ವಿವಾದಾತ್ಮಕ ಹೇಳಿಕೆ ನೀಡಿದ ಹಿಂದೂ ದ್ವೇಷಿ ಝಾಕಿರ್ ನಾಯಿಕ್
ನವದೆಹಲಿ – ಹಿಂದುದ್ವೇಷಿ ಇಸ್ಲಾಮಿಕ್ ಬೋಧಕ ಜಾಕಿರ್ ನಾಯಿಕ್ ಪ್ರಸ್ತುತ ಪಾಕಿಸ್ತಾನದಲ್ಲಿ ಭಾಷಣ ಮಾಡುತ್ತಿದ್ದಾನೆ. ಶುಕ್ರವಾರದ ನಮಾಜ್ ನಂತರ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ‘ಶಾಂತಿಗಾಗಿ ಎಲ್ಲರೂ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಈ ವೇಳೆ ಪಾಕಿಸ್ತಾನಿ ಹಿಂದೂ ಪ್ರೊಫೆಸರ್ ಮನೋಜ್ ಚೌಹಾಣ್ ಅವರು ಝಾಕಿರ್ ನಾಯಕ್ ಅವರಿಗೆ ಜಗತ್ತಿನಲ್ಲಿ ಶಾಂತಿ ಕಾಪಾಡುವ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸುತ್ತಿರುವಾಗ ಆತ, ಶಾಂತಿ ಮತ್ತು ಸಮೃದ್ಧಿಗೆ ಒಂದೇ ಒಂದು ಮಾರ್ಗವಿದೆ ಮತ್ತು ಅದು ಇಸ್ಲಾಂ ಎಂದು ಉತ್ತರಿಸಿದ. ಜಾಕಿರ್ ನಾಯಿಕ್ ಪ್ರೊ. ಮನೋಜ ಚೌಹಾಣ್ ಅವರ ಪ್ರಶ್ನೆ ಚೆನ್ನಾಗಿದೆ ಎಂದು ಹೇಳಿ ಉತ್ತರ ಸರಳವಾಗಿದ್ದು ಕುರಾನ್ ನಲ್ಲಿ ಬರೆಯಲಾಗಿದೆ’ ಎಂದ. ಪ್ರೊ. ಚೌಹಾಣ್ ಮತ್ತು ಜಾಕಿರ್ ನಾಯಿಕ್ ನಡುವಿನ ಈ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರೊ. ಚೌಹಾಣ ಪಾಕಿಸ್ತಾನದ ಜನರನ್ನು ಉದ್ದೇಶಿಸಿ ಮಾತನಾಡುವಾಗ, ಶ್ರೀಮದ್ ಭಗವದ್ಗೀತೆಯ ಒಂದು ಶ್ಲೋಕವನ್ನು ಉಲ್ಲೇಖಿಸಿ ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಆಶ್ರಯಿಸುವ ಬದಲು ಜನರು ತಮ್ಮ ಕರ್ತವ್ಯವನ್ನು ಮಾಡುವಂತೆ ಒತ್ತಾಯಿಸಿದರು. ಪ್ರೊ. ಚೌಹಾಣ್ ಇವರು ಶ್ರದ್ಧೆಯ ಹೆಸರಿನಲ್ಲಿ ಹೆಸರಿನಲ್ಲಿ ನಡೆಯುತ್ತಿರುವ ಜಾಗತಿಕ ಹತ್ಯಾಕಾಂಡದ ಬಗ್ಗೆ ಪ್ರಶ್ನಿಸಿದರು, ಸಮಾಜದ ಒಳಿತಿಗಾಗಿ ಕರ್ತವ್ಯ ನಿರ್ವಹಿಸುವ ಅಗತ್ಯವನ್ನು ವ್ಯಕ್ತಪಡಿಸಿದರು.
ಸಂಪಾದಕೀಯ ನಿಲುವು
ಝಾಕಿರ್ ಕಟ್ಟರವಾದಿ ಮತ್ತು ಸೈದ್ಧಾಂತಿಕ ಭಯೋತ್ಪಾದಕನಾಗಿದ್ದಾನೆ. ಹಾಗಾಗಿ ಆತ ಹೆಚ್ಚು ಅಪಾಯಕಾರಿಯಾಗಿದ್ದಾನೆ. ಅಂಥವರ ಮೇಲೆ ಅಂಕುಶವಿಡಲು ಭಾರತಕ್ಕೆ ಕರೆತಂದು ಶಿಕ್ಷಿಸುವ ದೂರದೃಷ್ಟಿ ಭಾರತವೇಕೆ ಧೈರ್ಯ ತೋರುವುದಿಲ್ಲ? |