಯತೆಯ ರಕ್ಷಣೆಗಾಗಿ ‘ಟಿಟಿಡಿ’ ಮತ್ತು ಸರಕಾರ ಇಲ್ಲಿದೆ. ಇದು ನಮ್ಮ ಬದ್ಧತೆ. ನಮ್ಮ ಕೈಲಾದಷ್ಟು ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ.

ಸಂಪಾದಕೀಯ ನಿಲುವು

ಸರಕಾರ ಈಗಲಾದರೂ ಪ್ರಸಾದ ಲಡ್ಡುಗಳ ಕಲಬೆರಕೆಗೆ ಕಾರಣರಾದವರನ್ನು ವಜಾಗೊಳಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!